Advertisement
ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಜನರ ಕೆಲಸ ಮಾಡುತ್ತಿಲ್ಲ. ನನ್ನನ್ನು ಮಾಡಲು ಬಿಡುತ್ತಿಲ್ಲ. ರಾಜಕಾರಣ ಮಾಡುತ್ತಲೇ ಇರುವುದರಿಂದ ಜನರು ಬೇಸತ್ತಿದ್ದಾರೆ. ಜನರ ಕೆಲಸ ಯಾವಾಗ ಮಾಡುತ್ತೀರಾ?. ಅಕ್ರಮ ಗಣಿಗಾರಿಕೆಯಿಂದ ನನಗೇನು ಆಗಬೇಕು. ಅದರಿಂದ ಯರ‍್ಯಾರು ಲಾಭ ಪಡೆಯುತ್ತಿದ್ದಾರೆ ಎಂಬುದು ಬಹಿರಂಗ ಸತ್ಯ. ಯರ‍್ಯಾರ ಕೈವಾಡ ಇದೆ. ಯರ‍್ಯಾರಿಗೆ ಎಲ್ಲಿಂದ ದುಡ್ಡು ಹೋಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತಿದರೆ ದಬ್ಬಾಳಿಕೆ, ಬೆದರಿಕೆ ಹಾಗೂ ಬ್ಲಾö್ಯಕ್‌ಮೇಲ್ ಮಾಡುತ್ತೀರಾ?. ಯಾವುದೋ ಆಡಿಯೋ ಬಾಂಬ್ ಅಂಥೆ. ಇಂಥ ಬೆದರಿಕೆಗೆ ನಾನು ಹೆದರಿಕೊಂಡಿದ್ದರೆ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ೮ ಜನ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಮೂವರು ಸಚಿವರನ್ನು ಹೆದರಿಸಿ ಹೋರಾಡಿದವಳು ನಾನು. ಇವತ್ತು ಹೆದರಿಸಿ ಬಿಟ್ಟರೆ ಹೆದರಿಕೊಂಡು ಹೋಗಿ ಬಿಡುತ್ತೀನಾ?, ಯಾರೋ ಒಬ್ಬರು ಹೇಳುತ್ತಾರೆ ಮಿಸೈಲ್, ಬಾಂಬ್ ಇದೆ ಎನ್ನುತ್ತಾರೆ. ಇವರು ಶಾಸಕರಾ ಅಥವಾ ಟೆರರಿಸ್ಟ್ಗಳಾ?, ನೀವು ಜನಪ್ರತಿನಿಧಿಗಳು ಬಳಸುವ ಪದಗಳು ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಜನರಿಗೆ ಯಾವ ರೀತಿ ಉತ್ತರ ಕೊಡುತ್ತೀರಾ?. ಮಹಿಳೆಯರ ಬಗ್ಗೆ ಗೌರವ ಇಲ್ಲ. ಜನರ ಬಗ್ಗೆ ಕಾಳಜಿ ಇಲ್ಲ. ಒಬ್ಬೊಬ್ಬರು ಒಂದು ರೀತಿ ಮಾತನಾಡುತ್ತೀರಾ?. ಮಂಡ್ಯದ ಜನ ಮೋಸ ಹೋಗಲ್ಲ. ತುಂಬಾ ಬುದ್ಧಿವಂತರಿದ್ದಾರೆ ಎಂದರು. ಸ್ಫೋಟಕ ಬಳಸಬಾರದು:
ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತ ೨೦ ಕಿ.ಮೀ ವ್ಯಾಪ್ತಿಯಲ್ಲಿ ಸ್ಫೋಟಕಗಳನ್ನು ಬಳಸಬಾರದು. ಒಂದು ವರ್ಷದ ಕೆಲಸವನ್ನು ಒಂದೇ ದಿನದಲ್ಲಿ ಮಾಡುವ ತರಾತುರಿಯಿಂದ ಅಕ್ರಮವಾಗಿ ಭಾರಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಸಾವಿರಾರು ಅಡಿವರೆಗೂ ಕಲ್ಲು ಕೊರೆಯಲಾಗುತ್ತಿದೆ. ಇದರಿಂದ ಪರಿಸರಕ್ಕೆ ಯಾವ ರೀತಿ ತೊಂದರೆಯಾಗಬಹುದು ಎಂಬುದನ್ನು ಅರಿಯಬೇಕಾಗಿದೆ ಎಂದರು.
Related Articles
Advertisement
ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿ:ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಆಯ್ಕೆ ಮಾಡಿರುವ ಜನರಿಗೆ ಉತ್ತರ ಕೊಡಲು ನಾನು ಸಿದ್ಧಳಿದ್ದೇನೆ. ಬೇರೆ ಯಾರೋ ಯಾವುದೋ ಉದ್ದೇಶ ಇಟ್ಟುಕೊಂಡು ಪ್ರಶ್ನೆ ಕೇಳಿದವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಸಂಸದೆ ಸುಮಲತಾಅಂಬರೀಷ್ ಕಿಡಿಕಾರಿದರು. ಪಾಪ ಅನಿಸುತ್ತಿದೆ:
ರವೀಂದ್ರ ಶ್ರೀಕಂಠಯ್ಯ ವಿಷಯಕ್ಕೆ ಬಂದರೆ ನಿಜವಾಗಲೂ ಪಾಪ ಅನಿಸುತ್ತಿದೆ. ಏಕೆ ನಿಮಗೆ ಭಯವಾಗುತ್ತಿದೆ. ಯಾಕೆ ಅಷ್ಟೊಂದು ಚಿಂತೆ. ಮಾತಿನ ಭರ ವೇಗ ನೋಡುತ್ತಿದ್ದರೆ, ಭಯಬಿದ್ದವರಂತೆ ಕಾಣುತ್ತಿದ್ದಾರೆ. ನಾನು ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡುತ್ತಿದ್ದೇನೆ. ನಿಮ್ಮಲ್ಲಿ ಅಕ್ರಮ ಗಣಿಗಾರಿಕೆ ಇಲ್ಲ ಅಂದರೆ ಭಯ ಏಕೆ?, ನನ್ನಿಂದ ನಿಮಗೆ ಏನು ತೊಂದರೆ, ನಿಮ್ಮಲ್ಲಿ ಎಲ್ಲವೂ ಸಕ್ರಮವಾಗಿ ಎಂದರೆ ಇಷ್ಟೊಂದು ಭಯದಿಂದ ಮಾತನಾಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು. ಅಂಬರೀಷ್ ಮುಂದೆ ಕೈಕಟ್ಟಿ ನಿಂತಿದ್ದರು:
ನಮ್ಮ ಪಕ್ಷದಿಂದ ನಿಮ್ಮಂಥ ಸಾವಿರಾರು ಮಂದಿಯನ್ನು ತಯಾರಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಆ ಪಕ್ಷದವರ ನಡವಳಿಕೆಯಿಂದ ಪಕ್ಷದಿಂದ ಹೊರ ಬಂದವರನ್ನು ನಾನು ನೋಡಿದ್ದೇನೆ. ಅಲ್ಲದೆ, ದೊಡ್ಡ ದೊಡ್ಡವರನ್ನು ತಯಾರಿಸಿರುವ ಪಕ್ಷದ ನಾಯಕರು, ಅದಕ್ಕಿಂತ ದೊಡ್ಡವರು ನಮ್ಮ ಮನೆಯಲ್ಲಿ ಅಂಬರೀಷ್ ಮುಂದೆ ಕೈಕಟ್ಟಿಕೊಂಡು ನಿಂತಿದ್ದವರನ್ನು ಹಲವಾರು ವರ್ಷಗಳಲ್ಲಿ ನೋಡಿದ್ದೇನೆ. ನಿಮ್ಮಿಂದ ನಾನೇನು ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ :ಕೋವಿಡ್ ನಾಲ್ಕನೇ ಅಲೆ : ನೈರುತ್ಯ ಚೀನಾ ಸಂಪೂರ್ಣ ಲಾಕ್ ಡೌನ್ ಕುಮಾರಸ್ವಾಮಿ ಅವರಿಗೆ ತಪ್ಪು ಒಪ್ಪಿಕೊಳ್ಳಲು ಇಷ್ಟವಿಲ್ಲ:
ಮಾಜಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಪ್ಪಿನ ಅರಿವಾಗಿದೆ. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಥಿತಿ ಇಲ್ಲದಿರುವಾಗ ಅಂಥವರಿಗೆ ಏನು ಹೇಳುವುದು ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಕ್ಷಮೆ ಕೇಳುವಂಥ ಪದ ಬಳಕೆ ಮಾಡಿಲ್ಲ ಎಂಬ ಹೇಳಿಕೆಗೆ ಸುಮಲತಾ ಪ್ರತಿಕ್ರಿಯಿಸಿದರು. ಹಣ ವಸೂಲಿ ನಿಮ್ಮ ಸಂಸ್ಕಾರ ಇರಬಹುದು:
ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಗಣಿಗಾರಿಕೆ ಪ್ರದೇಶಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರು ಹಿಂದಿನಿAದಲೂ ಇದೇ ರೀತಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿಕೊಂಡು ಬಂದಿರುವ ಸಂಸ್ಕೃತಿ ಇರಬಹುದು. ಅದಕ್ಕಾಗಿ ನನಗೂ ಹೇಳುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿದ್ದವರು ಅವರು ನಡೆದುಕೊಂಡು ಬಂದಿರುವ ದಾರಿಯಾಗಿರಬಹುದು. ಪದೇ ಪದೇ ನಿಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಜನರಿಗೆ ಎತ್ತಿ ತೋರಿಸುತ್ತಿದ್ದೀರಾ ಎಂದು ಕಿಡಿಕಾರಿದರು. ಸಿನಿಮಾದವರ ಬಗ್ಗೆ ತಪ್ಪಾಗಿ ಮಾತನಾಡಬೇಡಿ:
ಸಿನಿಮಾದಲ್ಲಿ ಅವರು ಇದ್ದಾರೆ. ಅವರ ಮಗನೂ ಇದ್ದಾರೆ. ಸಿನಿಮಾದವರ ಬಗ್ಗೆ ತಪ್ಪಾಗಿ ಮಾತನಾಡಿದರೆ ನಾನು ಸುಮ್ಮನಿರಲ್ಲ. ಸಿನಿಮಾದಲ್ಲಿ ಒಳ್ಳೆಯ ಸಂಸ್ಕಾರ ಇದೆ. ಈ ರೀತಿ ಮಾತನಾಡುವವರು ಯಾರೂ ಇಲ್ಲ. ಹಿರಿಯರಿಗೆ ಹಾಗೂ ಮಹಿಳೆಯರಿಗೆ ಗೌರವ ಕೊಡುವ ಸಂಸ್ಕೃತಿ ಇದೆ. ದುಡಿದು ಜೀವನ ನಡೆಸುತ್ತಿದ್ದಾರೆ. ಆದರೆ ಇವರಂಥ ನಟಿಸುವ ದೊಡ್ಡ ನಟರು ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು. ಅವರು ಎಲ್ಲಿ ಬೇಕಾದರೂ ರಾಜಕಾರಣ ಮಾಡಿಕೊಳ್ಳಲಿ. ಆದರೆ ನಾನು ಈ ಜಿಲ್ಲೆಯ ಸಂಸದಳಾಗಿ ನನ್ನ ಕೆಲಸ ನಾನು ಮಾಡಲು ಬಿಡಿ. ಅವರು ಚನ್ನಪಟ್ಟಣಕ್ಕೆ ಶಾಸಕರಾಗಿದ್ದಾರೆ. ಅವರ ಕೆಲಸ ಅವರು ಮಾಡಲಿ ಎಂದರು. ಮೈಷುಗರ್ ವಿಚಾರಕ್ಕೆ ಸಂಬAಧಿಸಿದAತೆ ಅಂದೇ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಆದರೆ ಅವರು ಸರ್ಕಾರದಿಂದ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನೀಡಿದ ಅನುದಾನ ಎಲ್ಲೆಲ್ಲಿ ಹೋಯಿತು ಎಂಬುದು ಗೊತ್ತಿಲ್ಲ. ಆದ್ದರಿಂದ ಮತ್ತೆ ಆ ತಪ್ಪು ಮಾಡಲ್ಲ ಎಂದರು. ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ನೀವು ಸರ್ಕಾರವೇ ನಡೆಸಬೇಕು ಎಂದು ಒತ್ತಾಯ ಮಾಡುತ್ತಿರುವ ಉದ್ದೇಶ ಏನಿರಬಹುದು ಎಂದು ಪ್ರಶ್ನಿಸಿದರು.