Advertisement

Lok Sabha: ಸುಮಲತಾ ಪರ ಮತ್ತೆ ಪ್ರಚಾರಕ್ಕೆ ಇಳಿಯುತ್ತಾರ ಜೋಡೆತ್ತು; ಸಂಸದೆ ಹೇಳಿದ್ದೇನು?

12:54 PM Mar 04, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯ ಕಾವು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಇತ್ತ ಮಂಡ್ಯದಲ್ಲಿ ಟಿಕೆಟ್‌ ಗಾಗಿ ತೆರೆಮರೆಯಲ್ಲಿ ಪೈಪೋಟಿ ಶುರುವಾಗಿದೆ. ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರ ಟಿಕೆಟ್‌ ನಿರೀಕ್ಷೆ ಈ ಬಾರಿ ಅಷ್ಟು ಸುಲಭವಾಗಿಲ್ಲ. ಅದಕ್ಕೆ ಕಾರಣ ಜೆಡಿಎಸ್‌ – ಬಿಜೆಪಿ ಮೈತ್ರಿ.

Advertisement

ಈ ಹಿಂದೆ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಜಯಭೇರಿಗಳಿಸಿದ್ದರು. ಕಳೆದ ಬಾರಿ ಸುಮಲತಾ ಅವರ ಪರವಾಗಿ ಮತ ಪ್ರಚಾರಕ್ಕೆ ಸ್ಟಾರ್‌ ನಟರಾದ ಯಶ್‌ ಹಾಗೂ ದರ್ಶನ್‌ ಅವರು ಬಂದಿದ್ದರು. ಜನ ಚುನಾವಣಾ ಪ್ರಚಾರಕ್ಕೆ ಬಂದ ಯಶ್‌ ಹಾಗೂ ದರ್ಶನ್‌ ಅವರನ್ನು ನೋಡಲು ಹರಿದು ಬಂದಿದ್ದರು.

ಈ ಬಾರಿ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸುತ್ತಾರಾ, ಸ್ಪರ್ಧಿಸಿದ್ದರೆ ಈ ಬಾರಿಯೂ ಯಶ್‌ ಹಾಗೂ ದರ್ಶನ್‌ ಪ್ರಚಾರಕ್ಕೆ ಬರುತ್ತಾರಾ? ಎನ್ನುವ ಮಾತುಗಳು ಮಂಡ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಮದರ್ ಇಂಡಿಯಾ ಎಲ್ಲೇ ಸ್ಪರ್ಧಿಸಿದರೂ ಬೆಂಬಲ ಇರುತ್ತದೆ ಎಂದು ದರ್ಶನ್‌ ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿ ಹೇಳಿದ್ದರು.

ಮಾಧ್ಯಮದವರು ಸಂಸದೆ ಸುಮಲತಾ ಅವರ ಬಳಿ ಈ ಬಾರಿ ಯಶ್‌ ಚುನಾವಣಾ ಪ್ರಚಾರಕ್ಕೆ ಬರುತ್ತಾರಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.

Advertisement

“ಕಳೆದ ಚುನಾವಣೆ ಬಳಿಕ ಯಶ್‌ ಜೊತೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ರಾಜಕಾರಣ ಎಂದರೆ ಇಷ್ಟು ಕಹಿ ಇರುತ್ತದೆಯೇ, ಇಷ್ಟೊಂದು ಟೀಕೆ ಇರುತ್ತದೆಯೇ ಎಂದು ಬೇಸರ ಮಾಡಿಕೊಂಡಿದ್ದರು. ನಿಮ್ಮ ಚುನಾವಣೆಯಲ್ಲಿ ಆ ಬಗ್ಗೆ ಗೊತ್ತಾಯ್ತು ಎಂದಿದ್ದರು. ಅವರು ಪ್ಯಾನ್ ಇಂಡಿಯಾ ಸ್ಟಾರ್. ಅವರು ಬ್ಯುಸಿ ಆಗಿದ್ದಾರೆ. ಅವರಿಂದ ಮತ್ತೆ ಇದನ್ನು ನಿರೀಕ್ಷಿಸೋಕೆ ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

“ಯಶ್ ಪ್ರಚಾರಕ್ಕೆ ಬರ್ತೀನಿ ಅಂದ್ರೆ ನನ್ನಷ್ಟು ಸಂತೋಷಪಡುವವರು ಯಾರು ಇಲ್ಲ. ಬರೋಕ್ಕಾಗಲ್ಲ ಅಂದ್ರು ಏನು ಮಾಡೋಕ್ಕಾಗಲ್ಲ. ಕಳೆದ ಬಾರಿ ಕೂಡ ನಾನು ಯಾರನ್ನು ಕೇಳಿ ಬರಲಿಲ್ಲ. ಮನೆ ಮಕ್ಕಳಾಗಿ ಅಂಬರೀಶ್ ಮೇಲಿನ ಅಭಿಮಾನ, ನಮ್ಮ ಕುಟುಂಬದ ಜೊತೆಗಿನ ನಂಟಿನಿಂದ ಅವರೇ ಬಂದ್ರು. ನಾವು ಜೊತೆಗಿರ್ತೀವಿ ಅಂದ್ರು. ಈಗಲೂ ಅಷ್ಟೆ. ಅವ್ರು ಒಪ್ಪಿಗೆ ನನಗೆ ಸಂತೋಷ. ಇಲ್ಲ ಅಂದ್ರು ಪರವಾಗಿಲ್ಲ” ಎಂದಿದ್ದಾರೆ

“ಯಶ್ ಪ್ರಚಾರಕ್ಕೆ ಬರ್ತೀನಿ ಅಂದ್ರೆ ನನ್ನಷ್ಟು ಸಂತೋಷಪಡುವವರು ಯಾರು ಇಲ್ಲ. ಬರೋಕ್ಕಾಗಲ್ಲ ಅಂದ್ರು ಏನು ಮಾಡೋಕ್ಕಾಗಲ್ಲ. ಕಳೆದ ಬಾರಿ ಕೂಡ ನಾನು ಯಾರನ್ನು ಕೇಳಿ ಬರಲಿಲ್ಲ. ಮನೆ ಮಕ್ಕಳಾಗಿ ಅಂಬರೀಶ್ ಮೇಲಿನ ಅಭಿಮಾನ, ನಮ್ಮ ಕುಟುಂಬದ ಜೊತೆಗಿನ ನಂಟಿನಿಂದ ಅವರೇ ಬಂದ್ರು. ನಾವು ಜೊತೆಗಿರ್ತೀವಿ ಅಂದ್ರು. ಈಗಲೂ ಅಷ್ಟೆ. ಅವ್ರು ಒಪ್ಪಿಗೆ ನನಗೆ ಸಂತೋಷ. ಇಲ್ಲ ಅಂದ್ರು ಪರವಾಗಿಲ್ಲ” ಎಂದಿದ್ದಾರೆ

“ಕಳೆದ ಚುನಾವಣೆಯಲ್ಲಿ ಜೊತೆಗಿದ್ದವರು ಈ ಬಾರಿಯೂ ಜೊತೆಗಿದ್ದಾರೆ. ಕಳೆದ ಬಾರಿ ಅವರದ್ದು ಬರೀ ಬೆಂಬಲ ಅಲ್ಲ ತ್ಯಾಗ ನನಗೋಸ್ಕರ. 20-25 ದಿವಸ ಇದ್ದರು. ದಕ್ಷಿಣ ಭಾರತದ ಇಬ್ಬರೂ ಸ್ಟಾರ್ಸ್ ಒಬ್ಬ ಅಭ್ಯರ್ಥಿ ನಿಂತಿದ್ದು ಸಾಹಸ. ಪದೇ ಪದೆ ಬನ್ನಿ ಎನ್ನುವುದು ಸರೀನಾ ನೀವೇ ಹೇಳಿ. ಯಶ್, ದರ್ಶನ್ ಸಿನಿಮಾ ಮಾಡುವಾಗ ಎಷ್ಟು ಜನ ಅದರ ಮೇಲೆ ಅವಲಂಬಿತರಾಗಿರುತ್ತಾರೆ. ಹತ್ತಿಪ್ಪತ್ತು ದಿನಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ನಿಮಗೆ ಗೊತ್ತು. ಅದನ್ನೆಲ್ಲಾ ಬಿಟ್ಟು ಬನ್ನಿ ಎನ್ನುವುದು ಸರಿಯಲ್ಲ. ಬಂದರೆ ನನಗೆ ಬಲ” ಎಂದು ಸುಮಲತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next