Advertisement

ಸನ್ನಿ ಆಡುತಾಳ ರಮ್ಮಿ !

06:00 AM Nov 30, 2018 | |

ಸನ್ನಿ ಲಿಯೋನ್‌ ಜತೆಗೆ ರಮ್ಮಿ ಆಡುವ ಆಶೆಯೇನಾದರೂ ಇದೆಯೇ? ಇದ್ದರೆ ನಿಮ್ಮ ಆಶೆ ಶೀಘ್ರವೇ ಈಡೇರಲಿದೆ. ತನ್ನದೇ ಬ್ರಾಂಡ್‌ನ‌ ಉಡುಪು, ಕಾಸ್ಮೆಟಿಕ್ಸ್‌ , ಸಿನೆಮಾ ನಿರ್ಮಾಣ ಕಂಪೆನಿ- ಹೀಗೆ ಹಲವಾರು ವ್ಯಾಪಾರ-ವಹಿವಾಟುಗಳನ್ನು ಪ್ರಾರಂಭಿಸಿ ಉದ್ಯಮಿಯಾಗಿ ಬದಲಾಗಿರುವ ಸನ್ನಿ ಲಿಯೋನ್‌ ಈಗ ರಮ್ಮಿ ಆಟಕ್ಕಿಳಿದಿದ್ದಾಳೆ. 

Advertisement

ಇದೊಂದು ಆನ್‌ಲೈನ್‌ನಲ್ಲಿ ಆಡುವ ರಮ್ಮಿ ಆಟ. ಕೊನೆಯ ಸುತ್ತಿನಲ್ಲಿ ಗೆದ್ದವರಿಗೆ ಸ್ವತಃ ಸನ್ನಿ ಲಿಯೋನ್‌ ಜತೆಗೆ ಆಡುವ ಅವಕಾಶ ಸಿಗಲಿದೆ. ಹಾಗೆಂದು ಸನ್ನಿ ಈ ರಮ್ಮಿ ಆಟವನ್ನು ಹಣ ಗಳಿಸುವ ಉದ್ದೇಶದಿಂದ ಆಡುತ್ತಿಲ್ಲ. ಇದು ಅಭಿಮಾನಿಗಳನ್ನು ಭೇಟಿಯಾಗಲು ಸಿಗುವ ಅವಕಾಶ ಎಂದು ಭಾವಿಸಿದ್ದಾಳೆ. ಹೀಗಾಗಿ, ಆನ್‌ಲೈನ್‌ ಗೇಮಿಂಗ್‌ ಕಂಪೆನಿ ಈ ಆಫ‌ರ್‌ ಕೊಟ್ಟಾಗ ಸಂತೋಷದಿಂದ ಒಪ್ಪಿಕೊಂಡಿದ್ದಾಳಂತೆ. 

ಬಾಲಿವುಡ್‌ಗೆ ಬಿರುಗಾಳಿಯಂತೆ ಅಪ್ಪಳಿಸಿದ್ದ ಸನ್ನಿ ಲಿಯೋನ್‌ ಹವಾ ಈಗ ಕಡಿಮೆಯಾಗತೊಡಗಿದೆ. ಸನ್ನಿ ಬ್ರಾಂಡ್‌ನ‌ ಸಿನೆಮಾಗಳು ಈಗ ಚಿತ್ರಮಂದಿರಗಳಲ್ಲಿ ಓಡುತ್ತಿಲ್ಲ. ಅಂತೆಯೇ ಐಟಮ್‌ ಡ್ಯಾನ್ಸ್‌ ಗಳು ಕೂಡ ಹಿಂದಿನಂತೆ ರೋಮಾಂಚನಗೊಳಿಸುತ್ತಿಲ್ಲ. ಹೀಗೆ, ಚಿತ್ರರಂಗದಲ್ಲಿ ತನ್ನ ಬೇಡಿಕೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎನ್ನುವ ಸೂಚನೆ ಸಿಕ್ಕಿದ ಕೂಡಲೇ ಸನ್ನಿ ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಜಾಣ ನಿರ್ಧಾರ ಕೈಗೊಂಡಿದ್ದಾಳೆ. ಇದರ ಅಂಗವಾಗಿ ಈಗಾಗಲೇ ಸನ್ನಿ ಬ್ರಾಂಡ್‌ನ‌ಲ್ಲಿ ಲಿಪ್‌ಸ್ಟಿಕ್‌, ನೇಲ್‌ ಪಾಲಿಶ್‌ ಎಂದು ಹೆಂಗಸರು ಬಳಸುವ ಕಾಸ್ಮೆಟಿಕ್‌ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ.

ಇದೇ ವೇಳೆ ಸನ್ನಿ ಒಂದು ಸಿನೆಮಾ ನಿರ್ಮಾಣ ಕಂಪೆನಿಯನ್ನೂ ಪ್ರಾರಂಭಿಸಿದ್ದಾಳೆ. ಸನ್ನಿ ಹೆಸರಿನಲ್ಲೇ ಹೆಣ್ಣು ಮಕ್ಕಳ ಉಡುಪುಗಳನ್ನು ಪ್ರಾರಂಭಿಸುವ ಸಿದ್ಧತೆಯೂ ನಡೆದಿದೆ. ಇದೀಗ ಹೊಸ ಸೇರ್ಪಡೆ ರಮ್ಮಿ ಆಟ. 

Advertisement

Udayavani is now on Telegram. Click here to join our channel and stay updated with the latest news.

Next