ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಅವರು ವಲಸೆ ನೀತಿಗೆ ತಂದಿರುವ ಸುಧಾರಣೆಗಳ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಗೂಗಲ್ ಸಿಇಒ, ಭಾರತೀಯ ಮೂಲದ ಸುಂದರ್ ಪಿಚೈ, ಆ್ಯಪಲ್ ಸಿಇಒ ಟಿಮ್ ಕುಕ್ ಸೇರಿದಂತೆ ಅನೇಕ ದಿಗ್ಗಜರು ಬೈಡೆನ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇದು ಅಮೆರಿಕದ ಆರ್ಥಿಕತೆ ಉತ್ತೇಜನ, ಉದ್ಯೋಗ ಸೃಷ್ಟಿ, ಜಗತ್ತಿನ ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸಲು ನೆರವಾಗಲಿದೆ ಎಂದಿದ್ದಾರೆ.
ಈ ನಡುವೆ, ಬೈಡೆನ್ ಆಡಳಿತವು ಅಮೆರಿಕದಲ್ಲಿನ ದೇಶೀಯ ಪ್ರತ್ಯೇಕತ ವಾದಿ ಸಿದ್ಧಾಂತದ ಕುರಿತು ಪರಿಶೀಲನೆ ನಡೆಸಲು ಮುಂದಾಗಿದೆ. ಕ್ಯಾಪಿಟಲ್ ಹಿಲ್‌ನಲ್ಲಿ ಜ.6ರಂದು ನಡೆದ ಹಿಂಸಾ ಚಾರದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಹಿಂಸಾತ್ಮಕ ಪ್ರತ್ಯೇಕತಾ ವಾದಿ ಸಿದ್ಧಾಂತವು ತೀವ್ರಗೊಂಡಷ್ಟೂ ದೇಶದ ಭದ್ರತೆಗೆ ಅಪಾಯಕಾರಿ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಅಭಿಪ್ರಾಯಪಟ್ಟಿದ್ದಾರೆ.
ರಕ್ಷಣ ಸಚಿವರಾಗಿ ಆಸ್ಟಿನ್ ನೇಮಕ :
ಅಮೆರಿಕದ ನೂತನ ರಕ್ಷಣ ಸಚಿವರಾಗಿ ನಿವೃತ್ತ ಜನರಲ್ ಲಾಯ್ಡ ಆಸ್ಟಿನ್ ಶನಿವಾರ ನೇಮಕಗೊಂಡಿದ್ದಾರೆ. ಪೆಂಟಗನ್‌ನ ಪ್ರಮುಖ ಹುದ್ದೆ ಪಡೆದ ಮೊದಲ ಕಪ್ಪುವರ್ಣೀಯ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಆಸ್ಟಿನ್ ಅವರ ನಾಮನಿರ್ದೇಶನಕ್ಕೆ ಸೆನೆಟ್‌ನಲ್ಲಿ 93-2 ಮತಗಳ ಅನುಮೋದನೆ ದೊರೆ ತಿದೆ. ಮುಂದಿನ ವಾರ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರು ಆಸ್ಟಿನ್‌ಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.