Advertisement

ಐಪಿಎಲ್‌: ಸನ್‌ರೈಸರ್ ಹೈದರಾಬಾದ್‌ಗೆ ಗೆಲುವಿನ ಸಮಾಧಾನ

11:37 PM Oct 06, 2021 | Team Udayavani |

ಅಬುಧಾಬಿ: ಈಗಾಗಲೇ ದಾಖಲೆ ಸಂಖ್ಯೆಯ ಸೋಲನುಭವಿಸಿ ಐಪಿಎಲ್‌ನಿಂದ ನಿರ್ಗಮಿಸಿರುವ ಸನ್‌ರೈಸರ್ ಹೈದರಾಬಾದ್‌ ಬುಧವಾರದ ಪಂದ್ಯದಲ್ಲಿ ಆರ್‌ಸಿಬಿಗೆ ಹೊಡೆತವಿಕ್ಕಿದೆ. 4 ರನ್‌ ಜಯದೊಂದಿಗೆ ಒಂದಿಷ್ಟು ಸಮಾಧಾನಪಟ್ಟಿದೆ. ಇದರೊಂದಿಗೆ ಆರ್‌ಸಿಬಿಯ ದ್ವಿತೀಯ ಸ್ಥಾನದ ಯೋಜನೆ ವಿಫಲಗೊಂಡಿದೆ.

Advertisement

ಹೈದರಾಬಾದ್‌ 7 ವಿಕೆಟಿಗೆ 141 ರನ್‌ ಗಳಿಸಿದರೆ, ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟಿಗೆ 137 ರನ್‌ ಬಾರಿಸಿ ಶರಣಾಯಿತು. ಅಂತಿಮ ಎಸೆತದಲ್ಲಿ ಸಿಕ್ಸರ್‌ ಎತ್ತುವ ಪ್ರಯತ್ನದಲ್ಲಿ ಎಬಿಡಿ ವಿಫಲರಾಗುವುದರೊಂದಿಗೆ ಆರ್‌ಸಿಬಿ 5ನೇ ಸೋಲನ್ನೆದುರಿಸಿತು.

ಚೇಸಿಂಗ್‌ ಹಾದಿಯಲ್ಲಿ ಕೊಹ್ಲಿ, ಕ್ರಿಸ್ಟಿಯನ್‌ ಮತ್ತು ಭರತ್‌ ವಿಕೆಟ್‌ ಬೇಗನೇ ಉರುಳಿತು. ಆದರೆ ಪಡಿಕ್ಕಲ್‌ ಮತ್ತು ಮ್ಯಾಕ್ಸ್‌ವೆಲ್‌ ಸೇರಿಕೊಂಡು ತಂಡವನ್ನು ಮೇಲೆತ್ತಿದರು. ಮತ್ತೊಂದು ಸೊಗಸಾದ ಇನ್ನಿಂಗ್ಸ್‌ ಆಡಿದ ಮ್ಯಾಕ್ಸಿ ಸರ್ವಾಧಿಕ 40, ಪಡಿಕ್ಕಲ್‌ 17ನೇ ಓವರ್‌ ತನಕ ನಿಂತು 41 ರನ್‌ ಕೊಡುಗೆ ಸಲ್ಲಿಸಿದರು. ಆದರೆ ಕೊನೆಯ ಹಂತದ ಒತ್ತಡವನ್ನು ನಿಭಾಯಿಸಲು ಆರ್‌ಸಿಬಿಗೆ ಸಾಧ್ಯವಾಗಲಿಲ್ಲ.

ಹೈದರಾಬಾದ್‌ ತನ್ನ ಓಪನಿಂಗ್‌ ಕಾಂಬಿನೇಶನ್‌ನಲ್ಲಿ ಬದಲಾವಣೆ ಮಾಡಿಕೊಂಡಿತು. ವೃದ್ಧಿಮಾನ್‌ ಸಾಹಾ ಬದಲು ಅಭಿಷೇಕ್‌ ಶರ್ಮ ಇನ್ನಿಂಗ್ಸ್‌ ಆರಂಭಿಸಿದರು. ವೇಗಿ ಜಾರ್ಜ್‌ ಗಾರ್ಟನ್‌ ಅವರ ದ್ವಿತೀಯ ಓವರ್‌ನಲ್ಲಿ ಬೌಂಡರಿ, ಸಿಕ್ಸರ್‌ ಬಾರಿಸಿ ಅಬ್ಬರಿಸಿದರು. ಆದರೆ 5ನೇ ಎಸೆತದಲ್ಲೇ ಮ್ಯಾಕ್ಸ್‌ ವೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಜಾಸನ್‌ ರಾಯ್‌ ಮತ್ತು ಕೇನ್‌ ವಿಲಿಯಮ್ಸನ್‌ ಭರವಸೆಯ ಜತೆಯಾಟವೊಂದನ್ನು ನಿಭಾಯಿಸಿದರು. ರನ್‌ ಸರಾಗವಾಗಿ ಹರಿದುಬರತೊಡಗಿತು. 10 ಓವರ್‌ ಅಂತ್ಯಕ್ಕೆ ಹೈದರಾಬಾದ್‌ ಒಂದೇ ವಿಕೆಟಿಗೆ 76 ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ದ್ವಿತೀಯ ವಿಕೆಟಿಗೆ 70 ರನ್‌ ಒಟ್ಟುಗೂಡಿತು. ಹರ್ಷಲ್‌ ಪಟೇಲ್‌ 12ನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸಿದರು. 31 ರನ್‌ ಮಾಡಿದ ವಿಲಿಯಮ್ಸನ್‌ ಬೌಲ್ಡ್‌ ಆದರು.

Advertisement

ಇದನ್ನೂ ಓದಿ:ಅಂತಾರಾಷ್ಟ್ರೀಯ ಹಾಕಿ ಪ್ರಶಸ್ತಿ ಬಾಚಿಕೊಂಡ ಭಾರತೀಯರು

ಇಲ್ಲಿಂದ ಮುಂದೆ ಆರ್‌ಸಿಬಿ ಬೌಲಿಂಗ್‌ ಹರಿತಗೊಳ್ಳತೊಡಗಿತು. ಪ್ರಿಯಂ ಗರ್ಗ್‌, ಜಾಸನ್‌ ರಾಯ್‌, ಅಬ್ದುಲ್‌ ಸಮದ್‌ ಎರಡೇ ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಗರ್ಗ್‌ (15) ಮತ್ತು ರಾಯ್‌ ಅವರನ್ನು ಒಂದೇ ಓವರ್‌ನಲ್ಲಿ ಕೆಡವಿದ ಡೇನಿಯಲ್‌ ಕ್ರಿಸ್ಟಿಯನ್‌ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದರು. ಸಮದ್‌ ವಿಕೆಟ್‌ ಚಹಲ್‌ ಪಾಲಾಯಿತು. 38 ಎಸೆತಗಳಿಂದ 44 ರನ್‌ ಮಾಡಿದ ರಾಯ್‌ ಹೈದರಾಬಾದ್‌ ಸರದಿಯ ಟಾಪ್‌ ಸ್ಕೋರರ್‌.

ಡೆತ್‌ ಓವರ್‌ಗಳಲ್ಲಿ ಜತೆಗೂಡಿದ ಸಾಹಾ-ಜಾಸನ್‌ ಹೋಲ್ಡರ್‌ ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆ ಹುಸಿಯಾಯಿತು. ಹರ್ಷಲ್‌ ಪಟೇಲ್‌ ಮತ್ತು ಕ್ರಿಸ್ಟಿಯನ್‌ ಪರಿಣಾಮಕಾರಿ ಬೌಲಿಂಗ್‌ ನಡೆಸಿದರು.

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌
ಜಾಸನ್‌ ರಾಯ್‌ ಸಿ ಮತ್ತು ಬಿ ಕ್ರಿಸ್ಟಿಯನ್‌ 44
ಅಭಿಷೇಕ್‌ ಶರ್ಮ ಸಿ ಮಾಕ್ಸ್‌ವೆಲ್‌ ಬಿ ಗಾರ್ಟನ್‌ 13
ವಿಲಿಯಮ್ಸನ್‌ ಬಿ ಹರ್ಷಲ್‌ 31
ಪ್ರಿಯಂ ಗರ್ಗ್‌ ಸಿ ವಿಲಿಯರ್ ಬಿ ಕ್ರಿಸ್ಟಿಯನ್‌ 15
ಅಬ್ದುಲ್‌ ಸಮದ್‌ ಎಲ್‌ಬಿಡಬ್ಲ್ಯು ಬಿ ಚಹಲ್‌ 1
ವೃದ್ಧಿಮಾನ್‌ ಸಿ ವಿಲಿಯರ್ ಬಿ ಹರ್ಷಲ್‌ 10
ಹೋಲ್ಡರ್‌ ಸಿ ಕ್ರಿಸ್ಟಿಯನ್‌ ಬಿ ಹರ್ಷಲ್‌ 16
ರಶೀದ್‌ ಖಾನ್‌ ಔಟಾಗದೆ 7
ಇತರ 4
ಒಟ್ಟು (7 ವಿಕೆಟಿಗೆ) 141
ವಿಕೆಟ್‌ ಪತನ:1-14, 2-84, 3-105, 4-107, 5-107, 6-124, 7-141.
ಬೌಲಿಂಗ್‌;ಮೊಹಮ್ಮದ್‌ ಸಿರಾಜ್‌ 3-0-17-0
ಜಾರ್ಜ್‌ ಗಾರ್ಟನ್‌ 2-0-29-1
ಶಾಬಾಜ್‌ ಅಹ್ಮದ್‌ 4-0-21-0
ಹರ್ಷಲ್‌ ಪಟೇಲ್‌ 4-0-33-3
ಯಜುವೇಂದ್ರ ಚಹಲ್‌ 4-0-27-1
ಡೇನಿಯಲ್‌ ಕ್ರಿಸ್ಟಿಯನ್‌ 3-0-14-2

ರಾಯಲ್‌ ಚಾಲೆಂಜರ್ ಬೆಂಗಳೂರು
ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಭುವನೇಶ್ವರ್‌ 5
ಪಡಿಕ್ಕಲ್‌ ಸಿ ಸಮದ್‌ ಬಿ ರಶೀದ್‌ 41
ಕ್ರಿಸ್ಟಿಯನ್‌ ಸಿ ವಿಲಿಯಮ್ಸನ್‌ ಬಿ ಕೌಲ್‌ 1
ಎಸ್‌. ಭರತ್‌ ಸಿ ಸಾಹಾ ಬಿ ಉಮ್ರಾನ್‌ 12
ಗ್ಲೆನ್‌ ಮ್ಯಾಕ್ಸ್‌ವೆಲ್‌ ರನೌಟ್‌ 40
ಡಿ ವಿಲಿಯರ್ ಔಟಾಗದೆ 19
ಶಾಬಾಜ್‌ ಸಿ ವಿಲಿಯಮ್ಸನ್‌ ಬಿ ಹೋಲ್ಡರ್‌ 14
ಜಾರ್ಜ್‌ ಗಾರ್ಟನ್‌ ಔಟಾಗದೆ 2
ಇತರ 3
ಒಟ್ಟು (6 ವಿಕೆಟಿಗೆ) 137
ವಿಕೆಟ್‌ ಪತನ:1-6, 2-18, 3-38, 4-92, 5-109, 6-128.
ಬೌಲಿಂಗ್‌;ಭುವನೇಶ್ವರ್‌ ಕುಮಾರ್‌ 4-0-25-1
ಜಾಸನ್‌ ಹೋಲ್ಡರ್‌ 4-0-27-1
ಸಿದ್ಧಾರ್ಥ್ ಕೌಲ್‌ 4-1-24-1
ಉಮ್ರಾನ್‌ ಮಲಿಕ್‌ 4-0-21-1
ರಶೀದ್‌ ಖಾನ್‌ 4-0-39-1

Advertisement

Udayavani is now on Telegram. Click here to join our channel and stay updated with the latest news.

Next