Advertisement

ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ

03:08 PM May 13, 2021 | Team Udayavani |

ಬಾಲಿವುಡ್​ ನಟಿ ಸನ್ನಿ ಲಿಯೋನ್​  ಇಂದು 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು ಸಿನಿರಂಗದ ಜೊತೆ ಜೊತೆಗೆ ಸಾಮಾಜಿಕ ಕಾಳಜಿಯನ್ನು ಹೊತ್ತಿದ್ದಾರೆ. ಸದ್ಯ ಕೋವಿಡ್ ಸಂಕಷ್ಟ ದೇಶವನ್ನೇ ನಲುಗಿಸುತ್ತಿರುವಾಗ ನಟಿ ಸನ್ನಿ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

Advertisement

‘ಪೀಪಲ್​ ಪಾರ್​ ದಿ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಅನಿಮಲ್’​ ಸಂಸ್ಥೆಯ ಜೊತೆಗೂಡಿ ಸನ್ನಿಲಿಯೋನ್ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗೆ ಮುಂದಾಗಿದ್ದಾರೆ.

“ಸದ್ಯ ನಾವು ಕೋವಿಡ್  ಕಾಲದಲ್ಲಿದ್ದೇವೆ. ಈ ಸಂಕಷ್ಟವನ್ನು  ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ದೂರ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಪೆಟಾ ಜೊತೆ ಕೈ ಜೋಡಿಸುತ್ತಿದ್ದೇನೆ. ಈ ಸಂಸ್ಥೆಯ ಮೂಲಕ ವಲಸೆ ಕಾರ್ಮಿಕರಿಗೆ ಕಿಚಡಿ ಮತ್ತು ಹಣ್ಣುಗಳನ್ನು ನೀಡಲಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಇತ್ತೀಚಿಗೆ ದೇಶದ ಜನತೆ ವ್ಯಾಕ್ಸಿನ್​ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. “ಕೋವಿಡ್ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ. ಇದೀಗ ವ್ಯಾಕ್ಸಿನ್​ ಹಾಕಿಸಿಕೊಳ್ಳುವ ಸಮಯ. ಎಲ್ಲರೂ ಸುರಕ್ಷಿತವಾಗಿರಿ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಹಾಯ ಮಾಡೋಣ. ಜೊತೆಗೆ ಪ್ಲಾಸ್ಮಾ ದಾನಾ ಮಾಡೋಣ, ಅನೇಕ ಪ್ರಾಣಗಳನ್ನು ಉಳಿಸೋಣ ಎಂದು  ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next