Advertisement

ಕೆಕೆಆರ್‌ಗೆ 48 ರನ್‌ ಸೋಲು; ಡೇವಿಡ್‌ ವಾರ್ನರ್‌ ಭರ್ಜರಿ ಶತಕ

11:37 AM May 01, 2017 | Team Udayavani |

ಹೈದರಾಬಾದ್‌: ಆಲ್‌ರೌಂಡ್‌ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾ ಬಾದ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು 48 ರನ್ನುಗಳಿಂದ ಸೋಲಿಸಿದೆ.

Advertisement

ನಾಯಕ ಡೇವಿಡ್‌ ವಾರ್ನರ್‌ ಅವರ ಅಮೋಘ ಶತಕದಿಂದಾಗಿ ಹೈದರಾಬಾದ್‌ ತಂಡವು 3 ವಿಕೆಟಿಗೆ 209 ರನ್ನುಗಳ ಬೃಹತ್‌ ಮೊತ್ತ ಪೇರಿಸಿ ದರೆ ಕೆಕೆಆರ್‌ ತಂಡವು 7 ವಿಕೆಟಿಗೆ 161 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದ ನಾಯಕ ಗೌತಮ್‌ ಗಂಭೀರ್‌ ಬೇಗನೇ ಔಟಾಗುತ್ತಲೇ ಕೆಕೆಆರ್‌ನ ಕುಸಿತ ಆರಂಭಗೊಂಡಿತು. ರಾಬಿನ್‌ ಉತ್ತಪ್ಪ ಮತ್ತು ಮನೀಷ್‌ ಪಾಂಡೆ ಬಿರುಸಿನ ಆಟವಾಡಿದರೂ ದೊಡ್ಡ ಜತೆಯಾಟ ಆಡಲು ವಿಫ‌ಲದರು. ಈ ನಡುವೆ ಮಳೆಯಿಂದ ಅರ್ಧತಾಸು ಸ್ಥಗಿತಗೊಂಡಿತ್ತು.

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹೈದರಾಬಾದ್‌ ತಂಡವು ಆರಂಭದಿಂದಲೇ ಭರ್ಜರಿ ಆಟಕ್ಕೆ ಇಳಿದಿತ್ತು. ಬೃಹತ್‌ ಮೊತ್ತ ಪೇರಿಸುವ ಉದ್ದೇಶ ಇಟ್ಟುಕೊಂಡು ಆಡಿದ ವಾರ್ನರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಅಮೋಘ ಶತಕ ಸಿಡಿಸುವ ಮೂಲಕ ಪಂದ್ಯದ ಹೀರೋ ಎನಿಸಿಕೊಂಡರು.

ಕೆಕೆಆರ್‌ ದಾಳಿಯನ್ನು ಪುಡಿಗಟ್ಟಿದ ವಾರ್ನರ್‌ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ್ದರು. ಆಗ ಧವನ್‌ ಮೊತ್ತ ಇನ್ನೂ ಎರಡಂಕೆ ತಲುಪಿರಲಿಲ್ಲ. 43 ಎಸೆತಗಳಲ್ಲಿ ಶತಕ ಸಿಡಿಸಿದ ಅವರು ಒಟ್ಟಾರೆ 59 ಎಸೆತ ಎದುರಿಸಿ 10 ಬೌಂಡರಿ ಮತ್ತು 8 ಸಿಕ್ಸರ್‌ ನೆರವಿನಿಂದ 126 ರನ್‌ ಗಳಿಸಿದರು. ಮೊದಲ ವಿಕೆಟಿಗೆ ಧವನ್‌ ಜತೆ 139 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಅವರು ತಂಡ ಬೃಹತ್‌ ಮೊತ್ತ ಪೇರಿಸುವ ಸೂಚನೆಯಿತ್ತರು.

Advertisement

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಡೇವಿಡ್‌ ವಾರ್ನರ್‌    ಸಿ ಗಂಭೀರ್‌ ಬಿ ವೋಕ್ಸ್‌    126
ಶಿಖರ್‌ ಧವನ್‌    ರನೌಟ್‌    29
ಕೇನ್‌ ವಿಲಿಯಮ್ಸನ್‌    ರನೌಟ್‌    40
ಯುವರಾಜ್‌ ಸಿಂಗ್‌    ಔಟಾಗದೆ    6
ಇತರ:        8
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ)    209
ವಿಕೆಟ್‌ ಪತನ: 1-130, 2-171, 3-209
ಬೌಲಿಂಗ್‌: ನಥನ್‌ ಕೌಲ್ಟರ್‌ ನೈಲ್‌    4-0-34-0
ಉಮೇಶ್‌ ಯಾದವ್‌        4-0-30-0
ಕ್ರಿಸ್‌ ವೋಕ್ಸ್‌        4-0-46-1
ಯೂಸುಫ್ ಪಠಾಣ್‌        1-0-17-0
ಸುನೀಲ್‌ ನಾರಾಯಣ್‌    3-0-37-0
ಕುಲದೀಪ್‌ ಯಾದವ್‌    4-0-43-0

ಕೋಲ್ಕತಾ ನೈಟ್‌ರೈಡರ್
ಸುನೀಲ್‌ ನಾರಾಯಣ್‌    ಸಿ ವಾರ್ನರ್‌ ಬಿ ಸಿರಾಜ್‌    1
ಗೌತಮ್‌ ಗಂಭೀರ್‌    ಸಿ ರಶೀದ್‌ ಬಿ ಕೌಲ್‌    11
ರಾಬಿನ್‌ ಉತ್ತಪ್ಪ    ಸಿ ವಾರ್ನರ್‌ ಬಿ ಸಿರಾಜ್‌    53
ಮನೀಷ್‌ ಪಾಂಡೆ    ಸಿ ಮತ್ತು ಬಿ ಕುಮಾರ್‌    39
ಯೂಸುಫ್ ಪಠಾಣ್‌    ಸಿ ಕೌಲ್‌ ಬಿ ರಶೀದ್‌    12
ಶೆಲ್ಡನ್‌ ಜ್ಯಾಕ್ಸನ್‌    ಸಿ ರಶೀದ್‌ ಬಿ ಕುಮಾರ್‌    16
ಗ್ರ್ಯಾಂಡ್‌ಹೋಮ್‌    ಸಿ ರಶೀದ್‌ ಬಿ ಕೌಲ್‌    18
ಕ್ರಿಸ್‌ ವೋಕ್ಸ್‌    ಔಟಾಗದೆ    6
ಇತರ:        5
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    161
ವಿಕೆಟ್‌ ಪತನ: 1-9, 2-12, 3-90. 4-109, 5-130, 6-154, 7-161
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌    4-0-29-2
ಮೊಹಮ್ಮದ್‌ ಸಿರಾಜ್‌        4-0-26-2
ಸಿದ್ಧಾರ್ಥ್ ಕೌಲ್‌        4-0-26-2
ಮೊಸಸ್‌ ಹೆನ್ರಿಕ್ಸ್‌        3-0-31-0
ರಶೀದ್‌ ಖಾನ್‌        4-0-30-1
ಬಿಪುಲ್‌ ಶರ್ಮ        1-0-10-0

ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್‌

Advertisement

Udayavani is now on Telegram. Click here to join our channel and stay updated with the latest news.

Next