Advertisement
ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯೆಸ್ ನಷ್ಟು ಬಿಸಿಲು ದಾಖಲಾಗಿದೆ. ಇದರ ನಡುವೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಗ್ರಾಮೀಣ ಭಾಗದಲ್ಲಿರುವ ದೊಡ್ಡ ದೊಡ್ಡ ಮರಗಳು, ಅರಳಿ ಮರದ ಅಶ್ವಥ§ ಕಟ್ಟೆಗಳನ್ನು ತಮ್ಮ ಚುನಾವಣಾ ಪ್ರಚಾರದ ತಾಣಗಳಾಗಿ ಮಾರ್ಪಡಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಮರಗಳ ನೆರಳೆ ಈಗ ಅಭ್ಯರ್ಥಿಗಳ, ಕಾರ್ಯಕರ್ತರ ನೆಚ್ಚಿನ ತಾಣಗಳಾಗಿ ಮಾರ್ಪಟ್ಟಿರುವ ದೃಶ್ಯ ಎಲ್ಲೆಡೆ ಕಾಣ ಸಿಗುತ್ತಿದೆ.
Related Articles
Advertisement
ರೋಡ್ ಶೋಗೂ ಬಿಸಿಲ ಭಯ: ಕೆಲವೆಡೆ ರೋಡ್ ಶೋ ಮೂಲಕ ಪ್ರಚಾರವನ್ನು ಮಾಡುವ ಮಂದಿ ಬಿಸಿಲಿನ ಝಳಕ್ಕೆ ಬೆದರಿದ್ದಾರೆ. ತಮ್ಮ ರೋಡ್ ಶೋನ ವಾಹನಗಳನ್ನು ನೆರಳಿನಲ್ಲಿ ನಿಲ್ಲಿಸಲು ಎಡತಾಕುವ ಸಂದರ್ಭಗಳು ಸೃಷ್ಟಿಯಾಗಿವೆ. ಆದರೆ ರಸ್ತೆ ಬದಿಯಲ್ಲಿ ಮರಗಳ ಸಂಖ್ಯೆ ಕಡಿಮೆ ಇರುವುದರಿಂದ ತಮ್ಮ ಭಾಷಣದ ಅವಧಿಯನ್ನು ಕಿರಿದು ಮಾಡಿ ಆದಷ್ಟು ಬೇಗ ಮುಂದಕ್ಕೆ ಹೋಗುವ ಸಂದರ್ಭಗಳನ್ನು ಸೃಷ್ಟಿಸಿಕೊಂಡಿದ್ದಾರೆ. ರಾಜಕಾರಣಿಗಳು.
ಕುಡಿಯುವ ನೀರು, ಎಳೆನೀರು, ಪಾನೀಯಕ್ಕೆ ಬೇಡಿಕೆ: ಬಿಸಿಲ ಬೇಗೆ ಹೆಚ್ಚಾಗಿರುವುರಿಂದ ಅಭ್ಯರ್ಥಿಗಳು, ಕಾರ್ಯಕರ್ತರು ದಣಿವಾರಿಸಿಕೊಳ್ಳಲು ಬಾಟಲಿ ನೀರನ್ನು ತಮ್ಮ ವಾಹನಗಳ ಜೊತೆಯಲ್ಲೇ ಕೊಂಡೊಯ್ಯುತ್ತಿದ್ದಾರೆ. ಇದೂ ಕೂಡ ಸಾಲದೆ ಸ್ಥಳದಲ್ಲೇ ಸಿಗುವ ತೊಂಬೆ ನಲ್ಲಿಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆ ಇಲ್ಲ.
ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ದೊರೆಯುವ ಎಳೆನೀರು, ತಂಪು ಪಾನೀಯಗಳ ವ್ಯಾಪಾರಿಗಳಿಗೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ. ಮನೆಮನೆ ಪ್ರಚಾರದ ಸಂದರ್ಭಗಳಲ್ಲಿ ಪಾನೀಯಗಳ ಮಾರಾಟ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ ವ್ಯಾಪಾರಿ ಮಹಾದೇವಸ್ವಾಮಿ ಹಾಗೂ ಮಧುಸೂಧನ್.
ಪಕ್ಷ ನಿಷ್ಠೆ ಬಿಡುವಂತಿಲ್ಲ: ಬಿಸಿಲಿಗೆ ಬಂದರೆ ಧರಿಸಿರುವ ಬಟ್ಟೆ ಬೆವರಿನಿಂದ ಒದ್ದೆಯಾಗುತ್ತಿರುವಾಗ ಬಹಿರಂಗ ಪ್ರಚಾರ ಮಾಡುವುದಾದರೂ ಹೇಗೆ? ಜನರ ಮನೆ ಮನೆ ಬಾಗಿಲು ತಟ್ಟುವುದು ತಟ್ಟುವುದು ಹೇಗೆ? ಆದರೂ ಪಕ್ಷ ನಿಷ್ಠೆ ಬಿಡುವಂತಿಲ್ಲ ಏನು ಮಾಡೋಣ?
ಮತದಾನಕ್ಕೆ ಕೇವಲ ಎಂಟು ದಿವಸ ಬಾಕಿ ಇರುವಾಗ ಪ್ರತಿ ಹಳ್ಳಿ ತಲುಪಲು ಪಕ್ಷಗಳು ಪ್ರಚಾರ ಮಾಡಬೇಕಿದೆ. ಆದರೆ ಸೂರ್ಯ ನೆತ್ತಿ ಮೇಲೆ ಬರುತ್ತಿದಂತೆ ಬಿಸಿಲ ಝಳ ಹೆಚ್ಚುತ್ತಿದ್ದು ಅಬ್ಬರದ ಪ್ರಚಾರಕ್ಕೆ ಕಾರ್ಯಕರ್ತರು ರಸ್ತೆಗೆ ಇಳಿಯದಂತಾಗಿದೆ. ಆದರೂ ಕಾರ್ಯಕರ್ತರು ಹಳ್ಳಿಗಳಲ್ಲಿರುವ ಮರಗಳ ಆಶ್ರಯ ಪಡೆಯುತ್ತಿದ್ದಾರೆ.
ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಮರಗಳ ಆಶ್ರಯದಲ್ಲೇ ಹೆಚ್ಚಿನ ಕಾಲ ಕಳೆಯುತ್ತಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರು ಈಗಲಾದರೂ “ವೃಕ್ಷೊà, ರಕ್ಷಿತಿ ರಕ್ಷಿತಃ’ ಎಂಬಂತೆ ಮರಗಳನ್ನು ಬೆಳೆಸುವ, ತಮ್ಮ ಅಧಿಕಾರದ ಅವಧಿಯಲ್ಲಿ ಪರಿಸರ ಕಾಳಜಿ ವಹಿಸಿ ಇದರ ರಕ್ಷಣೆಗೆ ಬೇಕಾದ ಕಾನೂನುಗಳನ್ನು ರೂಪಿಸಲು ಪರಿಸರ ಕಲಿಸಿಕೊಡುತ್ತಿರುವ ಪಾಠವನ್ನು ಮರೆಯದಿರಲಿ.-ಮನು, ಪರಿಸರ ಪ್ರೇಮಿ * ಫೈರೋಜ್‌ಖಾನ್