Advertisement
ಎಲ್ಲವೂ ಅಪೂರ್ಣಶಾಶ್ವತ ಪರಿಹಾರಕ್ಕಿರುವ 110 ಕೆ.ವಿ. ಸಬ್‌ಸ್ಟೇಷನ್ ಅನುಷ್ಠಾನ ಆರಂಭದ ಹಂತದಿಂದ ಚಿಗಿತುಕೊಂಡಿಲ್ಲ. ತಾತ್ಕಾಲಿಕ ಪರಿಹಾರಕ್ಕಿರುವ ಪುತ್ತೂರು-ಸುಳ್ಯ ನಡು ವಿನ 33 ಕೆ.ವಿ. ಹಳೆ ತಂತಿ ಮತ್ತು ಕಂಬ ಬದಲಾವಣೆ ಪೂರ್ಣವಾಗಿಲ್ಲ. ಎರಡನೇ ಕಾಮಗಾರಿ ಕೆಲ ತಿಂಗಳಲ್ಲಿ ಪೂರ್ಣ ಗೊಂಡರೂ ಅದರಿಂದ ಬೇಸಗೆಯ ಬವಣೆ ನೀಗದು. ಅದು ಸೋರಿಕೆಯಾಗುವ ವಿದ್ಯುತ್ ಉಳಿಸಬಹುದಷ್ಟೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಇನ್ನು ಹಲವು ವರ್ಷ ಕಾಯಬೇಕು ಎನ್ನುವ ಕೊರಗು ಜನರದ್ದಾಗಿದೆ.
ತಾಲೂಕಿನಲ್ಲಿ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ದಲ್ಲಿ 33 ಕೆ.ವಿ. ಸಬ್‌ಸ್ಟೇಷನ್ ಗಳು ಇವೆ. 18 μàಡರ್‌ಗಳಿವೆ. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯಕ್ಕೆ ಪುತ್ತೂರು 110 ಕೆ.ವಿ. ಸಬ್‌ಸ್ಟೇಷನ್‌ನಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಇಲ್ಲಿ 53 ಸಾವಿರಕ್ಕೂ ಅಧಿಕ ವಿದ್ಯುತ್ ಸಂಪರ್ಕಗಳಿವೆ. ಇದರಲ್ಲಿ 44 ಸಾವಿರ ಮನೆ, ವಾಣಿಜ್ಯ ಕಟ್ಟಡ, 12 ಸಾವಿರ ಕೃಷಿಗೆ ಸಂಪರ್ಕವಿದೆ. ಇಡೀ ಸುಳ್ಯ ತಾಲೂಕಿಗೆ ವಿದ್ಯುತ್ ಪೂರೈಕೆಯಾಗುವುದು ಪುತ್ತೂರಿನ 110 ಕೆ.ವಿ. ಸಬ್‌ಸ್ಟೇಷನ್‌ನಿಂದ. ಸುಳ್ಯ 33 ಕೆ.ವಿ. ಸಬ್‌ಸ್ಟೇಷನ್‌ನಿಂದ ಗೃಹ ಮತ್ತು ಗೃಹೇತರ ಬಳಕೆದಾರರಿಗೆ ಒದಗಿಸಲಾಗುತ್ತದೆ. ಕೃಷಿಕರ ಸಮಸ್ಯೆ
ಈ ಬಾರಿಯ ಬಿಸಿಲಿನ ತೀವ್ರತೆ ಕಂಡರೆ, ನವೆಂಬರ್‌ನಲ್ಲೇ ವಿದ್ಯುತ್ ಅಭಾವ ಉದ್ಭವಿಸುವ ಸಾಧ್ಯತೆ ಅಧಿಕವಾಗಿದೆ. ಪ್ರತಿ ಬಾರಿ ಜನವರಿಯಲ್ಲಿ ಸಮಸ್ಯೆ ಆರಂಭಗೊಂಡು, ಎಪ್ರಿಲ್-ಮೇ ಅಂತ್ಯದ ತನಕ ಇರುತ್ತದೆ. ಹೊಳೆ, ತೋಡು, ನದಿಗಳಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಕೊಳವೆ ಬಾವಿಯಿಂದ ನೀರು ಹಾಯಿಸುವ ಕಾರ್ಯಅನಿವಾರ್ಯವೆನಿಸಿದೆ.
Related Articles
ಪುತ್ತೂರಿನಲ್ಲಿ 20 ಎಂವಿಎ ಸಾಮರ್ಥ್ಯದ ಹೆಚ್ಚುವರಿ ಪರಿವರ್ತಕ ಅಳವಡಿಸಿದರೆ ಬೇಸಗೆಯಲ್ಲಿ ಸುಳ್ಯದ ಸಮಸ್ಯೆ ನೀಗ ಬಹುದು. ಇದರಿಂದ ಸುಳ್ಯದಲ್ಲಿ ವಿದ್ಯುತ್ ಧಾರಣ ಸಾಮರ್ಥ್ಯ ಈಗಿರುವ 8 ಮೆಗಾ ವ್ಯಾಟ್‌ನಿಂದ 18ರಿಂದ 20 ಮೆ.ವ್ಯಾ. ತನಕ ಸಂಗ್ರಹಿಸಲು ಸಾಧ್ಯವಿದೆ ಎನ್ನುವುದು ಮೆಸ್ಕಾಂ ಜಿಲ್ಲಾಮಟ್ಟದ ಅಧಿಕಾರಿಗಳ ಮಾತು.
Advertisement
ಪರಿಹಾರ ಸಾಧ್ಯಹೆಚ್ಚುವರಿ 20 ಎಂವಿಎ ಪರಿವರ್ತಕ ಸ್ಥಾಪಿಸುವಂತೆ ಕೆಪಿಟಿಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿ ಡಿಪಿಆರ್ ಮುಗಿದು ಟೆಂಡರ್‌ಗೆ ಬಾಕಿ ಇದೆ. ಡಿಸೆಂಬರ್ ಒಳಗೆ ಪೂರ್ಣ ಗೊಳಿಸಿದರೆ ಬೇಸಗೆಯಲ್ಲಿ ಸುಳ್ಯಕ್ಕೆ ಅನಿಯಮಿತ ವಿದ್ಯುತ್ ಪೂರೈಸಲು ಸಾಧ್ಯವಿದೆ.
– ಮಂಜಪ್ಪ ಅಧೀಕ್ಷಕ ಎಂಜಿನಿಯರ್, ಮೆಸ್ಕಾಂ
ಮಂಗಳೂರು ವೃತ್ತ ಕಿರಣ್ ಪ್ರಸಾದ್ ಕುಂಡಡ್ಕ