ದಿನೇ-ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸ್ಥಿತಿ. ಬರೋಬ್ಬರಿ 8 ಪ್ಲಾಟ್
ಫಾರಂ ಕೊರತೆ ಇದ್ದು, ಇಲ್ಲಿ ಬಸ್ ಗಳ ಆಗಮನ, ನಿರ್ಗಮನ ಗೊಜಲು ಗೊಜಲಾಗಿ ಕಿಷ್ಕಿಂದೆಯಂತಾಗಿದೆ.
Advertisement
ಜಿಲ್ಲೆಯಲ್ಲಿ ಅತಿ ಹೆಚ್ಚಿನ ಗ್ರಾಮಾಂತರ ಸಂಪರ್ಕ ಹೊಂದಿರುವ ಇಲ್ಲಿ, ದಿನವೊಂದಕ್ಕೆ 286 ಶೆಡ್ನೂಲ್ ಇದೆ. ಅಂದರೆ ಬಸ್ ನಿಲ್ದಾಣದಿಂದ ತೆರಳುವ, ಪುನಃ ಬರುವ ಬಸ್‌ಗಳ ಲೆಕ್ಕ ಸೇರಿದರೆ 572 ಬಾರಿ ಬಸ್‌ಗಳು ನಿಲ್ದಾಣಕ್ಕೆ ಬರುತ್ತವೆ. ಆ ಬಸ್ ಗಳು 9 ಪ್ಲಾಟ್ ಫಾರ್‌ಂಗಳಲ್ಲಿ ನಿಂತು, ಪ್ರಯಾಣಿಕರನ್ನು ಹತ್ತಿಸಬೇಕು. ಇಳಿಸಬೇಕು. ಅನಂತರ ಇನ್ನೊಂದು ರೂಟ್‌ಗೆ ತೆರಳಬೇಕು ಅನ್ನುವುದು ಇಲ್ಲಿನ ನಿಯಮ.
ಇಲ್ಲಿ ಏಕಕಾಲದಲ್ಲಿ 8 ಕ್ಕಿಂತ ಅಧಿಕ ಬಸ್ ಬಂದಲ್ಲಿ ಪ್ಲಾಟ್‌ಫಾರಂನಲ್ಲಿ ನಿಲ್ಲಲು ನಿಲ್ಲಲು ಆಗುತ್ತಿಲ್ಲ. ಫ್ಲಾಟ್‌ಫಾರಂ 1-2ರಲ್ಲಿ ಬೆಂಗಳೂರು, 3ರಲ್ಲಿ ಮಂಗಳೂರು, 4ರಲ್ಲಿ ಸುಬ್ರಹ್ಮಣ್ಯ, 5ರಲ್ಲಿ ಪಂಜ- ಸುಬ್ರಹ್ಮಣ್ಯ- ಬೆಳ್ಳಾರೆ, 6ರಲ್ಲಿ ಗುತ್ತಿಗಾರು, 7ರಲ್ಲಿ ಮಂಡೆಕೋಲು- ಪೇರಾಲು, 8-9ರಲ್ಲಿ ಪುತ್ತೂರಿಗೆ ತೆರಳುವ ಬಸ್‌ಗಳು ನಿಲ್ಲಬೇಕು. ಸ್ಥಳವಕಾಶದ ಕೊರತೆಯಿಂದ ಕೆಲವು ಬಾರಿ ನಿರ್ಧಿಷ್ಟ ಸ್ಥಳದಲ್ಲಿ ಬಸ್ ನಿಲ್ಲದೇ ಬೇರೊಂದು ಪ್ಲಾಟ್‌ಫಾರಂಗಳಲ್ಲಿ ನಿಲ್ಲುತ್ತದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ. ಧ್ವನಿವರ್ಧಕದ ಬಳಸಿ ಮಾಹಿತಿ ನೀಡಿದ್ದರೂ, ಅದರ ಪರಿಣಾಮ ಅಷ್ಟಕಷ್ಟೇ. ಊರಿನ ಹೆಸರು ಇರುವ ಫ್ಲಾಟ್‌ಫಾರಂನಲ್ಲಿ ಕಾದು ಕುಳಿತವರಿಗೆ ಅದಲು- ಬದಲಾದ ವಿಷಯ ತಿಳಿಯದೇ, ಬಸ್ ತಪ್ಪಿದ ಅನೇಕ ಉದಾಹರಣೆಗಳು ಇವೆ.
Related Articles
ಬೆಂಗಳೂರು ಬಸ್ ನಿಲುಗಡೆ ಫ್ಲಾಟ್‌ಫಾರಂ ಹೊರತುಪಡಿಸಿ, ಉಳಿದವುಗಳು ಅವೈಜ್ಞಾನಿಕವಾಗಿವೆ. ಏರು ತಗ್ಗು ಇದ್ದು, ಒಂದೆರಡು ಬಾರಿ ಬಸ್‌ಗಳು ಹಿಮ್ಮುಖ ಸಂಚರಿಸಿ, ಪ್ರಯಾಣಿಕರು ಕೂದಳೆಲೆಯ ಅಂತರದಿಂದ ಪಾರಾಗಿದ್ದರು.
ಹಾಗಾಗಿ ಈಗಿರುವ ಪ್ಲಾಟ್ ಸಮಸ್ಯೆ ಪರಿಹಾರದ ಜತೆಗೆ ಹೊಸ ಪ್ಲಾಟ್ ರಚನೆಗೆ ಕ್ರಮ ಕೈಗೊಳ್ಳಬೇಕಿದೆ.
Advertisement
ದರ ಪಟ್ಟಿಗೆ ಒಪ್ಪಿಗೆ ಸಿಕ್ಕಿಲ್ಲವಿಸ್ತರಣೆಗೆ ಸಂಬಂಧಿಸಿ ಸ್ಥಳೀಯ ಜಾಗ ಖರೇದಿ ಬಗ್ಗೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವು. ಆದರೆ ದರ ಪಟ್ಟಿಗೆ ಒಪ್ಪಿಗೆ ಸಿಗದ ಕಾರಣ ಅದು ಫಲಪ್ರದವಾಗಿಲ್ಲ. ಈಗಿರುವ ಪ್ಲಾಟ್‌ಫಾರಂನಲ್ಲಿ ಏರು ತಗ್ಗುಗಳಿದ್ದರೆ, ಅದನ್ನು ಈಗ ಸರಿಪಡಿಸುವುದು ಅಸಾಧ್ಯ. ಚಾಲಕ, ನಿರ್ವಾಹಕರ ಗಮನಕ್ಕೆ ತಂದು, ಸಂಚಾರದಲ್ಲಿ ಎಚ್ಚರಿಕೆ ವಹಿಸಲು ಸೂಚಿಸಲಾಗುವುದು.
-ನಾಗರಾಜ ಶಿರಾಲಿ
ವಿಭಾಗ ನಿಯಂತ್ರಣಾಧಿಕಾರಿ, ಪುತ್ತೂರು ಕಿರಣ್ ಪ್ರಸಾದ್ ಕುಂಡಡ್ಕ