Advertisement

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

07:42 AM Nov 07, 2021 | Team Udayavani |

ಮೇಷ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ನೇತೃತ್ವ ವಹಿಸಿದ ತೃಪ್ತಿ. ಹಿರಿಯರ ಗುರುಗಳ ಪ್ರೀತಿ ಸಂಪಾದನೆ. ಗಣ್ಯರ ಭೇಟಿ ಸ್ಥಾನ ಮಾನ ವೃದ್ಧಿ . ಧನ ಸಂಪತ್ತಿನ ವಿಚಾರದಲ್ಲಿ ಸಂತೋಷ. ಬಂಧುಮಿತ್ರರಲ್ಲಿ ಬೇಸರ ಮಾಡದಿರಿ.

Advertisement

ವೃಷಭ: ಗೃಹ ವಾಹನಾದಿ ಆಸ್ತಿ ವಿಚಾರದಲ್ಲಿ ಆಸಕ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಮಾತಿನಲ್ಲಿ ದಾಕ್ಷಿಣ್ಯ ತೋರದೇ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣದಿಂದ ದೇಹಾಯಾಸ.

ಮಿಥುನ: ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಸ್ಥಾನ ಸುಖ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಬದಲಾವಣೆ. ಸಹೋದ್ಯೋಗಿಗಳಿಂದ ಸಹಕಾರ ಲಭ್ಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ.

ಕರ್ಕ: ಸಣ್ಣ ಹಾಗೂ ದೀರ್ಘ‌ ಪ್ರಯಾಣದಿಂದ ಅನುಕೂಲ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರಗಳಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಗೃಹ ಸಂಬಂಧೀ ಖರ್ಚು. ಮಕ್ಕಳಿಂದ ಸುಖ.

ಸಿಂಹ: ಆರೋಗ್ಯ ಗಮನಿಸಿ. ಸಹೋದರ ಸಮಾನರಿಂದ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಬರಬೇಕಾದ ಸಂಪತ್ತು ಪ್ರಾಪ್ತಿ. ಸಾಲ ನೀಡದಿರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ.

Advertisement

ಕನ್ಯಾ: ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಿರಿ. ಸಾಂಸಾರಿಕ ಸುಖ ವೃದ್ಧಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬರುವ ಸಮಯ. ಸಾಹಸ ಪ್ರವೃತ್ತಿಯಿಂದ ಪ್ರಗತಿ.

ತುಲಾ: ದೇವತಾ ಕಾರ್ಯಗಳಲ್ಲಿ ತತ್ಪರತೆ. ಭಾಗ್ಯ ವೃದ್ಧಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಕೀರ್ತಿ ಸ್ಥಾನ ಸಂಚಾರಿ ಪ್ರಾಪ್ತಿ. ಸಾಂಸಾರಿಕ ಸುಖ ವೃದ್ಧಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ನೂತನ ಬಂಧುಮಿತ್ರರ ಸಹಕಾರ.

ವೃಶ್ಚಿಕ: ಬಹು ಐಶ್ವರ್ಯ ಸಿಗುವ ಸಂಭವ. ರಾಜಕೀಯ ಸರಕಾರೀ ಕಾರ್ಯಗಳಲ್ಲಿ ಮುನ್ನಡೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸಿದರಿಂದ ತೃಪ್ತಿ. ದೀರ್ಘ‌ ಸಂಚಾರ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಮೇಲಾಧಿಕಾರಿಗಳ ಸಹಕಾರ ಪ್ರೋತ್ಸಾಹ ಲಭ್ಯ.

ಧನು: ಉತ್ತಮ ಆರೋಗ್ಯ. ತಾಳ್ಮೆ ಸಹನೆಯಿಂದ ನಿರ್ವಹಿಸಿದ ಕಾರ್ಯದಿಂದ ಕೀರ್ತಿ ಯಶಸ್ಸು ಲಭಿಸಿದ್ದರಿಂದ ಸಂತೋಷ. ನಿರಂತರ ಧನಾರ್ಜನೆ. ಗುರುಹಿರಿಯರ ಸಹಕಾರ ಪ್ರೋತ್ಸಾಹದಿಂದ ಹೆಚ್ಚಿದ ಸ್ಥಾನಮಾನ. ದಾಂಪತ್ಯ ತೃಪ್ತಿಕರ.

ಮಕರ: ತಂದೆ ತಾಯಿಯಿಂದ ಸುಖ ಪ್ರಾಪ್ತಿ. ಬಂಧುಮಿತ್ರರ ಆಗಮನದಿಂದ ಗೃಹದಲ್ಲಿ ಸಂತಸದ ವಾತಾವರಣ. ಭೋಜನಾದಿ ಸಂಭ್ರಮ. ಆಸ್ತಿ ವಿಚಾರದಲ್ಲಿ ಮುನ್ನಡೆ. ಪಾಲುದಾರಿಕಾ ವ್ಯವಹಾರದಲ್ಲಿ ಹೆಚ್ಚಿದ ಪ್ರಗತಿ.

ಕುಂಭ: ನೂತನ ಮಿತ್ರರ ಭೇಟಿ. ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರಯಾಣ. ದೂರದ ವ್ಯವಹಾರ ದಲ್ಲಿ ಹೆಚ್ಚಿದ ವರಮಾನ. ಪಾಲುದಾರಿಕಾ ಕ್ಷೇತ್ರದಲ್ಲಿ ಗೌರವ ವೃದ್ಧಿ. ಆರೋಗ್ಯದಲ್ಲಿ ಉತ್ತಮ ಬದಲಾವಣೆ.

ಮೀನ: ದೂರ ಪ್ರಯಾಣ. ಜನಪದರ ಸಹಕಾರ ಸಹಾಯ ದಿಂದ ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ. ವಿದ್ಯಾರ್ಥಿಗಳಿಗೆ ಸರ್ವ ಸೌಲಭ್ಯ ಪ್ರಾಪ್ತಿ.

Advertisement

Udayavani is now on Telegram. Click here to join our channel and stay updated with the latest news.

Next