Advertisement

ಸಮನ್ಸ್‌ ಸರಿಯಿದೆ ಇಡಿ ಸಮರ್ಥನೆ

12:30 AM Mar 13, 2019 | |

ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಆಪ್ತ ಸಚಿನ್‌ ನಾರಾಯಣ್‌ ಮತ್ತಿತರರ ವಿರುದ್ಧ ಸಮನ್ಸ್‌ ಜಾರಿಗೊಳಿಸಿರುವ ಕ್ರಮವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಎಲ್ಲರ ವಿರುದ್ಧದ ಆರೋಪಗಳಿಗೆ ಸಾಕಷ್ಟು ಸಾಕ್ಷ್ಯವಿದೆ ಎಂದು ಪ್ರತಿಪಾದಿಸಿದೆ. ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್‌ ಪ್ರಶ್ನಿಸಿ ಡಿ.ಕೆ.ಶಿವಕುಮಾರ್‌ ಮತ್ತಿತರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ.ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ, ಆರೋಪಿಗಳಿಗೆ ಸಮನ್ಸ್‌ ನೀಡಿರುವ ಜಾರಿ ನಿರ್ದೇಶನಾಲಯದ ಕ್ರಮ ಸರಿ ಇದೆ ಎಂದು ಹೇಳಿದರು.

Advertisement

“”ಹಣ ದುರ್ಬಳಕೆ ಕಾಯ್ದೆಯಡಿ ಇನ್ನೂ ತನಿಖೆ ನಡೆಯುತ್ತಿದೆ, ಸದ್ಯಕ್ಕೆ 120 ಬಿ ಅಡಿ ಒಳಸಂಚು ಆರೋಪ ಹೊರಿಸಲಾಗಿದೆ. ತನಿಖೆಯ ವೇಳೆ ಇನ್ನೂ ಬೇರೆ ರೂಪದ ಅಪರಾಧಗಳುಹೊರಬರಬಹುದು. ಆರೋಪಿ ಹಣ ದುರ್ಬಳಕೆ ಮಾತ್ರವಲ್ಲದೆ, ನೋಟು ಅಮಾನ್ಯಿàಕರಣ ಸಂದರ್ಭದಲ್ಲಿ ಅಕ್ರಮವಾಗಿ ಹಳೆಯ ನೋಟುಗಳ ವಿನಿಮಯ ಕಾರ್ಯದಲ್ಲೂ ಸಹ ಭಾಗಿಯಾಗಿದ್ದರು. ಆರೋಪಿಗಳಿಗೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ ಸರಿ ಇದೆ. ಅವರ ವಿರುದಟಛಿದ ಅಪರಾಧಿಕ ಪಿತೂರಿ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯವಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ ಆಲಿಸಿದ ನ್ಯಾಯ ಪೀಠ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next