Advertisement

ಜಾತ್ರೆಯಲ್ಲಿ ಯುವಕರಿಂದ  ಸನ್ನಿ ಲಿಯೋನ್ ಫ್ಲೆಕ್ಸ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

10:54 AM Mar 22, 2022 | Team Udayavani |

ಕುಷ್ಟಗಿ: ತಾಲೂಕಿನ ಗಡಿ ಗ್ರಾಮ ಹಾಬಲಕಟ್ಟಿ ಶ್ರೀ ಶರಣಬಸವೇಶ್ವರ ಜಾತ್ರೆಯಲ್ಲಿ ಹಾಕಿರುವ ಬಾಲಿವುಡ್ ಬೆಡಗಿ, ಮಾದಕ ಚೆಲುವೆ ಸನ್ನಿ ಲಿಯೋನ್ ಫ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಜಾತ್ರೆ ಉತ್ಸವಗಳ ನೆಚ್ಚಿನ ಸಿನಿಮಾ, ರಾಜಕಾರಣಿಗಳ ಫ್ಲೆಕ್ಸ್ ಹಾಕುವುದು ಇದ್ದೇ ಇರುತ್ತದೆ. ಆದರೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗಡಿ ಗ್ರಾಮ ಹಾಬಲಕಟ್ಟಿಯಲ್ಲಿ ಬಾಲಿವುಡ್ ನಟಿ, ಸನ್ನಿ ಲಿಯೋನ್ ಚಿತ್ರ ಹಾಕಿರುವುದು ಗಮನಸೆಳೆಯುತ್ತಿದೆ.

ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸ್ವಾಗತಿಸಲು ಕೆಲ ಯುವಕರು ತಮ್ಮ ಭಾವಚಿತ್ರದೊಂದಿಗೆ ಈ ಸನ್ನಿ ಲಿಯೋನ್ ಚಿತ್ರ ಹಾಕಿದ್ದಾರೆ.

ಇದನ್ನೂ ಓದಿ:ಬೆಲೆ ಏರಿಕೆ ಬಿಸಿ..: 50 ರೂ. ಏರಿಕೆ ಕಂಡ ಎಲ್ ಪಿಜಿ ಸಿಲಿಂಡರ್ ಬೆಲೆ!

ಈ ಫ್ಲೆಕ್ಸ್ ಅನ್ನು ಪಡ್ಡೆ ಹುಡುಗರು ಮನರಂಜನೆಗಾಗಿ ಈ ಚಿತ್ರ ಹಾಕಿದ್ದಾರೆನ್ನಬಹುದು. ಆದರೆ ನಿಮ್ಮ ಊಹೆ ತಪ್ಪು. ಈ ಚಲನಚಿತ್ರ ನಟಿ ಕೊರೊನಾ ಕಾಲದಲ್ಲಿ ಹಲವು ಜನರಿಗೆ ಸಹಾಯ ಮಾಡಿದ ಸ್ಮರಣೆಗೆ ಕೃತಜ್ಞತೆ ಸಲ್ಲಿಸಲು ಈ ರೀತಿ ಮಾಡಿರುವುದಾಗಿ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next