Advertisement

ಭಾನುವಾರ ಗೋವಾಗೆ ನಡ್ಡಾ ಆಗಮನ : ಚುನಾವಣಾ ಪೂರ್ವ ಸಿದ್ಧತೆಯ ಚರ್ಚೆ ಸಾಧ್ಯತೆ

04:41 PM Jul 09, 2021 | Team Udayavani |

ಪಣಜಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರವರು ಭಾನುವಾರ(ಜುಲೈ 11) ಗೋವಾಕ್ಕೆ ಆಗಮಿಸಲಿದ್ದು, ಖಾಸಗಿ ಪಂಚತಾರಾ ಹೋಟೆಲ್‍ ವೊಂದರಲ್ಲಿ ಬೈಠೆಕ್ ನಡೆಯಲಿದೆ.

Advertisement

ಇದನ್ನೂ ಓದಿ : ಯೋಗೀಶ್ ಗೌಡ ಕೊಲೆ ಪ್ರಕರಣ: ಹೊಸ್ ಬಾಂಬ್ ಸಿಡಿಸಿದ ಅರೋಪಿ ಮುತ್ತಗಿ!

ಬಿಜೆಪಿಯ ರಾಜ್ಯ ಮಟ್ಟ, ತಾಲೂಕಾ, ಜಿಲ್ಲಾ ಮಟ್ಟದ ಸಮೀತಿಯೊಂದಿಗೆ ಬೈಠಕ್ ನಡೆಯಲಿದೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಿದ್ಧತೆಯ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಜೆ.ಪಿ ನಡ್ಡಾ ಅವರು ಭಾನುವಾರ ಹಾಗೂ ಸೋಮವಾರ ಈ ಎರಡು ದಿನಗಳ ಕಾಲ ಗೋವಾದಲ್ಲಿ ವಾಸ್ತವ್ಯ ಹೂಡಲಿದ್ದು, ರಾಜ್ಯ ಬಿಜೆಪಿ ನಾಯಕರೊಂದಿಗೆ ಚುನಾವಣಾ ಸಿದ್ಧತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next