ಮಂಡ್ಯ: ಬಿಜೆಪಿ ಆಹ್ವಾನ ಕೊಟ್ಟರೂ ಇನ್ನೂ ಯಾವ ಪಕ್ಷ ಸೇರಬೇಕೆಂದು ನಿರ್ಧಾರ ಮಾಡಿಲ್ಲ ಎನ್ನುತ್ತಿದ್ದ ಸಂಸದೆ ಸುಮಲತಾ ಅಂಬರೀಷ್, ಕಾಂಗ್ರೆಸ್ ಸೇರಲು ಮುಂದಾಗಿದ್ದರು ಎಂಬ ವಿಷಯ ಬಹಿರಂಗಗೊಂಡಿದ್ದು, ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಲೋಕಸಭೆಗೆ ಗೆದ್ದ ಬಳಿಕ ಸುಮಲತಾ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದಕ್ಕಾಗಿ ಬಿಜೆಪಿ ಸೇರ್ಪಡೆಯಾಗಲು ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಇದಕ್ಕೆ ಒಪ್ಪಿದರೆ ಮಾತ್ರ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು, ಚರ್ಚೆಗಳು ನಡೆದಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕರು ಸುಮಲತಾಗೆ ಪಕ್ಷಕ್ಕೆ ಆಹ್ವಾನ ನೀಡಿದ್ದೇವೆ ಎಂದು ಹೇಳಿಕೆಗಳನ್ನು ನೀಡಿದ್ದರು.
ಕಾಂಗ್ರೆಸ್ ಸೇರುವ ಇಂಗಿತ: ಆದರೆ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಸುಮಲತಾ, ಕೈ ಹಿಡಿಯಲು ಬಯಸಿದ್ದೆ ಎಂಬ ವಿಷಯವನ್ನು ಅವರೇ ಬಹಿರಂಗಪಡಿಸಿದ್ದರು. ಡಿ.ಕೆ. ಶಿವಕುಮಾರ್, ಸುಮಲತಾ ಬಿಜೆಪಿ ಅಸೋಸಿಯೇಟ್ ಮೆಂಬರ್ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುಮಲತಾ, ರಾಜಾÂಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ವಿಷಯ ಗೊತ್ತಿಲ್ಲದೆ ಮಾತನಾಡ ಬಾರದು. ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಇಷ್ಟ ಇಲ್ಲ ದಿದ್ದರೆ ನೇರವಾಗಿ ಹೇಳಬೇಕು. ಅದು ಬಿಟ್ಟು ಸಾರ್ವಜನಿಕ ವಲಯದಲ್ಲಿ ತಪ್ಪು ಹೇಳಿಕೆ ನೀಡಬಾರದು ಎಂದು ಹೇಳುವ ಮೂಲಕ ಕೈ ಹಿಡಿಯುವ ಇಂಗಿತ ವ್ಯಕ್ತಪಡಿಸಿದ್ದರು.
ಗೌರವ ಸಿಗುವ ಪಕ್ಷಕ್ಕೆ ಹೋಗುವೆ: ನನ್ನಿಂದ ಪಕ್ಷಕ್ಕೆ ಶಕ್ತಿ ಬರುತ್ತದೆ ಎಂದಾದರೆ ಮಾತ್ರ ಆ ಪಕ್ಷ ಸೇರ್ಪಡೆಯಾಗು ತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ನೀಡುವಂತೆ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿದ್ದೆ. ಆದರೆ ಅವರು ಕೊಡಲಿಲ್ಲ. ಬೆಂಗಳೂರು ದಕ್ಷಿಣ ಅಥವಾ ಉತ್ತರ ಕ್ಷೇತ್ರದಲ್ಲಿ ನಿಂತುಕೊಳ್ಳಿ ಎಂದು ಮಂಡ್ಯಕ್ಕೆ ಟಿಕೆಟ್ ಕೊಡಲ್ಲ ಅಂದಿದ್ದರು. ಅವರು ಟಿಕೆಟ್ ಕೊಡದಿದ್ದಕ್ಕೆ ಪಕ್ಷೇತರಳಾಗಿ ನಿಂತಿದ್ದೆ. ಬಿಜೆಪಿ ಅಭ್ಯರ್ಥಿ ಹಾಕದೆ ಸಹಕಾರ ನೀಡಿತು. ನನಗೆ ಗೌರವ ಸಿಗುವ ಪಕ್ಷಕ್ಕೆ ಹೋಗುತ್ತೇನೆ. ನನಗೆ ಗೌರವ ಸಿಗದ ಪಕ್ಷಕ್ಕೆ ನಾನು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Related Articles
ಕೇಸರಿ ಪಾಳಯ ಆಹ್ವಾನ: ಬಿಜೆಪಿಗೆ ಸೇರುವಂತೆ ನಾಯ ಕರು ಆಹ್ವಾನ ನೀಡುತ್ತಲೇ ಇದ್ದಾರೆ. ಆದರೆ ಇದುವರೆಗೂ ಸುಮಲತಾ ಎಲ್ಲಿಯೂ ಕಮಲ ಪಕ್ಷ ಸೇರುತ್ತೇನೆ ಎಂದು ಹೇಳಿಕೆ ನೀಡಿಲ್ಲ. ಆಹ್ವಾನ ಬಂದಿದೆ. ಆದರೆ ನಾನು ಯಾವುದೇ ತೀರ್ಮಾನ ಮಾಡಿಲ್ಲ ಎನ್ನುತ್ತಿದ್ದರು. ಸುಮಲತಾ ಆಪ್ತ ಸಚ್ಚಿದಾನಂದ ಬಿಜೆಪಿ ಸೇರ್ಪಡೆಗೊಂಡ ಬಳಿಕ ಸುಮಲತಾ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಹೇಳಿಕೆ ನೀಡಿದ್ದರು. ಸಚಿವರಾದ ಅಶೋಕ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಡಾ| ಸುಧಾಕರ್, ಡಾ| ಸಿ.ಎನ್.ಅಶ್ವತ್ಥನಾರಾಯಣ್ ಸಹಿತ ಬಿಜೆಪಿ ನಾಯಕರು ಸುಮಲತಾ ಅವರು ಪಕ್ಷ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಲಾಗಿದೆ ಎಂದು ಹಲವಾರು ಬಾರಿ ಹೇಳಿಕೆ ನೀಡಿದ್ದರು.
ಗೊಂದಲದಲ್ಲಿ ಸುಮಲತಾ ಒಂದು ಕಡೆ ಕಾಂಗ್ರೆಸ್ ಸೇರಲು ಮುಂದಾಗಿದ್ದರೂ ಇದಕ್ಕೆ ಡಿ.ಕೆ.ಶಿವಕುಮಾರ್ ಅಡ್ಡಗಾಲು ಹಾಕುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ಆಹ್ವಾನ ನೀಡಿದ್ದರೂ ಯಾವುದೇ ನಿರ್ಧಾರ ಮಾಡಿಲ್ಲ. ಇದು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ. ಈಗಾಗಲೇ ಬಿಜೆಪಿ ಸೇರ್ಪಡೆಗೆ ಹಲವು ಷರತ್ತು ಗಳನ್ನು ಹಾಕಿದ್ದರು. ಅದಕ್ಕೆ ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಗ್ರೀನ್ ಸಿಗ್ನಲ್ ಬಂದಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಮತ್ತೂಂದೆಡೆ ಬೆಂಗಳೂರು ಅಥವಾ ಮಂಡ್ಯ ಜಿಲ್ಲೆಯ ವಿಧಾನಸಭೆಯ ಚುನಾವಣೆಯಲ್ಲಿ ಯಾವುದಾ ದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಇದ್ದು, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿದ್ದಾರೆ ಎನ್ನಲಾಗುತ್ತಿದ್ದು, ಸುಮಲತಾ ಅಂಬರೀಷ್ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಕೆರಳಿಸಿದೆ.
ಬಿಜೆಪಿಯವರಿಗೆ ಇನ್ನು ಸ್ವಯಂ ನಿವೃತ್ತಿ ಮನಸ್ಸು ಕಡ್ಡಾಯವಂತೆ!
ಬಿಜೆಪಿಯಲ್ಲಿ ಹಿರಿಯರಿಗೆ ಟಿಕೆಟ್ ತಪ್ಪಿಸಿ ಹೊಸಬರಿಗೆ ಅವಕಾಶ ನೀಡಬೇಕೆಂಬ ಚರ್ಚೆ ಬಿಸಿಯಾಗಿರುವುದರ ಮಧ್ಯೆಯೇ ಈಗ ಮತ್ತೊಂದು ಹಾಟ್ ಟಾಪಿಕ್ ಬಿಜೆಪಿ ಹಾಗೂ ಸಂಘ ಪರಿವಾರದ ಗಣ್ಯರ ಮಧ್ಯೆ ನಡೆಯುತ್ತಿದೆಯಂತೆ. ಸಾಮಾನ್ಯವಾಗಿ ಬಿಜೆಪಿಯಲ್ಲಿ ಈಗ ಮುಂಚೂಣಿಗೆ ಬಂದವರೆಲ್ಲರೂ ಈ ಹಿಂದೆ ಪರಿವಾರದ ಒಂದಿಲ್ಲೊಂದು ಶಾಖೆಯಲ್ಲಿ ದುಡಿದವರೆ. ಆದರೆ ಒಂದು ಹಂತದ ಅನಂತರ ಆ ಶಾಖೆಯಿಂದ ಹೊರ ಬಂದು ರಾಜಕೀಯ ವೇದಿಕೆ ಬಿಜೆಪಿ ಸೇರುತ್ತಾರೆ. ಆದರೆ ಇಲ್ಲಿ ಬಂದ ಬಳಿಕ ಮತ್ತೆ ನಿವೃತ್ತಿಯ ಬಗ್ಗೆ ಮಾತನಾಡುವುದಿಲ್ಲ. ಬಾಲ್ಯದಲ್ಲಿ ಸಂಘದ ಶಾಖೆಗೆ ಹೋದವರು, ಪಿಯುಸಿಗೆ ಬರುವ ಹೊತ್ತಿಗೆ ಎಬಿವಿಪಿ ಸೇರುತ್ತಾರೆ. ಇನ್ನು ಕೆಲವರು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಹಾಗೂ ಸಂಘದ ಇತರ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಇತರರಿಗೆ ಅವಕಾಶ ಮಾಡಿಕೊಡುತ್ತಾರೆ. ಆದರೆ ಬಿಜೆಪಿಗೆ ಬಂದವರಿಗೆ ಮಾತ್ರ ಈ ನಿವೃತ್ತಿ ಶಬ್ದ ಸಹ್ಯವೇ ಆಗುವುದಿಲ್ಲ. ಹೀಗಾಗಿ ಬಿಜೆಪಿಯ ಆಯಕಟ್ಟಿನ ಸ್ಥಾನ, ಶಾಸಕ, ಸಂಸದ, ಪರಿಷತ್ ಸದಸ್ಯರಾದವರಿಗೆ ಭವಿಷ್ಯದಲ್ಲಿ ನಿವೃತ್ತಿಯ ಮಹತ್ವವನ್ನು ಹೇಳಿಕೊಡಲು ಪರಿವಾರ ನಿರ್ಧರಿಸಿದೆಯಂತೆ! ಹೀಗಾಗಿ ಬಿಜೆಪಿಯಲ್ಲಿ ಬೆಳೆಯುವವರು ಸ್ವಯಂ ನಿವೃತ್ತಿಯ ಮನಸ್ಸು ಬೆಳೆಸಿಕೊಳ್ಳುವುದು ಇನ್ನು ಮುಂದೆ ಕಡ್ಡಾಯವಾಗಲಿದೆಯಂತೆ.
ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಜತೆಗೆ, ಆಪ್ ಹಾಗೂ ಜನಾರ್ದನ ರೆಡ್ಡಿಯವರ ಹೊಸ ಪಕ್ಷದ ಹೆಸರನ್ನಷ್ಟೇ ಕೇಳಿರಬಹುದು. ಆದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿದ್ದ ಪಕ್ಷಗಳ ಸಂಖ್ಯೆ ಎಷ್ಟು ಗೊತ್ತೇ? ಇಲ್ಲಿ ನೋಡಿ…
ಕಣದಲ್ಲಿದ್ದ ಪಕ್ಷಗಳ ಸಂಖ್ಯೆ:…….. 83
ಅಭ್ಯರ್ಥಿಗಳ ಸಂಖ್ಯೆ:…………… 684
ರಾಷ್ಟ್ರೀಯ ಪಕ್ಷಗಳು:…………… 06
ರಾಜ್ಯ ಮಾನ್ಯತೆ ಪಕ್ಷ:…………… 01
ರಾಜ್ಯ ಪಕ್ಷಗಳು(ಇತರ ರಾಜ್ಯ):… 06
ನೋಂದಾಯಿತ ಪಕ್ಷಗಳು:……… 70
ಸ್ವತಂತ್ರ ಅಭ್ಯರ್ಥಿಗಳು:…………. 1133
-ಎಚ್.ಶಿವರಾಜು