Advertisement

ಮತ್ತೆ ಅಕ್ರಮ ಬೌಲಿಂಗ್‌ ಸುಳಿಗೆ ಸುನೀಲ್‌ ನಾರಾಯಣ್‌

06:00 AM Mar 17, 2018 | Team Udayavani |

ನವದೆಹಲಿ: ಶ್ರೀಲಂಕಾ ವಿರುದ್ಧ 2016ರಲ್ಲಿ ನಡೆದ ಕ್ರಿಕೆಟ್‌ ಪಂದ್ಯದ ವೇಳೆ ಅಕ್ರಮ ಬೌಲಿಂಗ್‌ ಶೈಲಿ ಸುಳಿಗೆ ಸಿಕ್ಕಿಬಿದ್ದು ಆ ವರ್ಷದ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಕೂಟದಿಂದ ಹೊರಬೀಳುವ ಆತಂಕಕ್ಕೆ ಒಳಗಾಗಿ ಬಳಿಕ ಬಚಾವ್‌ ಆಗಿದ್ದ ವಿಂಡೀಸ್‌ನ ಖ್ಯಾತ ಸ್ಪಿನ್‌ ಬೌಲರ್‌ ಸುನೀಲ್‌ ನಾರಾಯಣ್‌ ಮತ್ತೂಮ್ಮೆ ಅಂತಹುದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌)ನಲ್ಲಿ ಪಾಲ್ಗೊಂಡಿರುವ ವೇಳೆ ಇವರು ಅಕ್ರಮ ಬೌಲಿಂಗ್‌ ಎಸೆದಿರುವುದು ಗೊತ್ತಾಗಿದೆ. ಇದರಿಂದ ಇವರು 2018ರ ಐಪಿಎಲ್‌ ಕೂಟವನ್ನು ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ. 2016ರಲ್ಲಿಯೂ ಹೀಗೆ ಆಗಿತ್ತು. ಕೊನೆಗೆ ಇವರನ್ನು ಐಸಿಸಿ  (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಬೌಲಿಂಗ್‌ ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಸುನೀಲ್‌ ನಾರಾಯಣ್‌ ಪಾಸ್‌ ಆಗಿ ವಾಪಸ್‌ ಕೆಕೆಆರ್‌ ತಂಡವನ್ನು ಕೂಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next