Advertisement

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

08:59 PM May 17, 2024 | Team Udayavani |

ಚೆನ್ನೈ: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ. ತಮಿಳುನಾಡಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ತಾಪಮಾನವು ಒಂದೆರಡು ಡಿಗ್ರಿಗಳಷ್ಟು ಕಡಿಮೆಯಾಗಿದೆ.

Advertisement

ಕನ್ಯಾಕುಮಾರಿ ಜಿಲ್ಲೆಯ ಮೈಲಾಡಿಯಲ್ಲಿ 7 ಸೆಂ.ಮೀ ಮಳೆಯಾಗಿದ್ದರೆ, ತಿರುಚೆಂದೂರು, ವಾಲ್ಪಾರೈ ಮತ್ತು ನನ್ನಿಲಂನಲ್ಲಿ ತಲಾ 6 ಸೆಂ.ಮೀ, ಕಡಲೂರು ಮತ್ತು ಕೊಯಮತ್ತೂರಿನಲ್ಲಿ ತಲಾ 5 ಸೆಂ.ಮೀ ಮತ್ತು ಚೆಂಗಲ್ಪಟ್ಟು ನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕುರ್ಟಾಲಂನಲ್ಲಿ 16 ವರ್ಷದ ಬಾಲಕ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಏಕಾಏಕಿ ಭಾರೀ ನೀರು ಬಂದುದರಿಂದ ಕೊಚ್ಚಿಹೋದ ಘಟನೆ ನಡೆದಿದೆ.

ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ ನೀಲಗಿರಿ ಪ್ರದೇಶದಲ್ಲಿ ಎಲ್ಲೋ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲಾಡಳಿತವು ಪ್ರವಾಸಿಗರು ಬೇಸಿಗೆ ರಜೆಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡದಂತೆ ಕೇಳಿಕೊಂಡಿದೆ. ಪ್ರವಾಸಿಗರು ಮೇ 18 ರಿಂದ ಮೇ 20 ರವರೆಗೆ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸುವಂತೆ ಜಿಲ್ಲಾಧಿಕಾರಿ ಎಂ.ಅರುಣಾ ಮನವಿ ಮಾಡಿದ್ದಾರೆ.

Advertisement

ಮಳೆ ಬಂದು ತಂಪಾಗಿರುವ ವೇಳೆಯಲ್ಲಿ ಪ್ರವಾಸಿಗರು ಮತ್ತೊಮ್ಮೆ ಊಟಿಗೆ ಭಾರಿ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿರುವ ಸಮಯದಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಸ್ವಲ್ಪ ಸಮಯದವರೆಗೆ, ಪ್ರವಾಸಿ ಪಟ್ಟಣದಲ್ಲಿ ತಾಪಮಾನ ಏರಿಕೆಯಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಏಪ್ರಿಲ್ ತಿಂಗಳ ಕೊನೆಯಲ್ಲಿ ಊಟಿಯು ತನ್ನ ಅತ್ಯಧಿಕ ತಾಪಮಾನವನ್ನು ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next