Advertisement
ನಗರದಲ್ಲಿ ಸಂಸದರ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಶಾಸಕರು ಅಧಿವೇಶನದಲ್ಲಿ ಏನು ಬೇಕಾದರೂ ಮಾತನಾಡಲಿ. ಮಂಡ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿದರೆ ಅದನ್ನು ಸ್ವಾಗತಿಸುತ್ತೇನೆ. ಮಂಡ್ಯದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಕೊರೊನಾ ಸಂಕಷ್ಟ, ಜನರ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ವೈಯಕ್ತಿವಾಗಿ ನನ್ನ ವಿಚಾರಗಳನ್ನು ಚರ್ಚೆ ಮಾಡುವುದು ಅವರಿಗೆ ಬಿಟ್ಟಿದ್ದು ಎಂದರು.
Related Articles
Advertisement
ಅಕ್ರಮ ಗಣಿಗಾರಿಕೆ ಮಾಲೀಕರಿಂದ ಸಕ್ರಮ ಗಣಿಗಾರಿಕೆ ಮಾಡುವ ಮಾಲೀಕರಿಗೆ ಬೆದರಿಕೆ ಹಾಕಿರುವ ಮಾಹಿತಿ ಬಂದಿದೆ ಎಂದು ಸಂಸದೆ ಸುಮಲತಾಅಂಬರೀಷ್ ಗಂಭೀರ ಆರೋಪ ಮಾಡಿದರು.
ಸಕ್ರಮ ಗಣಿಗಾರಿಕೆಯನ್ನು ಯಾರಿಂದಲೂ ಸಹ ನಿಲ್ಲಿಸಲು ಸಾಧ್ಯವಿಲ್ಲ. ಅಕ್ರಮವಾಗಿ ನಡೆಸುತ್ತಿದ್ದ ಗಣಿ ಮಾಲೀಕರು ಸಕ್ರಮ ಗಣಿ ಮಾಲೀಕರಿಗೆ ಬೆದರಿಕೆ ಹಾಕಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ನಮ್ಮ ಗಣಿಗಾರಿಕೆ ಪ್ರಾರಂಭವಾಗುವರೆಗೂ ನೀವು ಗಣಿಗಾರಿಕೆ ನಡೆಸಬಾರದು. ನಮ್ಮನ್ನು ಗಣಿಗಾರಿಕೆ ಮಾಡಲು ಬಿಡುತ್ತಿಲ್ಲ ಎಂದರೆ ನೀವು ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ. ಈ ಕಾರಣಕ್ಕೆ ಸಕ್ರಮ ಗಣಿಗಾರಿಕೆ ಸ್ಥಗಿತಗೊಂಡಿದೆ ಎಂದು ತಿಳಿಸಿದರು.
ಮೈಷುಗರ್ ಶೀಘ್ರ ಪ್ರಾರಂಭವಾಗಲಿ:ಮೈಷುಗರ್ ಕಾರ್ಖಾನೆಯನ್ನು ಶೀಘ್ರ ಆರಂಭಿಸುವಂತೆ ಸಕ್ಕರೆ ಸಚಿವರನ್ನು ನಾನು ಭೇಟಿಯಾಗಿದ್ದೇನೆ. ಈ ವೇಳೆ ನಾನು ಸರ್ಕಾರವಾಗಲೀ ಅಥವಾ ಓ ಅಂಡ್ ಎಂ ಮೂಲಕವಾದರೂ ಆದಷ್ಟು ಬೇಗ ಕಾರ್ಖಾನೆ ಪ್ರಾರಂಭ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು. ಕಾರ್ಖಾನೆ ಆರಂಭವಾಗದೇ ರೈತರಿಗೆ ತೊಂದರೆಯಾಗುತ್ತಿದೆ. ಎರಡು ವರ್ಷಗಳ ಕಾಲ ತಾಳ್ಮೆಯಿಂದ ನಾವು ಕೇಳಿದ್ದೇವೆ. ಈಗ ರೈತರಿಗೆ ಇನ್ನೂ ತಾಳ್ಮೆಯಿಂದ ಇರಿ ಎಂದು ಹೇಳಲು ಸಾಧ್ಯವಿಲ್ಲ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಅದು ಸರಿಯಾದ ನಿರ್ಧಾರವಾಗಿದೆ. ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ. ಸರ್ಕಾರ ಕೂಡಲೇ ಯಾವ ರೀತಿಯಲ್ಲಿ ಕಾರ್ಖಾನೆ ಆರಂಭಿಸುತ್ತೇವೆ ಎಂಬುದನ್ನು ಹೇಳಬೇಕು. ಇದರ ಹಿಂದೆ ಬಲವಾದ ರಾಜಕೀಯ ಪ್ರಭಾವ ಇರುವ ಕಾರಣ ಇಷ್ಟು ವರ್ಷ ಕಾರ್ಖಾನೆ ಆರಂಭವಾಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.