ಮುಂಬಯಿ: ಬಾಲಿವುಡ್ ನ ನಟಿ ಸನ್ನಿ ಲಿಯೋನ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಅದಕ್ಕೆ ಕಾರಣ ಎರಡು ದಿನಗಳ ಹಿಂದಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ “ಮಧುಬನ್” ಹಾಡು. ಹೌದು ಸನ್ನಿ ಲಿಯೋನ್ ಹಾಗೂ ಗಾಯಕಿ ಕಾನಿಕಾ ಕಪೂರ್ ಕಾಂಬಿಷೇನ್ ನಲ್ಲಿ ಬಿಡುಗಡೆಯಾದ ಮಧುಬನ್ ಹಾಡು ಈಗಾಗಲೇ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಇ
ದನ್ನೂ ಓದಿ:ಮುಸ್ಲಿಮರನ್ನು ವರಿಸಿರುವ ಆರ್‌ಎಸ್‌ಎಸ್ ನಾಯಕರ ಮಕ್ಕಳನ್ನು ಜೈಲಿಗೆ ಹಾಕುವಿರಾ?
ಷರೀಬ್ ಮತ್ತು ತೋಶಿ ಸಂಗೀತದ ಈ ಹಾಡನ್ನು ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ನಿರ್ದೇಶಿಸಿದ್ದು, ಸನ್ನಿ ಲಿಯೋನ್ ಭರ್ಜರಿ ಚಾರ್ಮ್ ನೊಂದಿಗೆ “ನಾಚೆ ಮಧುಬನ್ ಮೈನೆ ರಾಧಿಕಾ” ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸನ್ನಿ ಲಿಯೋನ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಆಕ್ಷೇಪ ಏನು?
ಸನ್ನಿ ಲಿಯೋನ್ ಕುಣಿತದ ಮಧುಬನ್ ಹಾಡಿನಲ್ಲಿ “ರಾಧೆ” ಗೆ ಅವಮಾನ ಮಾಡಲಾಗಿದೆ. ಅಲ್ಲದೇ ಅಸ್ಸಾಂನಲ್ಲಿರುವ ಪವಿತ್ರ ಸ್ಥಳ ಮಧುಬನ್ ಅನ್ನು ಅಣಕಿಸಲಾಗಿದೆ. ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
“ರಾಧಾರಾಣಿ ಶ್ರೀಕೃಷ್ಣನ ಪರಮ ಭಕ್ತೆ, ಆಕೆ ನರ್ತಕಿಯಲ್ಲ, ಆಕೆಯ ಹೆಸರಿನಲ್ಲಿ ಈ ರೀತಿ ಕುಣಿಯುವುದು ಸಮಂಜಸವಾದುದಲ್ಲ. ಆಕೆಯ ಪವಿತ್ರವಾದ ಮಧುಬನ್ ಸ್ಥಳಕ್ಕೂ ಅಪಮಾನ ಮಾಡಲಾಗಿದೆ” ಎಂದು ಮತ್ತೊಬ್ಬರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.