ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಕೊನೆಯ ಲೀಗ್ ಪಂದ್ಯವಾಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೋಲನುಭವಿಸಿದೆ. ಆದರೆ ತವರಿನ ಕೊನೆಯ ಲೀಗ್ ಪಂದ್ಯವಾದ ಕಾರಣ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಸ್ಟೇಡಿಯಂನತ್ತ ಚೆಂಡುಗಳನ್ನು ಎಸೆದರು.
ಧೋನಿ ಮತ್ತು ಸಿಎಸ್‌ಕೆ ಆಟಗಾರರು ಚೆಪಾಕ್ ನಲ್ಲಿ ಸುತ್ತುತ್ತಿರುವಾಗ ಪ್ರಸ್ತುತ ಐಪಿಎಲ್ 2023 ರ ಕಾಮೆಂಟರಿ ತಂಡದ ಭಾಗವಾಗಿರುವ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸಿಎಸ್ ಕೆ ನಾಯಕ ಧೋನಿ ಬಳಿ ಓಡಿ ಬಂದು ಅವರ ಶರ್ಟ್ ನಲ್ಲಿ ಅವರ ಆಟೋಗ್ರಾಫ್ ತೆಗೆದುಕೊಂಡರು.
ಅದೇ ಕ್ಷಣದ ನಂತರ ಧೋನಿ ಮತ್ತು ಗವಾಸ್ಕರ್ ಹಗ್ ಮಾಡಿಕೊಂಡರು.
ತನ್ನ ಶರ್ಟ್ ಮೇಲೆ ಧೋನಿಯ ಹಸ್ತಾಕ್ಷರವನ್ನು ಪಡೆದ ನಂತರ, ಗವಾಸ್ಕರ್ ಅವರು ಕಾಮೆಂಟರಿಯಲ್ಲಿ “ದಯವಿಟ್ಟು ಉಳಿದ ಪಂದ್ಯಗಳಿಗೆ ನನಗೆ ಹೊಸ ಗುಲಾಬಿ ಶರ್ಟ್ ನೀಡಿ” ಎಂದು ಹೇಳಿದರು.
Related Articles
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಆರು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದರೆ, ಕೆಕೆಆರ್ ತಂಡವು 18.3 ಓವರ್ ಗಳಲ್ಲಿ 147 ರನ್ ಗಳಿಸಿ ಜಯಿಸಿತು.