Advertisement

ಸುನಂದಾ ಶವ ಪತ್ತೆಯಾಗಿದ್ದ ಹೊಟೇಲ್‌ ಕೋಣೆ ಬೀಗಮುದ್ರೆ ತೆರವಿಗೆ ಆದೇಶ

07:21 PM Jul 21, 2017 | Team Udayavani |

ಹೊಸದಿಲ್ಲಿ : 2014ರ ಜನವರಿ 17ರಂದು ಕೇಂದ್ರ ಮಾಜಿ ಸಚಿವ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಶವವಾಗಿ ಪತ್ತೆಯಾಗಿದ್ದ ಹೊಟೇಲ್‌ ಲೀಲಾ ಪ್ಯಾಲೇಸ್‌ನ ಕೋಣೆಯ ಬೀಗ ಮುದ್ರೆಯನ್ನು ತೆಗೆಯುವಂತೆ  ದಿಲ್ಲಿ ನ್ಯಾಯಾಲಯ ಇಂದು ಶುಕ್ರವಾರ ದಿಲ್ಲಿ ಪೊಲೀಸರಿಗೆ ಆದೇಶಿಸಿದೆ.

Advertisement

ನಂಬರ್‌ 345ರ ಕೋಣೆಯ ಬೀಗ ಮುದ್ರೆಯನ್ನು ತೆರವುಗೊಳಿಸುವಂತೆ ಹೊಟೇಲ್‌ ಆಡಳಿತೆ ಮಾಡಿಕೊಂಡ ಮನವಿಯನ್ನು ಪುರಸ್ಕರಿಸಿದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪಂಕಜ್‌ ಶರ್ಮಾ ಅವರು ದಿಲ್ಲಿ ಪೊಲೀಸರಿಗೆ ಆ ನಿಟ್ಟಿನಲ್ಲಿ ಆದೇಶ ಹೊರಡಿಸಿದರು. 

ದಿಲ್ಲಿ ಪೊಲೀಸರು ಸಲ್ಲಿಸಿರುವ ಸ್ಥಿತಿಗತಿ ವರದಿ ಪ್ರಕಾರ ಸುನಂದಾ ಪುಷ್ಕರ್‌ ಸಾವಿನ ಕಾರಣವನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಿಲ್ಲ; ಆದುದರಿಂದ ಆ ಕಾರಣಕ್ಕಾಗಿ ಲೀಲಾ ಹೊಟೇಲ್‌ ನಿರಂತರವಾಗಿ ತೊಂದರೆ ಪಡುವಂತೆ ಮಾಡಲಾಗದು ಎಂದು ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next