ನವ ದೆಹಲಿ : ಮೇ 1, 2021 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ರಾಷ್ಟ್ರವು ಸಜ್ಜಾಗುತ್ತಿದೆ. ಇನ್ನೊಂದೆಡೆ ಸೆಲೆಬ್ರಿಟಿಗಳು ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈಗ ಆ ಸಾಲಿಗೆ ಬಾಲಿವುಡ್ ಹಾಗೂ ನಿಲಿ ಚಿತ್ರಗಳ ನಟಿ ಸನ್ನಿ ಲಿಯೋನ್ ಸೇರ್ಪಡೆಗೊಂಡಿದ್ದಾರೆ.
ಕೋವಿಡ್ ಸೋಂಕಿನಿಂದ ಸುರಕ್ಷಿತವಾಗಿರಿ ಹಾಗೂ ಲಸಿಕೆ ಪಡೆದುಕೊಳ್ಳುವುದಕ್ಕೆ ನೋಂದಣಿ ಮಾಡಿಕೊಳ್ಳಿ ಎಂದು ತಮ್ಮ ಅಭಿಮಾನಿಗಳಲ್ಲಿ ಸನ್ನಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ನಿಮ್ಮ ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸರು: ಸರ್ಕಾರದ ವಿರುದ್ಧ ಎಚ್ ಡಿಕೆ ಟೀಕೆ
ತಮ್ಮ ಫೋಟೊವೊಂದನ್ನು ಇನ್ ಸ್ಟಾ ಗ್ರಾಂ ಗೆ ಅಪ್ಲೋಡ್ ಮಾಡುವ ಮೂಲಕ ಕೋವಿಡ್ 19 ವಿರುದ್ಧ ಹೋರಾಟ ಮಾಡಲು ನಾವು ಲಸಿಕೆಯನ್ನು ಪಡೆದುಕೊಳ್ಳೋಣ, ಫ್ರಂಟ್ ಲೈನ್ ಕೋವಿಡ್ ವಾರಿಯರ್ಸ್ ಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅವಕಾಶ ಒದಗಿಸಿಕೊಡೋಣ, ನೀವು ಲಸಿಕೆ ಪಡೆದುಕೊಳ್ಳಿ ಹಾಗೂ ನಿಮ್ಮ ಪ್ರಿತಿ ಪಾತ್ರರಿಗರ ಲಸಿಕೆ ಸ್ವೀಕರಿಸಲು ಹೇಳಿ
Register : cowin.gov.in ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನು, ಜನಪ್ರಿಯ ಮಾಡೆಲ್-ನಟಿ ತನ್ನ ಮುಂಬರುವ ಚಿತ್ರ ‘ಶೆರೋ’ ಚಿತ್ರದಲ್ಲಿ ನಿರತರಾಗಿದ್ದಾರೆ. ಕೇರಳದ ಸಿನೆಮಾ ಸೆಟ್ ಗಳಿಂದ ನಟಿ ತೆರೆಮರೆಯ ವೀಡಿಯೊಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.
ಇದನ್ನೂ ಓದಿ : ಷೇರು ಮಾರಾಟದ ಮೂಲಕ 1.11 ಬಿಲಿಯನ್ ಡಾಲರ್ ಸಂಗ್ರಹಣೆಗೆ ಮುಂದಾದ ಜೊಮ್ಯಾಟೊ