Advertisement
ಪಯಸ್ವಿನಿ ನದಿ ಹರಿಯುವ ಇಲ್ಲಿ ಪ್ರತಿ ಬೇಸಗೆಗೆ ಮರಳಿನ ಕಟ್ಟವೇ ನೀರು ಪೂರೈಕೆಗಿರುವ ಆಧಾರ. ಬಹು ವರ್ಷದ ಬೇಡಿಕೆ ಆಗಿರುವ ಶಾಶ್ವತ ಕುಡಿಯುವ ನೀರಿನ ಯೋಜನೆ ಪ್ರಸ್ತಾವ ಕಡತದಲ್ಲೇ ಬಂಧಿ ಆಗಿರುವುದು ಕೂಡ ಇದೇ ವಾರ್ಡ್‌ನಲ್ಲೇ.
ವರ್ಷದ 365 ದಿನವೂ 24 ತಾಸು ಇಲ್ಲಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. ಬೇಸಗೆ ಕಾಲದಲ್ಲಿ ಇದರ ಪ್ರಮಾಣ ಹೆಚ್ಚು. ವಾರ್ಡ್‌ನ ಕಲ್ಲುಮಟ್ಲು ಪಂಪ್‌ಹೌಸ್ ಬಳಿಯಲ್ಲಿ 50 ಎಚ್ಪಿಯ 1 ಮತ್ತು 45 ಎಚ್ಪಿಯ 2 ಪಂಪ್‌ಗ್ಳಿವೆ. ಆ ಮೂಲಕ ನೀರನ್ನು ಸಂಗ್ರಹಿಸಿ ಪಂಪ್‌ಹೌಸ್ ಬಾವಿಗೆ, ಶುದ್ಧೀಕರಣ ಘಟಕಕ್ಕೆ ಪೂರೈಸಲಾಗು ತ್ತದೆ. ಕಲ್ಲುಮಟ್ಲು ನೀರು ಶುದ್ಧೀಕರಣ ಘಟಕದಿಂದ ಟ್ಯಾಂಕಿಗುಡ್ಡೆಯಲ್ಲಿನ 1 ಲಕ್ಷ ಗ್ಯಾಲನ್ ಮತ್ತು 50 ಸಾವಿರ ಗ್ಯಾಲನ್ ಟ್ಯಾಂಕ್‌ನ ಮೂಲಕ ನಗರಕ್ಕೆ ನೀರು ಹರಿದರೆ, ಇನ್ನೊಂದು ಪೈಪು ಮೂಲಕ ಕುರುಂಜಿಗುಡ್ಡೆಯ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಅಲ್ಲಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಗಳಿಗೆ ನಳ್ಳಿ ಸಂಪರ್ಕದ ಮುಖಾಂತರ ನೀರು ಹರಿಸಲಾಗುತ್ತದೆ.
Related Articles
Advertisement
ಗರಿಷ್ಠ ಮತದಾರರಿರುವ ವಾರ್ಡ್14ನೇ ವಾರ್ಡ್ ಕಲ್ಲುಮುಟ್ಲು, ಟಾಂಕಿಗುಡ್ಡೆ, ಗಾರ್ಡ್‌ಶೆಡ್- ಕಲ್ಲುಮುಟ್ಲು, ಪರಿವಾರ, ಪರಿವಾರಕಾನ ಪ್ರದೇಶಗಳನ್ನು ಒಳಗೊಂಡಿದೆ. ನೀರಿನ ಕೊರತೆ
2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,958. ಆ ಸಂಖ್ಯೆ ಈಗ 25 ಸಾವಿರ ದಾಟಿರಬಹುದು. ದಿನವೊಂದಕ್ಕೆ ನಗರಕ್ಕೆ ಬೇಕಾದ ನೀರಿನ ಪ್ರಮಾಣ 1.69 ಎಂ.ಎಲ್ಡಿ. ಓರ್ವ ವ್ಯಕ್ತಿಗೆ ನೀಡುತ್ತಿರುವ ನೀರಿನ ಪ್ರಮಾಣ 90 ಲೀ. ಅಗತ್ಯದ ಪ್ರಮಾಣ 135 ಲೀ. ಓರ್ವ ವ್ಯಕ್ತಿಗೆ ದಿನವೊಂದರಲ್ಲಿ 45 ಲೀಟರ್ ನೀರಿನ ಕೊರತೆಯಿದೆ. ಕೊರತೆಗೆ ಮುಖ್ಯ ಕಾರಣ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳದಿರುವುದು. ವಿಫಲ ಘಟಕ !
ನದಿಯಿಂದ ಸಂಗ್ರಹಿಸುವ ನೀರು ಶುದ್ಧೀಕರಣಗೊಂಡು ಮನೆಗಳಿಗೆ ಪೂರೈಸಬೇಕು. ಆದರೆ ಈಗಿನ ಬೇಡಿಕೆ ನಿರ್ವಹಿಸಲು ಘಟಕ ಸಾಮರ್ಥ್ಯ ಹೊಂದಿರದ ಕಾರಣ ಕೆಂಬಣ್ಣದ ನೀರು ಮನೆಗಳಿಗೆ ಹರಿಯುತ್ತಿದೆ. ಈ ಘಟಕ ಬದಲಾಯಿಸಿ ಹೊಸ ಘಟಕ ನಿರ್ಮಿಸಬೇಕು ಎನ್ನುವ ಬೇಡಿಕೆ ಹಲವು ಸಭೆಗಳಲ್ಲಿ ಪ್ರಸ್ತಾವಗೊಂಡಿದೆ. ಕಿರಣ್ ಪ್ರಸಾದ್ ಕುಂಡಡ್ಕ