Advertisement

ಬೇಸಿಗೆಯಲ್ಲಿ ಯಾವ ಬಟ್ಟೆ ಕಂಫರ್ಟ್ ? ಇಲ್ಲಿವೆ ಕೆಲವು ಟಿಪ್ಸ್

03:27 PM Apr 05, 2021 | Team Udayavani |

ಬೇಸಿಗೆ ಶುರುವಾಯಿತು ಅಂದರೆ ಎಲ್ಲರಿಗೂ ಒಂದೇ ಚಿಂತೆ, ಅದು ನೆತ್ತಿ ಸುಡುವ ಸೂರ್ಯನಿಂದ ಪಾರಾಗುವುದು ಹೇಗೆ ಎನ್ನುವುದು. ಸೂರ್ಯನ ಝಳಕ್ಕೆ ಬಸವಳಿದು ಹೋಗುವ ಜನರು ನಾನಾ ಸರ್ಕಸ್ ಮಾಡುತ್ತಾರೆ. ದೇಹ ತಂಪಾಗಿರಿಸಿಕೊಳ್ಳಲು ತಂಪು ಪಾನೀಗಳ ಮೊರೆ ಹೋಗುತ್ತಾರೆ, ಛತ್ರಿ ಹಿಡಿದು ರಸ್ತೆಗೆ ಇಳಿಯುತ್ತಾರೆ, ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಹೀಗೆ ಹಲವು ಬಗೆಯ ಉಪಾಯಗಳನ್ನು ಕಂಡುಕೊಳ್ಳುತ್ತಾರೆ. ಇವೆಲ್ಲವುದರ ಜೊತೆಗೆ ಸಮ್ಮರ್ ಟೈಮ್‍ನಲ್ಲಿ ನಾವು ತೊಡುವ ಬಟ್ಟೆಗಳ ಮೇಲೂ ಗಮನ ಹರಿಸಬೇಕಾಗುತ್ತದೆ.

Advertisement

ಹಾಗಾದರೆ ಬೇಸಿಗೆ ಕಾಲದಲ್ಲಿ ತೊಡುವ ಬಟ್ಟೆಗಳ ಬಗ್ಗೆ ಕೆಲವೊಂದು ಟಿಪ್ಸ್ ಇಲ್ಲಿವೆ ನೋಡಿ.

  • ಸೂರ್ಯನ ಶಾಖದಿಂದ ಚರ್ಮವನ್ನು ರಕ್ಷಿಸಲು ತುಂಬು ತೋಳಿನ ತೆಳು ಬಟ್ಟೆಗಳನ್ನು ಧರಿಸಿ.
  • ಬೇಸಿಗೆ ಕಾಲದಲ್ಲಿ ಸಡಿಲವಾದ ಹತ್ತಿಯಿಂದ ಸಿದ್ಧವಾದ ಉಡುಪುಗಳನ್ನು ಬಳಸಿದರೆ ದೇಹಕ್ಕೆ ಗಾಳಿ ಸಂಚಾರ ಸೂಕ್ತ ರೀತಿಯಲ್ಲಿ ಆಗಿ, ಆರೋಗ್ಯಕ್ಕೆ ಉತ್ತಮವಾಗುತ್ತದೆ.
  • ಹತ್ತಿ ಅಥವಾ ನಾರಿನಿಂದ ನೇಯ್ದ ಬಟ್ಟೆಗಳು ಬೇಸಿಗೆಯಲ್ಲೂ ನಿಮ್ಮನ್ನು ಖುಷಿಯಿಂದ ಇಡುತ್ತವೆ.
  • ನಮ್ಮ ದೇಹದ ಆಕಾರಕ್ಕೆ ಹೊಂದುವ ಮತ್ತು ಉತ್ತಮ ಬಣ್ಣದ ಆಯ್ಕೆ ಮಾಡುವುದು ಬೇಸಿಗೆಯಲ್ಲಿ ಅತಿ ಮುಖ್ಯ.
  • ಜರಿ ಬಟ್ಟೆಗಳು ಬೇಸಿಗೆಗೆ ಒಪ್ಪದು. ಸೀರೆ, ಚೂಡಿದಾರ್ ಯಾವುದೇ ಇರಲಿ ಹತ್ತಿ ಬಟ್ಟೆಯೇ ಸೊಗಸು.
  • ಉರಿಯುವ ಬಿಸಿಲಿನಿಂದ ಬೆವರುವುದು ಹೆಚ್ಚುತ್ತದೆ. ಸದಾ ಕರ್ಚೀಫ್‌­ನಿಂದ ಬೆವರು ಒರೆಸಿಕೊಳ್ಳು­ವುದು ಕಿರಿಕಿರಿ ಉಂಟುಮಾಡುತ್ತದೆ. ಅದಕ್ಕೇ ನಾವು ಧರಿಸುವ ಬಟ್ಟೆ ಕಾಲಕ್ಕೆ ತಕ್ಕಂತೆ ಇದ್ದಲ್ಲಿ ಈ ಕಿರಿಕಿರಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ.
  • ಬೇಸಿಗೆಯಲ್ಲಿ ಕಡುವರ್ಣದ ಉಡುಪು ಕಣ್ಣಿಗೆ ಹಿತವಾಗಿರುವುದಿಲ್ಲ. ಆದಷ್ಟೂ ತಿಳಿಬಣ್ಣದ ಉಡುಪು ಹೆಚ್ಚು ಖುಷಿ ಕೊಡುತ್ತದೆ. ಬಿಳಿ, ತಿಳಿನೀಲಿ, ತಿಳಿ ಹಸಿರು, ಗುಲಾಬಿ ವರ್ಣಗಳು ಹೆಚ್ಚು ಆಕರ್ಷಕ.
  • ಬೇಸಿಗೆಯಲ್ಲಿ ರೌಂಡ್ ನೆಕ್ ಹೆಚ್ಚು ಸೂಕ್ತ. ಅದರೆ ಆ ಡಿಸೈನ್ ನಿಮ್ಮ ದೇಹಕ್ಕೆ ಒಪ್ಪುವಂತಿರಬೇಕು.
Advertisement

Udayavani is now on Telegram. Click here to join our channel and stay updated with the latest news.

Next