Advertisement

ಭಾನುವಾರವೂ ತಪ್ಪದ ಟ್ರಾಫಿಕ್‌ ಬವಣೆ

12:07 PM Apr 09, 2018 | |

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್‌ನ “ಜನಾಶೀರ್ವಾದ ಯಾತ್ರೆ’ ಸಮಾರೋಪ ಸಮಾರಂಭದ ಪರಿಣಾಮ ಭಾನುವಾರ ರಾಜಧಾನಿಯ ಹೃದಯ ಭಾಗ ಟ್ರಾಫಿಕ್‌ ಜಾಮ್‌ನಿಂದ ತುಂಬಿತ್ತು.

Advertisement

ರ್ಯಾಲಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್‌ ಕಾರ್ಯಕರ್ತರು ನೂರಾರು ಬಸ್‌ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಆಗಮಿಸಿದ್ದರು. ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಹಳೆ ಮದ್ರಾಸ್‌ ರಸ್ತೆ ಮಾರ್ಗಗಳಲ್ಲಿ ಆಗಮಿಸಿದ ವಾಹನಗಳಿಂದಾಗಿ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೂ ಸಾಧಾರಣವಾಗಿದ್ದ ಸಂಚಾರ ನಂತರ ದಟ್ಟಣೆ ದುಪ್ಪಟ್ಟಾಗಿತ್ತು.

ಹೆಬ್ಟಾಳ ಮೇಲ್ಸೇತುವೆ, ಮೇಕ್ರಿ ವೃತ್ತ, ಗೊರಗುಂಟೆ ಪಾಳ್ಯದಲ್ಲಿ ವಾರಂತ್ಯದಲ್ಲಿ ಅಷ್ಟಾಗಿ ಟ್ರಾಫಿಕ್‌ ಕಂಡು ಬರುತ್ತಿರಲಿಲ್ಲ. ಆದರೆ, ಭಾನುವಾರ ಈ ಮಾರ್ಗಗಳಲ್ಲಿ ಸಾಮಾನ್ಯ ದಿನಗಳ ಮಾದರಿಯಲ್ಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಸರತಿಸಾಲು: ಕೆಂಪಾಪುರ ಜಂಕ್ಷನ್‌ನಿಂದ, ಹೆಬ್ಟಾಳ ಫ್ಲೈ ಓವರ್‌ ಹಾದಿಯಾಗಿ ಪ್ಯಾಲೇಸ್‌ ಗ್ರೌಂಡ್‌ನ‌ವರೆಗೂ ಕಿ.ಲೋ ಮೀಟರ್‌ಗಟ್ಟಲೆ ವಾಹನಗಳು ಸರತಿ ನಿಂತಿದ್ದವು. ಇತ್ತ ಜಯಮಹಲ್‌ ರಸ್ತೆ, ಕಂಟೋನ್ಮೆಂಟ್‌, ಯಶವಂತಪುರ ಮಾರ್ಗವಾಗಿ ಮೇಕ್ರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಇದೇ ಪರಿಸ್ಥಿತಿಯಿತ್ತು.

ಬಿಸಿಲಿನ ಝಳ ಹಾಗೂ ಟ್ರಾಫಿಕ್‌ ಜಾಮ್‌ನಿಂದಾಗಿ  ಬಸ್‌ಗಳಲ್ಲಿದ್ದ ಜನ ಹಾಗೂ ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಬೆವೆತು ಹೋದರೆ, ಪೊಲೀಸರು ದಟ್ಟಣೆ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದರು.

Advertisement

ಬದಲಿ ಮಾರ್ಗ: ಮತ್ತೂಂದೆಡೆ ನಗರದ ವಿವಿಧ ಭಾಗಗಳಿಗೆ ತೆರಳಬೇಕಿದ್ದ ವಾಹನ ಸವಾರರು ಟ್ರಾಫಿಕ್‌ ಜಾಮ್‌ ಪರಿಣಾಮದಿಂದ ಬದಲಿ ಮಾರ್ಗಗಳ ಮೊರೆಹೋದರು. ನಾಗವಾರ ಫ್ಲೈ ಓವರ್‌, ಕೆ.ಆರ್‌ ಪುರಂ ರಸ್ತೆ, ಮೈಸೂರು ರಸ್ತೆ ಮಾರ್ಗಗಳಲ್ಲಿಯೂ ಟ್ರಾಫಿಕ್‌ ಹೆಚ್ಚಾಗಿತ್ತು ಎಂದು ಸಂಚಾರ ವಿಭಾಗದ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಗೊರಗುಂಟೆ ಪಾಳ್ಯ ಜಂಕ್ಷನ್‌ ಹಾಗೂ ಹೆಬ್ಟಾಳ ಮೇಲ್ಸೇತುವೆ ಮಾರ್ಗದಲ್ಲಿ ಸುಮಾರು ಎರಡು ಸಾವಿರ ಬಸ್‌ಗಳು ನಗರಕ್ಕೆ ಆಗಮಿಸಿದ್ದವು. ಅಲ್ಲದೆ, ಭಾನುವಾರ ಸಂಜೆ ಬಳಿಕ ಟ್ರಾಫಿಕ್‌ ಜಾಮ್‌ ಹೆಚ್ಚಾಗುತ್ತಿತ್ತು.

ತೊಂದರೆ: ಸಮಾವೇಶ ಪೂರ್ಣಗೊಂಡ, ಬಸ್ಸು, ಕಾರು, ಇನ್ನಿತರೆ ವಾಹನಗಳು ಒಮ್ಮೆಲೆ ಹೊರ ಹೋದವು. ಪರಿಣಾಮ  ಟ್ರಾಫಿಕ್‌ ಜಾಮ್‌ ಮತ್ತಷ್ಟು ಬಿಗಡಾಯಿಸಿತ್ತು. ಅರಮನೆ ಮೈದಾನದ ಹಿಂಭಾಗದ ಜಯಮಹಲ್‌ ರಸ್ತೆಯಲ್ಲಿ ಈ ವೇಳೆ ಭಾರೀ ದಟ್ಟಣೆ ಉಂಟಾಗಿದ್ದರಿಂದ, ಸ್ನೋ ಸಿಟಿ ನೋಡಲು ಬಂದ ಸಾರ್ವಜನಿಕರು ಟ್ರಾಫಿಕ್‌ನಲ್ಲಿ ಸಿಲುಕಿ ಹೈರಾಣದರು.

Advertisement

Udayavani is now on Telegram. Click here to join our channel and stay updated with the latest news.

Next