Advertisement

Sunita Williams; ಬಾಹ್ಯಾಕಾಶದಲ್ಲೇ ಉಳಿದ ಸುನೀತಾ ವಿಲಿಯಮ್ಸ್‌ ಮೆದುಳಿಗೆ ಹಾನಿ ಸಂಭವ?

07:55 AM Aug 18, 2024 | Team Udayavani |

ವಾಷಿಂಗ್ಟನ್‌: ಬೋಯಿಂಗ್‌ ಸ್ಟಾರ್‌ ಲೈನರ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿ, ವಾಪಸಾಗಲು ಸಾಧ್ಯವಾಗದೇ ಅಲ್ಲೇ ಉಳಿದಿರುವ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಅವರಿಗೆ ವಿವಿಧ ಆರೋಗ್ಯ ಸಮಸ್ಯೆಯಾಗುವ ಸಾಧ್ಯತೆಯಿದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಐಎಸ್‌ಎಸ್‌ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೆದುಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ನರರೋಗ, ಪಾರ್ಶ್ವವಾಯು ತಜ್ಞ ಡಾ| ಭೂಪೇಶ್‌ ಕುಮಾರ್‌ ಹೇಳಿದ್ದಾರೆ. ಮನುಷ್ಯನ ಮೆದುಳಿಗೆ ಕೆಲವು ನಿಮಿಷ ಆಮ್ಲಜನಕ ಕೊರತೆಯಾದರೂ ಮೆದುಳಿನ ಕೋಶಗಳು ಸಾಯಲಾರಂಭಿಸುತ್ತವೆ. ಬಾಹ್ಯಾಕಾಶದಲ್ಲಿ ಆಮ್ಲಜನಕದ ಕೊರತೆ ಉಂಟಾದರೆ ಸಮಸ್ಯೆ ಗ್ಯಾರಂಟಿ.

ಈ ಪರಿಸ್ಥಿತಿಯನ್ನು ಹೈಪೋಕ್ಸಿಯಾ ಎನ್ನಲಾಗುತ್ತದೆ. ದೀರ್ಘ‌ಕಾಲಿಕ ಹೈಪೋಕ್ಸಿಯಾವು ಮೆದುಳಿಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ, ಬಾಹ್ಯಾಕಾಶದಲ್ಲಿನ ಕಾಸ್ಮಿಕ್‌ ವಿಕಿರಣದಿಂದ ಡಿಎನ್‌ಎ ಹಾನಿಯಾಗಿ ಕ್ಯಾನ್ಸರ್‌ ಸೇರಿ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಜತೆಗೆ, ಏಕಾಂಗಿತನದಿಂದ ಮಾನಸಿಕ ಸಮಸ್ಯೆಯಾಗಬಹು ದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next