Advertisement
ಪಂದ್ಯ ಕೊನೆಯ ಓವರ್ ತನಕ ವಿಸ್ತರಿಸಿತಾ ದರೂ ಕೈಯಲ್ಲಿ ಸಾಕಷ್ಟು ವಿಕೆಟ್ ಉಳಿಸಿಕೊಂಡದ್ದು ಹೈದರಾಬಾದ್ ಮೇಲುಗೈಗೆ ಕಾರಣವಾಯಿತು. ಕೇನ್ ವಿಲಿಯಮ್ಸನ್ ಅಜೇಯ 50 ಮತ್ತು ಜಾಸನ್ ಹೋಲ್ಡರ್ ಅಜೇಯ 24 ರನ್ ಮಾಡಿ ತಂಡವನ್ನು ದಡ ಸೇರಿಸಿದರು. ಮನೀಷ್ ಪಾಂಡೆ ಕೂಡ 24 ರನ್ ಹೊಡೆದರು.
ಎಬಿ ಡಿ ವಿ ಲಿಯರ್ ಅವರ ಅರ್ಧ ಶತಕ ವೊಂದೇ ಆರ್‌ಸಿಬಿ ಸರದಿಯ ಆಕರ್ಷಣೆ ಯಾಗಿತ್ತು. ಜಾಸನ್ ಹೋಲ್ಡರ್ ಜಬರ್ದಸ್ತ್ ದಾಳಿ ಸಂಘಟಿಸಿ ಆರಂಭದಲ್ಲೇ ಕೊಹ್ಲಿ ಪಡೆಯ ದೊಡ್ಡ ಮೊತ್ತದ ಯೋಜನೆಯನ್ನು ತಲೆಕೆಳಗಾಗಿಸಿದರು. ಐಪಿಎಲ್‌ನಲ್ಲಿ 61ನೇ ಸಲ ಇನ್ನಿಂಗ್ಸ್ ಆರಂಭಿಸಲು ಇಳಿದ ವಿರಾಟ್ ಕೊಹ್ಲಿ ಇದರಲ್ಲಿ ಯಶಸ್ಸು ಕಾಣಲು ಸಂಪೂರ್ಣ ವಿಫಲರಾದರು. ದ್ವಿತೀಯ ಓವರ್‌ನಲ್ಲೇ ಹೋಲ್ಡರ್ ಆರ್‌ಸಿಬಿ ಕಪ್ತಾನನಿಗೆ ಬಲೆ ಬೀಸಿದರು. ಕೊಹ್ಲಿ ಕೊಡುಗೆ ಆರೇ ರನ್. ಈ ದೊಡ್ಡ ವಿಕೆಟ್ ಪತನದಿಂದ ಆರ್‌ಸಿಬಿ ಆರಂಭದಲ್ಲೇ ತೀವ್ರ ಒತ್ತಡಕ್ಕೆ ಸಿಲುಕಿತು. ಮೊದಲ 3 ಓವರ್‌ಗಳಲ್ಲಿ ಬೌಂಡರಿ ಬರಲೇ ಇಲ್ಲ. ಸಿಕ್ಸ್ ಬೀಳುವಾಗ 10ನೇ ಓವರ್ ಜಾರಿಯಲ್ಲಿತ್ತು. ಇದು ಫಿಂಚ್ ಬ್ಯಾಟಿನಿಂದ ಸಿಡಿಯಿತು. ಇದು ಆರ್‌ಸಿಬಿ ಸರದಿಯ ಏಕೈಕ ಸಿಕ್ಸರ್ ಆಗಿತ್ತು. ತಮ್ಮ ದ್ವಿತೀಯ ಓವರ್‌ನಲ್ಲಿ ಹೋಲ್ಡರ್ ಆರ್‌ಸಿಬಿಗೆ ಮತ್ತೂಂದು ಬರೆ ಎಳೆದರು. ಈ ಋತುವಿನ ಯಶಸ್ವಿ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಅವರನ್ನು ಒಂದೇ ಓಟಕ್ಕೆ ವಾಪಸ್ ಕಳುಹಿಸಿದರು. 15 ರನ್ನಿಗೆ 2 ವಿಕೆಟ್ ಪತನಗೊಂಡಿತು. ಪವರ್ ಪ್ಲೇ ಸ್ಕೋರ್ 32 ರನ್ ಮಾತ್ರ.
Related Articles
Advertisement
11ನೇ ಓವರ್ ತನಕ ನಿಂತ ಫಿಂಚ್ 30 ಎಸೆತಗಳಿಂದ 32 ರನ್ ಮಾಡಿ ನದೀಮ್‌ಗೆ ವಿಕೆಟ್ ಒಪ್ಪಿಸಿದರು. ಅದೇ ಓವರಿನಲ್ಲಿ ಮೊಯಿನ್ ಅಲಿ “ಫ್ರೀ ಹಿಟ್’ ಹೊಡೆತದ ವೇಳೆ ರನೌಟಾಗಿ ನಿರ್ಗಮಿಸಿದರು.
ಒಂದೆಡೆ ಎಬಿಡಿ ಕ್ರೀಸ್ ಆಕ್ರಮಿಸಿಕೊಂಡಿದ್ದರೂ ಎಂದಿನ ಹೊಡಿಬಡಿ ಆಟಕ್ಕೆ ಕುದುರಿಕೊಳ್ಳಲು ಬಹಳ ವೇಳೆ ತೆಗೆದುಕೊಂಡರು. 43 ಎಸೆತಗಳಿಂದ 56 ರನ್ (5 ಬೌಂಡರಿ) ಬಾರಿಸಿ ಆರ್‌ಸಿಬಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಫಿಂಚ್, ಎಬಿಡಿ ಹೊರತುಪಡಿಸಿದರೆ ಅಗ್ರ ಸರದಿಯ ಆಟ ಗಾರರ್ಯಾರೂ ಎರಡಂಕೆಯ ಗಡಿ ದಾಟಲಿಲ್ಲ. ಇವರಿಬ್ಬರನ್ನು ಬಿಟ್ಟರೆ 10 ರನ್ ಮಾಡಿದ ಸಿರಾಜ್ ಅವರದೇ ಅನಂತರದ ಹೆಚ್ಚಿನ ಗಳಿಕೆ.
ಆರ್‌ಸಿಬಿ ತುಂಬ ಸ್ಪಿನ್ನರ್ಆರ್ಸಿಬಿಯಲ್ಲಿ 4 ಬದಲಾವಣೆ ಕಂಡುಬಂತು. ಗಾಯಾಳು ಕ್ರಿಸ್ ಮಾರಿಸ್, ಜೋಶ್ ಫಿಲಿಪ್, ಇಸುರು ಉದಾನ ಮತ್ತು ಶಾಬಾಜ್ ಅಹ್ಮದ್ ಅವರನ್ನು ಹೊರಗಿರಿಸಲಾಯಿತು. ಇವರ ಬದಲು ಆರನ್ ಫಿಂಚ್, ಆ್ಯಡಂ ಝಂಪ, ಮೊಯಿನ್ ಅಲಿ, ನವದೀಪ್ ಸೈನಿ ಆಡಲಿಳಿದರು. ತಂಡದಲ್ಲಿ ಬರೋಬ್ಬರಿ ನಾಲ್ವರು ಸ್ಪಿನ್ನರ್ ಇದ್ದರು. ಕಳೆದ ಕೆಲವು ಪಂದ್ಯಗಳಲ್ಲಿ ಆರಂಭಿಕನಾಗಿ ಮಿಂಚಿದ ಹೈದರಾಬಾದ್‌ನ ವೃದ್ಧಿಮಾನ್ ಸಾಹಾ ಕೂಡ ಗಾಯಾಳು ಯಾದಿಯಲ್ಲಿ ಕಾಣಿಸಿಕೊಂಡರು. ಇವರ ಬದಲು ಬಂದ ಶ್ರೀವತ್ಸ ಗೋಸ್ವಾಮಿ ಕೀಪಿಂಗ್ ನಡೆಸಿದರು. ಸ್ಕೋರ್ ಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ಸಿ ಗೋಸ್ವಾಮಿ ಬಿ ಹೋಲ್ಡರ್ 6
ದೇವದತ್ತ ಪಡಿಕ್ಕಲ್ ಸಿ ಗರ್ಗ್ ಬಿ ಹೋಲ್ಡರ್ 1
ಆರನ್ ಫಿಂಚ್ ಸಿ ಸಮದ್ ಬಿ ನದೀಮ್ 32
ಎಬಿ ಡಿ ವಿಲಿಯರ್ ಬಿ ನಟರಾಜನ್ 56
ಮೊಯಿನ್ ಅಲಿ ರನೌಟ್ 0
ಶಿವಂ ದುಬೆ ಸಿ ವಾರ್ನರ್ ಬಿ ಹೋಲ್ಡರ್ 8
ವಾಷಿಂಗ್ಟನ್ ಸಿ ಸಮದ್ ಬಿ ನಟರಾಜನ್ 5
ನವದೀಪ್ ಸೈನಿ ಔಟಾಗದೆ 9
ಮೊಹಮ್ಮದ್ ಸಿರಾಜ್ ಔಟಾಗದೆ 10 ಇತರ 4
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 131
ವಿಕೆಟ್ ಪತನ: 1-7, 2-15, 3-56, 4-62, 5-99, 6-111, 7-113. ಬೌಲಿಂಗ್
ಸಂದೀಪ್ ಶರ್ಮ 4-0-21-0
ಜಾಸನ್ ಹೋಲ್ಡರ್ 4-0-25-3
ಟಿ. ನಟರಾಜನ್ 4-0-33-2
ಶಾಬಾಜ್ ನದೀಮ್ 4-0-30-1
ರಶೀದ್ ಖಾನ್ 4-0-22-0 ಸನ್‌ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ಸಿ ಎಬಿಡಿ ಬಿ ಸಿರಾಜ್ 17
ಗೋಸ್ವಾಮಿ ಸಿ ಎಬಿಡಿ ಬಿ ಸಿರಾಜ್ 0
ಮನೀಷ್ ಪಾಂಡೆ ಸಿ ಎಬಿಡಿ ಬಿ ಝಾಂಪ 24
ಕೇನ್ ವಿಲಿಯಮ್ಸನ್ ಔಟಾಗದೆ 50
ಪ್ರಿಯಂ ಗರ್ಗ್ ಸಿ ಝಂಪ ಬಿ ಚಹಲ್ 7
ಜಾಸನ್ ಹೋಲ್ಡರ್ ಔಟಾಗದೆ 24 ಇತರ 10
ಒಟ್ಟು (19.4 ಓವರ್‌ಗಳಲ್ಲಿ 4 ವಿಕೆಟಿಗೆ) 132
ವಿಕೆಟ್ ಪತನ: 1-2, 2-43, 3-55, 4-67. ಬೌಲಿಂಗ್
ಮೊಹಮ್ಮದ್ ಸಿರಾಜ್ 4-0-28-2
ನವದೀಪ್ ಸೈನಿ 3.4-0-31-0
ವಾಷಿಂಗ್ಟನ್ ಸುಂದರ್ 2-0-21-0
ಆ್ಯಡಂ ಝಂಪ 4-0-12-1
ಯಜುವೇಂದ್ರ ಚಹಲ್ 4-0-24-1
ಮೊಯಿನ್ ಅಲಿ 1-0-4-0
ಶಿವಂ ದುಬೆ 1-0-7-0