Advertisement

ಸುನೀಲ್‌ ಕುಮಾರ್‌ ಚಿನ್ನ, ಕಾದಿದ್ದು 27 ವರ್ಷ

07:33 PM Feb 28, 2020 | Lakshmi GovindaRaj |

ಕ್ರೀಡೆಯಲ್ಲಿ ಭಾರತ ನಿಧಾನಕ್ಕೆ ಚಿಗುರಿಕೊಳ್ಳುತ್ತಿದೆ. ಶೂಟಿಂಗ್‌, ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌ ಹೀಗೆ ಒಂದೊಂದೇ ಕ್ರೀಡೆಯಲ್ಲಿ ವಿಶ್ವಮಟ್ಟದಲ್ಲಿ ಅರಳಿಕೊಳ್ಳುತ್ತಿದೆ. ಹೀಗೆ ಅರಳಿಕೊಳ್ಳುತ್ತಿರುವ ಕ್ರೀಡೆಗಳ ಪೈಕಿ ಕುಸ್ತಿ ಕೂಡ ಒಂದು. ಈ ಕ್ರೀಡೆಯಲ್ಲಿ ವಿಶ್ವದಲ್ಲೇ ಖ್ಯಾತರಾಗಿರುವ ಕ್ರೀಡಾಪಟುಗಳು ಹುಟ್ಟಿಕೊಂಡಿದ್ದಾರೆ. ಸುಶೀಲ್‌ ಕುಮಾರ್‌ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು, ಭಾರತೀಯ ಅಭಿಮಾನಿಗಳಲ್ಲಿ ಹೆಮ್ಮೆ ಉಕ್ಕಿಸಿದರು. ಅದಾದ ನಂತರ ಅದೇ ಪರಂಪರೆಯಲ್ಲಿ ಹಲವರು ಬೆಳೆದು ನಿಂತಿದ್ದಾರೆ.

Advertisement

ಮಹಿಳೆಯರ ಪೈಕಿ ಗೀತಾ ಫೊಗಾಟ್‌, ಬಬಿತಾ ಫೊಗಾಟ್‌ ಕಾಲದ ನಂತರ ಅವರ ಸಹೋದರಿ ವಿನೇಶ್‌ ಫೊಗಾಟ್‌ ಮಿಂಚುತ್ತಿದ್ದಾರೆ. ಪುರುಷರ ಪೈಕಿ ಬಜರಂಗ್‌ ಪುನಿಯ, ದೀಪಕ್‌ ಪುನಿಯ ಭರವಸೆ ಮೂಡಿಸಿರುವ ತಾರೆಯರು. ಹಲವು ಪ್ರತಿಭಾವಂತರು ಕಣದಲ್ಲಿರುವ ಈ ಆಶಾದಾಯಕ ಹೊತ್ತಿನಲ್ಲೇ, ಇತ್ತೀಚೆಗೆ ಮುಗಿದ ಏಷ್ಯಾ ಹಿರಿಯರ ಕುಸ್ತಿ ಕೂಟದಲ್ಲಿ ಭಾರತೀಯರು ಮಹತ್ವದ ಸಾಧನೆ ಮಾಡಿದ್ದಾರೆ. ಸುನೀಲ್‌ ಕುಮಾರ್‌ 87 ಕೆಜಿ ಗ್ರೀಕೊ ರೋಮನ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಇದು 27 ವರ್ಷದ ನಂತರ ಭಾರತೀಯರೊಬ್ಬರಿಗೆ ಈ ವಿಭಾಗದಲ್ಲಿ ಒಲಿದ ಚಿನ್ನ. ಇದಕ್ಕೂ ಮುನ್ನ 1993ರಲ್ಲಿ ನಡೆದ ಏಷ್ಯಾ ಕುಸ್ತಿಯಲ್ಲಿ 48 ಕೆಜಿ ವಿಭಾಗದ ಗ್ರೀಕೊ ರೋಮನ್‌ನಲ್ಲಿ, ಪಪ್ಪು ಯಾದವ್‌ ಚಿನ್ನ ಗೆದ್ದಿದ್ದರು. ಅದಾದ ನಂತರ ದೀರ್ಘ‌ಕಾಲ ಭಾರತ ಗ್ರೀಕೊ ರೋಮನ್‌ನಲ್ಲಿ ಚಿನ್ನ ಗೆಲ್ಲಲು ವಿಫ‌ಲವಾಗಿತ್ತು. ಈಗ ಭಾರತೀಯರು ಹಲವು ಮೊದಲು ಕ್ರೀಡೆಯಲ್ಲಿ ಸ್ಥಾಪಿಸುತ್ತಿ­ದ್ದಾರೆ. ಇದೇ ರೀತಿ ಸಾಗಿದರೆ, ಇನ್ನೊಂದು 20 ವರ್ಷದಲ್ಲಿ ಭಾರತೀಯರು ವಿಶ್ವಮಟ್ಟದಲ್ಲಿ ಬಲಿಷ್ಠ ಕ್ರೀಡಾತಂಡವಾಗುವುದರಲ್ಲಿ ಅನು­ ಮಾನವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next