ವಿಡಿಯೋದಲ್ಲಿ ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್ ಸ್ಟೋರ್ ಬಳಿ ಇಬ್ಬರು ಕಾರ್ಮಿಕರು ಕುಳಿತಿದ್ದು ಓರ್ವ ವ್ಯಕ್ತಿ ಅಲ್ಲೆ ಪಕ್ಕದಲ್ಲಿರುವ ಬ್ಯಾಗ್ ಒಂದನ್ನು ತೋರಿಸಿ ಇದನ್ನು ಓಪನ್ ಮಾಡಿದವರು ಯಾರು ಎಂದು ಪ್ರಶ್ನಿಸಿ ಥಳಿಸುತ್ತಿರುವ ದೃಶ್ಯದಲ್ಲಿದೆ. ಕೆಲವು ಸಮಯದ ಬಳಿಕ ಓರ್ವ ಅಲ್ಲಿಂದ ತಪ್ಪಿಸಿದ್ದು, ಮತ್ತೋರ್ವ ವ್ಯಕ್ತಿಯನ್ನು ಥಳಿಸುತ್ತಿದ್ದ ವ್ಯಕ್ತಿ ಅಲ್ಲೇ ಕುಳ್ಳಿರಿಸಿ ತಮ್ಮ ಮೊಬೈಲ್ ಮೂಲಕ ಯಾರಿಗೋ ಮಾಹಿತಿ ನೀಡುವ ರೀತಿಯಲ್ಲಿ ಕಂಡು ಬರುತ್ತಿದೆ.
Advertisement
ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಮಿಕರ ಮೇಲೆ ವ್ಯಕ್ತಿಯೊಬ್ಬ ಅನಗತ್ಯವಾಗಿ ಹಲ್ಲೆ ಮಾಡಿದ್ದಾನೆ. ಕೂಲಿ ಕೆಲಸಕ್ಕಾಗಿ ದೂರ ಊರಿಂದ ಬಂದಿರುವ ಕಾರ್ಮಿಕರಿಗೆ ಈ ರೀತಿಯಾಗಿ ಹಲ್ಲೆ ಮಾಡಿದರುವುದು ಖಂಡನಿಯ. ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಂಡುಕೂಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಲು ಈ ಮೂಲಕ ವಿನಂತಿ ಎಂದೂ ಹರಿದಾಡುತ್ತಿದೆ.