Advertisement
ಕರಾವಳಿ ಭಾಗದಲ್ಲಿ ಜನವರಿಯಿಂದ ಮೇ 21ರ ವರೆಗೆ ವಾಡಿಕೆಯಂತೆ ಸುರಿಯಬೇಕಿದ್ದ ಮಳೆ 96.6 ಮಿ.ಮೀ. ಆದರೆ ಈ ಬಾರಿ 306.3 ಮಿ.ಮೀ. ಮಳೆ ಸುರಿದಿದ್ದು, ಶೇ. 217ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುರಿದ ಮಳೆ ಶೇ. 8ರಷ್ಟು ಕಡಿಮೆ. ಆದರೆ ಮುಂಗಾರು ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಬೇಸಗೆ ಮಳೆ ದಾಖಲೆಯಾಗಬಹುದು ಎನ್ನುವ ನಿರೀಕ್ಷೆಯಿದೆ.
Related Articles
Advertisement
ಕರಾವಳಿ ಭಾಗದಲ್ಲಿ 96.6 ಮಿ.ಮೀ. ವಾಡಿಕೆ ಮಳೆಯಲ್ಲಿ 306.3 ಮಿ.ಮೀ. ಮಳೆಯಾಗಿ ರಾಜ್ಯದಲ್ಲೇ ಅಧಿಕ ಶೇ. 217ರಷ್ಟು ಹೆಚ್ಚು ಮಳೆ ಸುರಿದಿದೆ. ರಾಜ್ಯಕ್ಕೆ ಹೋಲಿಕೆ ಮಾಡಿದರೆ ಬೀದರ್ (ಶೇ.-2) ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.
ಕರಾವಳಿಯಲ್ಲಿ ಪೂರ್ವ ಮುಂಗಾರು ಮಳೆ
(ವಾಡಿಕೆ ಮಳೆ: 158.2 ಮಿ.ಮೀ.)
ವರ್ಷ ಸುರಿದ ಮಳೆ ಶೇ.
2017 148 -13
2018 312 82
2019 44 -74
2020 149 -6
2021 514.7 225
2022 306.3 217
ಈ ಬಾರಿ ಕರಾವಳಿ ಸಹಿತ ರಾಜ್ಯದಲ್ಲಿಯೇ ಪೂರ್ವ ಮುಂಗಾರು ಉತ್ತಮವಾಗಿತ್ತು. ಅದರಲ್ಲೂ ಅಸಾನಿ ಚಂಡಮಾರುತದ ಪರಿಣಾಮ ಹಲವು ಭಾಗಗಳಲ್ಲಿ ಮಳೆಯಾಗಿತ್ತು. – ಡಾ| ರಾಜೇಗೌಡ, ಕೃಷಿ ವಿ.ವಿ. ಹವಾಮಾನ ವಿಜ್ಞಾನಿ
-ನವೀನ್ ಭಟ್ ಇಳಂತಿಲ