ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ನೇತೃತ್ವ ದಲ್ಲಿ ಕೋಡಿಯ ಕಡಲ ಕಿನಾರೆಯಲ್ಲಿ ಸಂಭ್ರಮದಿಂದ ರೋಟರಿ ಮತ್ತು ವಿಶ್ವ ತಿಳಿವಳಿಕೆಯ ದಿನಾಚರಣೆ ಜರಗಿತು.
ಸತ್ಯ, ಶಾಂತಿ ಮತ್ತು ತ್ಯಾಗದ ಸಂಕೇತ ವಾದ ರಾಷ್ಟ್ರದ ತ್ರಿವರ್ಣ ಧ್ವಜ ಮೂರು ಧರ್ಮದ ಪ್ರಮುಖರು ಒಟ್ಟಾಗಿ ಬಿಡಿ ಸುವುದರ ಮೂಲಕ ಸಹಬಾಳ್ವೆಯ ಸಂಕೇತವೆಂಬಂತೆ ವಿಶಿಷ್ಟ ರೀತಿಯಲ್ಲಿ ಉದ್ಧಾಟಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತ್ಯಾಧಿಕಾರಿ ಡಾ| ಎಚ್.ವಿ. ನರಸಿಂಹ ಮೂರ್ತಿ ಸಾಮಾಜಿಕ ಕಾರ್ಯಕರ್ತ ಎಲ್. ಎನ್. ಹಾಜಿ ಇಬ್ರಾಹಿಂ ಸಾಹೇಬ್ ಕೋಟ, ಕುಂದಾಪುರದ ಚರ್ಚ್‌ನ ಧರ್ಮ ಗುರುಗಳಾದ ಅತಿ ವಂದನೀಯ ಫಾದರ್ ಅನಿಲ್ ಡಿ’ಸೋಜಾ ಅವರು ಮುಖ್ಯ ಅತಿಥಿಗಳಾಗಿದ್ದರು.
ಸರ್ವೇ ಜನಾಃ ಸುಖೀನೋ ಭವಂತು, ಸರ್ವ ಧರ್ಮಗಳ ಶಾಂತಿಯ ನೆಲೆ ವೀಡು ನಮ್ಮ ಭಾರತ ಎಂದು ಎಚ್. ವಿ. ನರಸಿಂಹ ಮೂರ್ತಿ ಅವರು ಹೇಳಿದರು. ದೇವನೊಬ್ಬನೆ, ನಾಮ ಹಲವು ಸೌಹಾರ್ದದಲ್ಲಿ ಜೀವನ ಸಾಗಿಸೋಣ ಎಂದು ಹಾಜಿ ಇಬ್ರಾಹಿಂ ಸಾಹೇಬ್ ಕೋಟ ಹೇಳಿದರು.
ಶಾಂತಿ ಸೌಹಾರ್ದದಿಂದ ಬಾಳಲು ಪರಧರ್ಮ ಸಹಿಷ್ಣುತೆ ಅತೀ ಅಗತ್ಯ ಎಂದು ಅತಿ ವಂ| ಫಾ| ಅನಿಲ್ ಡಿ’ಸೋಜಾ ನುಡಿದರು. ರೋಟರಿ ಸನ್‌ರೈಸ್ ಅಧ್ಯಕ್ಷ ಕೆ. ನರಸಿಂಹ ಹೊಳ್ಳ ಅವರು ಸಭಾಧ್ಯಕ್ಷತೆಯನ್ನು ವಹಿಸಿ ದ್ದರು. ವಲಯ ಒಂದರ ಎಲ್ಲ ರೋಟರಿ ಕ್ಲಬ್ ಅಧ್ಯಕ್ಷರು ಉಪಸ್ಥಿತರಿದ್ದರು. ರೋಟರಿ ಕುಂದಾಪುರ ಅಧ್ಯಕ್ಷ ಉದಯ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ರೋಟರಿ ಸಿದ್ಧಾಪುರ ಅಧ್ಯಕ್ಷ ಪ್ರದೀಪ ಯಡಿಯಾಳ್, ರೋಟರಿ ಮಿಡ್‌ಟೌನ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಲ್.ಜೆ. ಫೆರ್ನಾಂಡೀಸ್ ಅತಿಥಿಗಳನ್ನು ಪರಿಚಯಿಸಿದರು. ಬೈಂದೂರು ರೋಟರಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಮತ್ತು ಕುಂದಾಪುರ ದಕ್ಷಿಣ ರೋಟರಿ ಅಧ್ಯಕ್ಷ ಒಜಲೀನ್ ರೆಬೆಲ್ಲೊ ಸ್ಮರಣಿಕೆ ನೀಡಿದರು. ವಲಯ ಒಂದರ ಆಸಿಸ್ಟಂಟ್ ಗವರ್ನರ್ ಮಧುಕರ ಹೆಗ್ಡೆ, ವಲಯ ಸೇನಾನಿಗಳಾದ ಹಾಜಿ ಅಬೂಶೇಖ್ ಸಾಹೇಬ್, ಡಾ| ರವಿಕಿರಣ ಸನ್‌ರೈಸ್ ಕಾರ್ಯದರ್ಶಿ ನಾಗೇಶ್ ನಾವುಡ ಉಪಸ್ಥಿತರಿದ್ದರು. ದಿನಕರ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ದಂಡಪಾಣೆ ಸದಾನಂದ ಉಡುಪ, ಕೆ. ಎಸ್. ಮಂಜುನಾಥ, ಉಲ್ಲಾಸ ಕ್ರಾಸ್ತಾ, ಪ್ರಾಪ್ತಿ ಹೆಗ್ಡೆ ಸಹಕರಿಸಿದರು. ಗಂಗೊಳ್ಳಿ ರೋಟರಿ ಅಧ್ಯಕ್ಷ ರಾಘವೇಂದ್ರ ಭಂಡಾ ರ್ಕಾರ್ ವಂದಿಸಿದರು.