Advertisement

ಸುಳ್ಯಕ್ಕೊಂದು ಕಲಾ ಕೇಂದ್ರದ ಯೋಜನೆ: ಅಂಗಾರ

03:45 AM Feb 05, 2017 | |

ಸುಳ್ಯ: ಕಲೆ, ಸಾಹಿತ್ಯ, ಸಂಸ್ಕೃತಿ ಸುಳ್ಯ ತಾಲೂಕಿನಲ್ಲಿ ಸಮೃದ್ಧವಾಗಿದೆ. ಸುಳ್ಯದ ಸಂಸ್ಕೃತಿಗೆ ಕಲಾ ಕೇಂದ್ರ ರಂಗಮನೆಯ ಕೊಡುಗೆ ಅನನ್ಯ. ಸದಭಿರುಚಿಯ ಕಲಾರಸಿಕರು, ಕಲಾ ಪೋಷಕರು ನಾಡಿನೆಲ್ಲೆಡೆ ಇದ್ದಾರೆ. ಆದರೆ ಕಲೆ, ಕಲಾವಿದರನ್ನು ಸೃಷ್ಟಿಸುವ ಕೇಂದ್ರಗಳು ಬೇಕಾಗಿವೆ. ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನಲ್ಲೊಂದು ಕಲಾ ಕೇಂದ್ರ ರೂಪಿಸುವ ಚಿಂತನೆ ಮಾಡಲಾಗುವುದು ಎಂದು ಶಾಸಕ ಎಸ್‌. ಅಂಗಾರ ತಿಳಿಸಿದರು.

Advertisement

ಅವರು ಸುಳ್ಯದ ರಂಗಮನೆಯಲ್ಲಿ ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ಹೆಗ್ಗೊàಡು ಉದ್ಘಾಟಿಸಿ, ಮಕ್ಕಳು ಸುಲಭಸಾಧ್ಯಗಳಿಗೆ ಅಂಟಿಕೊಂಡು ನೈಜ ಬದುಕಿನ ಮುಗªತೆ ಕಳೆದುಕೊಳ್ಳುತ್ತಿದ್ದಾರೆ. ಯಂತ್ರಪ್ರಣೀತ ಸ್ಮಾರ್ಟ್‌ಸಿಟಿ, ಆರ್ಥಿಕ ವ್ಯವಸ್ಥೆ ಎಲ್ಲವನ್ನು ರೂಪಿಸಬಹುದು. ಆದರೆ ಸಾಂಸ್ಕೃತಿಕ ಮೌಲ್ಯಗಳನ್ನು ಅದು ಕೊಡಲು ಸಾಧ್ಯವಿಲ್ಲ. ಆದರೆ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಗಳನ್ನು ರಂಗಭೂಮಿ ಮೂಲಕ ತುಂಬಿಕೊಡಲು ಸಾಧ್ಯವಿದೆ ಎಂದರು.

ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ಪ್ರೇಕ್ಷಕ ಮತ್ತು ನಟರಿಗಿರುವ ಸಂಬಂಧ ಕೃಷ್ಣ-ಸುಧಾಮರಿಗಿರುವ ಸಂಬಂಧ. ಇಲ್ಲಿ ಕೃಷ್ಣ ಪ್ರೇಕ್ಷಕನಾದರೆ ಸುಧಾಮ ನಟ ಎಂದರು.ವೇದಿಕೆಯಲ್ಲಿ ಕಲಾವಿದ ಸುಜನಾ ಸುಳ್ಯ ಉಪಸ್ಥಿತರಿದ್ದರು.

ಸಮ್ಮಾನ
ಪದ್ಮಶ್ರೀ ಪ್ರಶಸ್ತಿ ಪಡೆದ ತೂಗುಸೇತುವೆ ಸರದಾರ ಗಿರೀಶ ಭಾರದ್ವಾಜ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ ಅವರನ್ನು ಸಮ್ಮಾನಿಸಲಾಯಿತು.

Advertisement

ರಂಗಮನೆ ಅಧ್ಯಕ್ಷ ಜೀವನ್‌ರಾಂ ಸುಳ್ಯ ಸ್ವಾಗತಿಸಿ, ಡಾ| ವೀಣಾ ನಿರೂಪಿಸಿದರು. ಡಾ| ಸುಂದರ ಕೇನಾಜೆ ವಂದಿಸಿದರು. ಡಾ| ಮೌಲ್ಯಜೀವನ್‌, ಡಾ| ವಿದ್ಯಾಶಾರದೆ ಸಮ್ಮಾನಪತ್ರ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next