ತೋಕೂರು: ಮಕ್ಕಳ ಮನೋವಿಕಾಸಕ್ಕೆ ವೇದಿಕೆಯನ್ನು ನೀಡಿ ಅವರಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿರಿ, ಬೇಸಗೆ ಶಿಬಿರಗಳು ಅರ್ಥಪೂರ್ಣವಾಗಿ ನಡೆಯಲಿ ಎಂದು ತೋಕೂರು ಯುವಕ ಸಂಘದ ಅಧ್ಯಕ್ಷ ಹೇಮನಾಥ ಅಮೀನ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ನ ಸಭಾಂಗಣದಲ್ಲಿ ಕ್ಲಬ್‌ನ ಸಂಯೋಜನೆಯಲ್ಲಿ ನಡೆದ ಮಕ್ಕಳ ಬೇಸಗೆ ಶಿಬಿರದ ಅಂಗವಾಗಿ ಜರಗಿದ “ಮಕ್ಕಳ ಸ್ಪರ್ಧೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.
ಉಪಾಧ್ಯಕ್ಷ ಮುಖೇಶ್ ಸುವರ್ಣ, ಕಾರ್ಯದರ್ಶಿ ಸಂತೋಷ್ ದೇವಾಡಿಗ,ಕ್ರೀಡಾ ಕಾರ್ಯದರ್ಶಿ ಗಣೇಶ್ ದೇವಾಡಿಗ, ಜತೆ ಕಾರ್ಯದರ್ಶಿಗಳಾದ ಜಗದೀಶ್ ಕುಲಾಲ್,ಗೌತಮ್ ಬೆಲ್ಚಡ,ಸದಸ್ಯರಾದ ನಾರಾಯಣ ಜಿ.ಕೆ.,ಮಹೇಶ್ ಸುವರ್ಣ,ಸುರೇಶ್ ಶೆಟ್ಟಿ,ವಿಶ್ವನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.
ಸ್ಪರ್ಧಾ ಕೂಟದಲ್ಲಿ ತೀರ್ಪುಗಾರರಾಗಿ ಸುಭಾಷ್ ಅಮೀನ್, ಜಯಂತ್ ಕುಂದರ್,ಕಲ್ಪೇಶ್ ಪೂಜಾರಿ,ಕಾರ್ತಿಕ್ ಕೋಟ್ಯಾನ್,ಜಗದೀಶ್ ಕೋಟ್ಯಾನ್,ಮೋಹನ್ ದಾಸ್,ವಿಶಾಲ್ ಕುಮಾರ್, ಪದ್ಮನಾಭ ಶೆಟ್ಟಿ, ಅರ್ಫಾಜ್, ಕ್ರಿಕೇಡ್ ತಂಡದ ನಾಯಕ ಯೂನೂಸ್, ದೀಪಕ್ ದೇವಾಡಿಗ,ಸಂಪತ್ ದೇವಾಡಿಗ,ಜಗದೀಶ್ ಬೆಲ್ಚಡ,ಮಹೇಶ್ ಬೆಲ್ಚಡ,ಕಿರಣ್ ಬೆಲ್ಚಡ,ರಣ್ ಬೆಲ್ಚಡ,ಗೌರೀಶ್ ಬೆಲ್ಚಡ ಸಹಕರಿಸಿದ್ದರು.
ಸ್ಪರ್ಧೆಗಳು
ಎಲ್ ಕೆಜಿಯಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ಓಟದ ಸ್ಪರ್ಧೆ,ಬಾಲ್ ಪಾಸಿಂಗ್ ಆಟ, ಸಂಗೀತ ಕುರ್ಚಿ, ಬಲೂನ್ ಆಟ,ಸ್ಮರಣಾ ಶಕ್ತಿ ಪರೀಕ್ಷೆ , ತಲೆಯ ಮೇಲೆ ಪುಸ್ತಕ ಇಟ್ಟು ನಿಧಾನ ಓಟ ಸ್ಪರ್ಧೆ ಮತ್ತು ವಿಶಿಷ್ಟ ರೀತಿಯಲ್ಲಿ ಚಕ್ಕುಲಿ ತಿನ್ನುವ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ 50 ಮಕ್ಕಳು ಭಾಗವಹಿಸಿದ್ದರು.