Advertisement

ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನಿಷೇಧ ಕಾಯಿದೆಯನ್ನೂ ತರುತ್ತೇವೆ: ಸಚಿವ ಸುನೀಲ್ ಕುಮಾರ್

11:24 AM Dec 13, 2021 | Team Udayavani |

ಸುವರ್ಣಸೌಧ (ಬೆಳಗಾವಿ): ಸದ್ಯ ಮತಾಂತರ ನಿಷೇಧ ಕಾಯಿದೆ ತರುತ್ತೇವೆ. ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನಿಷೇಧ ಕಾಯಿದೆಯನ್ನೂ ತರುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ಗೋಹತ್ಯೆ ನಿಷೇಧ ಕಾಯಿದೆ ತರುವುದಾಗಿ ಹೇಳಿತ್ತು, ಅದರಂತೆ ಅದನ್ನೂ ತಂದೆವು. ಈಗ ಈ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನ ತರುತ್ತೇವೆ ಎಂದರು.

ಇದನ್ನೂ ಓದಿ:ಲವ್ ಜಿಹಾದ್ ನಿಷೇಧ ಕಾಯಿದೆ ಜಾರಿ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಮತಾಂತರವನ್ನು ಮಹಾತ್ನ ಗಾಂಧಿ, ವಿವೇಕಾನಂದ ಕೂಡ ವಿರೋಧಿಸಿದ್ದರು. ಈಗ ಈ ಕಾಯ್ದೆಗೆ ಕಾನೂನಿನ ಸ್ವರೂಪ ತರುತ್ತಿದ್ದೇವೆ. ಈ ವಿಚಾರದಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಯಾವ ಯಾವ ಕಾರಣಕ್ಕೆ ಮತಾಂತರವಾಗುತ್ತಿದೆ. ಅದರ ದುಷ್ಪರಿಣಾಮ ಏನು ಎಂಬುದು ಗೊತ್ತಿದೆ. ಕೇವಲ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕಾಯ್ದೆ ತರುತ್ತಿಲ್ಲ. ಕಾಂಗ್ರೆಸ್ ಯಾಕೆ ವಿರೋಧ ಮಾಡುತ್ತಿದೆ ಎಂಬುದನ್ನು ಹೇಳಲಿ. ಈ ಬಗ್ಗೆ ಚರ್ಚೆಗೆ ಬರಲಿ ಸಿದ್ಧವಿದ್ದೇವೆ ಎಂದು ಸುನೀಲ್ ಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next