Advertisement
ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಜಲಾಶಯಕ್ಕೆ ಹೈ ಸೆಕ್ಯೂರಿಟಿ ಇರಬೇಕಾದ ಸ್ಥಳವಾಗಿದೆ. ಆದರೆ ನಾಲ್ಕು ಜನ ಮೋಜು ಮಸ್ತಿ ಮಾಡಲು ಬರುತ್ತಾರೆ ಅಂದರೆ ಏನ್ ಅರ್ಥ ಇದು. ಆದರೆ ಡ್ಯಾಂ ಸೆಕ್ಯೂರ್ ಆಗಿದೆ ಎಂದು ಕೂತ್ಕೊಂಡು ಹೇಳುವವರು ತಿಳಿಸಬೇಕು. ಅವರು ಇದರ ಬಗ್ಗೆ ಯಾಕೆ ಮಾತನಾಡಲ್ಲ. ಐದೇ ನಿಮಿಷದಲ್ಲಿ ಏನೆಲ್ಲ ಮಾಡಬಹುದು ಎಂಬ ಅರಿವು ಇಲ್ಲವೇ?. ಗಣಿ ಸಚಿವರನ್ನು ಇಲ್ಲಿಗೆ ಕರೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಸಮಯಾವಕಾಶ ಅಗತ್ಯವಿದೆ ಎಂದರು.
ಹೆಚ್ಚಿನ ಭದ್ರತೆ ಒದಗಿಸಬೇಕಾದಂತ ಜಾಗದಲ್ಲಿ ಮೋಜು ಮಸ್ತಿ ಮಾಡಲಾಗುತ್ತಿದೆ. ಯುವಕರು ಬಂದು ಪಾರ್ಟಿ ಮಾಡುತ್ತಾರೆ. ನಾಳೆ ದಿನ ಯಾರಾದರೂ ಬಂದರೆ ರಿಸ್ಕ್ ಅಲ್ವ?, ಕೆಆರ್‌ಎಸ್ ಡ್ಯಾಂ ಸೇಫ್ ಅಂತಾ ಒಬ್ಬಬ್ಬರು ಕುಳಿತು ಹೇಳುತ್ತಿದ್ದಾರೆ. ವಿಧಾನಸೌಧ ಒಳಗಡೆ ಹೋಗುವುದಕ್ಕೆ ಪರಿಶೀಲನೆ ಮಾಡುತ್ತಾರೆ. ಕೆಆರ್‌ಎಸ್ ಡ್ಯಾಂ ಭದ್ರತೆ ವಿಚಾರವಾಗಿ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದರು. ಇದನ್ನೂ ಓದಿ :ಮನೆ ಗೋಡೆ ಕುಸಿತ, ಮಹಿಳೆ ಸಾವು ; ಸ್ಥಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ
Related Articles
ಕೆಆರ್‌ಎಸ್ ಡ್ಯಾಂ ಸುತ್ತಮುತ್ತಲಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಕೇಳಿದರೆ ಅಧಿಕಾರಿಗಳು 2018ರಿಂದ ಗಣಿಗಾರಿಕೆ ನಡೆಯುತ್ತಿಲ್ಲ ಅಂತಾರೆ. ಬ್ಲಾಸ್ಟಿಂಗ್‌ನಿಂದ ಕೆಆರ್‌ಎಸ್ ಡ್ಯಾಂಗೆ ಯಾವುದೇ ಅಪಾಯವಿಲ್ಲ ಅಂತ ಸರ್ಟಿಫಿಕೇಟ್ ಕೊಡುವುದು ನೀವಾ ಅಂತಾ ಕೇಳಿದರೆ ನಾವಲ್ಲ ಅಂತಾರೆ. ಡ್ಯಾಂನ ಸುತ್ತಮುತ್ತಲಿನಲ್ಲಿ ರಿಸ್ಕಿ ಕೆಲಸ ನಡೆಯುತ್ತಿದೆ. ಡ್ಯಾಂಗೆ ತೊಂದರೆ ಆದರೆ ರೈತರು ಸತ್ತೇ ಹೋಗುತ್ತಾರೆ ಎಂದು ಹೇಳಿದರು.
Advertisement