Advertisement

Australian Open; ಶ್ರೇಯಾಂಕಿತ ಆಟಗಾರನ ವಿರುದ್ಧ ಗೆದ್ದು ಇತಿಹಾಸ ಬರೆದ ಸುಮಿತ್ ನಾಗಲ್

01:29 PM Jan 16, 2024 | Team Udayavani |

ಮೆಲ್ಬೋರ್ನ್: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಭಾರತದ ಯುವ ಆಟಗಾರ ಸುಮಿತ್ ನಾಗಲ್ ಅವರು ಮೊದಲ ಸುತ್ತು ಜಯಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ಸಮಿತ್ ಅವರು 27ನೇ ಕ್ರಮಾಂಕದ ಆಟಗಾರ ಅಲೆಕ್ಸಂಡರ್ ಬಬ್ಲಿಕ್ ಅವರನ್ನು ಮಣಿಸಿದರು.

Advertisement

ಆರಂಭದಿಂದಲೇ ಎದುರಾಳಿಯ ಮೇಲೆ ಮುನ್ನುಗ್ಗಿ ಸಾಗಿದ ಸುಮಿತ್ ನಾಗಲ್ ಮೊದಲೆರಡು ಸೆಟ್ ಗಳನ್ನು ಸುಲಭದಲ್ಲಿ ಗೆದ್ದರು. 6-4, 6-2 ಅಂತರದಿಂದ ಮೊದಲೆರಡು ಸೆಟ್ ಗಳು ಹರ್ಯಾಣ ಮೂಲದ ಭಾರತೀಯ ಆಟಗಾರನಿಗೆ ಒಲಿಯಿತು.

ಮೂರನೇ ಸೆಟ್ ಉಭಯ ಆಟಗಾರರ ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು. ಮೊದಲ ಆರು ಗೇಮ್‌ ಗಳಲ್ಲಿ ಇಬ್ಬರು ಆಟಗಾರರು ಜಿದ್ದಾಜಿದ್ದಿನಿಂದ ಸಾಗಿದರು. ನಾಗಲ್ ಬಳಿಕ 5-3 ಅಂತರದ ಮುನ್ನಡೆ ಸಾಧಿಸಿದರು. ಆದರೆ ಮುಂದಿನ ಸೆಟ್ ಗೆದ್ದ ಬಬ್ಲಿಕ್ ಪಂದ್ಯವನ್ನು ಸುಲಭದಲ್ಲಿ ಸುಮಿತ್ ಕೈಗಿಡಲಿಲ್ಲ. ಒಂದು ಹಂತದಲ್ಲಿ ಬಲಾಢ್ಯ ಆಟ ಪ್ರದರ್ಶಿಸಿದ ಕಜಕಿಸ್ತಾನದ ಬಬ್ಲಿಕ್ ಆಟವನ್ನು 5-5ರ ಸಮಬಲಕ್ಕೆ ತಂದರು.

ಮುಂದೆ ಪಂದ್ಯ ಟೈ ಬ್ರೇಕರ್‌ ಗೆ ಸಾಗಿ, ಅಲ್ಲಿ ನಾಗಲ್ 7-5 ರಿಂದ ವಿಜಯಶಾಲಿಯಾದರು. ಈ ಮೂಲಕ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ ಸುಮಿತ್ ನಾಗಲ್ 6-4, 6-2, 7-6 ರ ನೇರ ಸೆಟ್ ಗಳಲ್ಲಿ ಸೋಲಿಸಿದರು.

ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ 1989 ರ ನಂತರ ಮೊದಲ ಬಾರಿಗೆ ಭಾರತೀಯ ಆಟಗಾರ ಶ್ರೇಯಾಂಕ ಹೊಂದಿದ ಆಟಗಾರನನ್ನು ಸೋಲಿಸಿದರು.

Advertisement

ಇದನ್ನೂ ಓದಿ:Threat: ಪಂಜಾಬ್ ಸಿಎಂ ಮತ್ತು DGP ಗೆ ಜೀವ ಬೆದರಿಕೆ ಹಾಕಿದ ಖಾಲಿಸ್ತಾನಿ ಭಯೋತ್ಪಾದಕ ಪನ್ನೂನ್

ನಾಗಲ್ ಅವರ ಎರಡನೇ ಸುತ್ತಿನ ಅರ್ಹತೆ ಭಾರತೀಯರಿಗೆ ಟೆನಿಸ್ ಇತಿಹಾಸದಲ್ಲಿ ಸ್ಮರಣೀಯ ಸಾಧನೆಯಾಗಿದೆ. ಪುರುಷರ ಸಿಂಗಲ್ಸ್ ಕೂಟಗಳಲ್ಲಿ, ಆಸ್ಟ್ರೇಲಿಯನ್ ಓಪನ್‌ ನಲ್ಲಿ ಯಾವುದೇ ಭಾರತೀಯ ಟೆನಿಸ್ ಆಟಗಾರನ ದೊಡ್ಡ ಸಾಧನೆಯೆಂದರೆ ಮೂರನೇ ಸುತ್ತನ್ನು ತಲುಪಿರುವುದು.

ಭಾರತೀಯ ದಂತಕತೆ ರಮೇಶ್ ಕೃಷ್ಣನ್ ಅವರು ಆಸ್ಟ್ರೇಲಿಯನ್ ಓಪನ್‌ ನಲ್ಲಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು ಐದು ಬಾರಿ ಮೂರನೇ ಸುತ್ತಿಗೆ ಅರ್ಹತೆ ಪಡೆದಿದ್ದರು. ಅವರು 1983, 1984, 1987, 1988 ಮತ್ತು 1989 ರ ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದರು. ಅವರು 1989 ರಲ್ಲಿ ಎರಡನೇ ಸುತ್ತಿನಲ್ಲಿ ವಿಶ್ವದ ನಂ. 1 ಮ್ಯಾಟ್ಸ್ ವಿಲಾಂಡರ್ ಅವರನ್ನು ಸೋಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next