ಮುಂಬೈ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ವಿಫಲರಾದ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು ಎಂಬ ಕೂಗು ಬಲವಾಗಿದೆ. ಮಾಜಿ ಆಟಗಾರರರಾದ ಕಪಿಲ್ ದೇವ್, ವೆಂಕಟೇಶ್ ಪ್ರಸಾದ್ ರಂತವರು ಕೂಡಾ ಟಿ20 ತಂಡದಲ್ಲಿ ಕೊಹ್ಲಿಗೆ ಅವಕಾಶ ನೀಡಿದ್ದು ಸಾಕು ಎನ್ನುವಂತೆ ಮಾತನಾಡಿದ್ದಾರೆ. ಆದರೆ ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಮಾತ್ರ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ.
“ರೋಹಿತ್ ಶರ್ಮಾ ರನ್ ಗಳಿಸದಿದ್ದಾಗ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ, ಬೇರೆ ಯಾವುದೇ ಆಟಗಾರ ರನ್ ಗಳಿಸದಿದ್ದಾಗ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ” ಎಂದು ಗಾವಸ್ಕರ್ ಹೇಳಿದ್ದಾರೆ.
“ಫಾರ್ಮ್ ಎನ್ನುವುದು ತಾತ್ಕಾಲಿಕ ಆದರೆ ಆಟಗಾರನ ಕ್ಲಾಸ್ ಎನ್ನವುದು ಶಾಶ್ವತ. ಕೊಹ್ಲಿಇತ್ತೀಚೆಗೆ ಪಂದ್ಯ ಆರಂಭದಲ್ಲೇ ದೊಡ್ಡ ಹೊಡೆತಕ್ಕೆ ಕೈ ಹಾಕುತ್ತಿದ್ದಾರೆ. ಅದರಲ್ಲಿ ಪ್ರತಿಸಲ ಯಶಸ್ಸು ಕಾಣಲು ಸಾಧ್ಯವಿಲ್ಲ. ನಮ್ಮಲ್ಲಿ ಆಯ್ಕೆ ಸಮಿತಿಯಿದೆ. ಇದರ ಬಗ್ಗೆ ಸಮಿತಿ ಚರ್ಚೆ ಮಾಡುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಂಗಳೂರು ತಲುಪಿದ ಬೃಜೇಶ್ ಶರ್ಮಾ : ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಸೈಕ್ಲಿಂಗ್
ಇಂಗ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಒಟ್ಟು 12 ರನ್ ಗಳಿಸಿದ್ದರು.
ಭಾರತ ತಂಡ ಇಂದಿನಿಂದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.