Advertisement
ದೋಷ ನಿಗದಿಗೆ ಸಂಬಂಧಿಸಿ ವಾದ ಮಂಡಿಸಿದ ಹಿರಿಯ ಸರ್ಕಾರಿ ವಕೀಲ ಅತುಲ್ ಶ್ರೀವಾಸ್ತವ, ಈ ಕೋರಿಕೆ ಸಲ್ಲಿಸಿದ್ದಾರೆ. ತರೂರ್-ಸುನಂದಾ ಮನೆಯ ಕೆಲಸದಾಳುವಿನ ಹೇಳಿಕೆಯನ್ನು ಓದಿ ಹೇಳಿದ ಅವರು, “ಕ್ಯಾಟಿ ಎಂಬ ಹೆಸರಿನ ಯುವತಿಗೆ ಸಂಬಂಧಿಸಿ ಮತ್ತು ಬ್ಲ್ಯಾಕ್‌ಬೆರ್ರಿ ಸಂದೇಶಗಳಿಗೆ ಸಂಬಂಧಿಸಿ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ದುಬಾೖಗೆ ಹೋಗಿದ್ದಾಗಲೂ ತರೂರ್ ಮತ್ತು ಸುನಂದಾ ಪರಸ್ಪರ ಜಗಳವಾಡಿದ್ದರು. ಒಂದು ಹಂತದಲ್ಲಿ ಅಂದು ಸುನಂದಾ ಅವರು ತರೂರ್‌ಗೆ ಹೊಡೆದಿದ್ದರು’ ಎಂದಿದ್ದಾರೆ. ಅಲ್ಲದೆ, ವಿಷದಿಂದಾಗಿ ಸುನಂದಾ ಸಾವಿಗೀಡಾಗಿದ್ದು, ಅವರ ಶರೀರದ ವಿವಿಧ ಭಾಗಗಳಲ್ಲಿ 15 ಗಾಯದ ಗುರುತುಗಳಿದ್ದವು ಎಂಬುದನ್ನೂ ವಕೀಲರು ತಿಳಿಸಿದ್ದಾರೆ.
ಸಾವಿಗೂ ಮುನ್ನ ಸುನಂದಾ ಅವರು ಐಪಿಎಲ್ ವಿಚಾರಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿ ಕರೆಯಲು ಸಿದ್ಧತೆ ನಡೆಸಿಕೊಂಡಿದ್ದರು. ಅಲ್ಲದೆ ನಾನು ಅವರನ್ನು (ತರೂರ್) ಸುಮ್ಮನೆ ಬಿಡುವುದಿಲ್ಲ ಎಂದೂ ಹೇಳಿದ್ದರು. ಅಲ್ಲದೆ, ಪಾಕಿಸ್ಥಾನದ ಪತ್ರಕರ್ತೆ ಮೆಹರ್ ತರಾರ್ ಜತೆಗಿನ ತರೂಲ್ ಸಂಬಂಧವೂ ಸುನಂದಾಗೆ ಆಘಾತ ಮೂಡಿಸಿತ್ತು. ಚುನಾವಣೆ ಮುಗಿದೊಡನೆ ತರೂರ್ ನನಗೆ ವಿಚ್ಛೇದನ ನೀಡಿ, ಮೆಹರ್ ತರಾರ್‌ರನ್ನು ವಿವಾಹವಾಗಲಿದ್ದಾರೆ ಎಂದು ಸುನಂದಾ ತಮ್ಮ ಗೆಳತಿ ನಳಿನಿ ಸಿಂಗ್ ಜತೆ ಹೇಳಿಕೊಂ ಡಿದ್ದರು ಎಂದು ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.