Advertisement
ಮಡಪ್ಪಾಡಿ ಸಮೀಪದ ಶೀರಡ್ಕ, ಹಾಡಿಕಲ್ಲು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಳ್ಗಿಚ್ಚು ಉಂಟಾಗಿತ್ತು. ಅರಣ್ಯ ಇಲಾಖೆಯ ತಂಡ ಸ್ಥಳದಲ್ಲಿ ಬೀಡುಬಿಟ್ಟು ಕಾಳ್ಗಿಚ್ಚು ನಂದಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
Related Articles
Advertisement
ಬಿದಿರು, ಕೆಲವು ಮರಗಳಿಗೆ ಬೆಂಕಿ ಹಬ್ಬಿದೆ. ಒಣ ಹುಲ್ಲು, ತರಗೆಲೆ ಗಳಿಂದಾಗಿ ಬೆಂಕಿ ತೀವ್ರವಾಗಿ ಹರಡು ತ್ತಿದೆ. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ತೀವ್ರವಾಗಿದೆ. ಕೆಲವರ ರಬ್ಬರ್ ತೋಟದ ಸಮೀಪದ ವರೆಗೂ ಬೆಂಕಿ ಹಬ್ಬಿದ್ದು, ಸ್ಥಳಿಯರಲ್ಲಿ ಆತಂಕ ಎದುರಾಗಿದೆ.
ಮರ್ಕಂಜದ ಮೈರಾಜೆ ಕಾಡಿಗೆ ಎರಡು-ಮೂರು ದಿನಗಳ ಹಿಂದೆ ಬೆಂಕಿ ಬಿದ್ದಿದ್ದು, ಅದು ನಿಯಂತ್ರಣಕ್ಕೆ ಬರುವ ಮೊದಲೇ ಸಮೀಪದ ಅಜ್ಜಿಕಲ್ಲು -ಕುಧ್ಕುಳಿ ಭಾಗದ ಗುಡ್ಡದಲ್ಲಿ ಬೆಂಕಿ ಅನಾಹುತ ಉಂಟಾಗಿದೆ. ರವಿವಾರ ರಾತ್ರಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಅರಣ್ಯ ಪ್ರದೇಶದಲ್ಲಿ ಬೆಂಕಿಯ ತೀವ್ರತೆ ಹೆಚ್ಚಿರುವುದರಿಂದ ಪೂರ್ಣ ವಾಗಿ ಶಮನಗೊಳ್ಳುವ ವರೆಗೆ ಎಷ್ಟು ವಿಸ್ತೀರ್ಣದಲ್ಲಿ ಅರಣ್ಯ ಹಾನಿಗೀಡಾಗಿದೆ ಎಂಬ ಮಾಹಿತಿ ಸಂಗ್ರಹಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
ಕಡಬದ ನಿಡ್ಡೋ, ಹೇರದಲ್ಲೂ ಬೆಂಕಿಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಹೇರ, ನಿಡ್ಡೋ ಅರಣ್ಯ ಪ್ರದೇಶದಲ್ಲೂ ಬೆಂಕಿ ಅನಾಹುತ ಉಂಟಾಗಿದೆ. ರವಿವಾರ ಬೆಂಕಿ ಅನಾಹುತದ ಬಗ್ಗೆ ತಿಳಿದುಬಂದಿದೆ ಎನ್ನಲಾಗಿದೆ. ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ನಿಡ್ಡೋ, ಕಾನಾವು ಭಾಗದಲ್ಲಿ ಬೆಂಕಿ ತರಗೆಲೆ, ಪೊದೆಗಳಲ್ಲಿ ಹೊತ್ತಿ ಉರಿಯುತ್ತಿದೆ. ಹೇರ ಪ್ರದೇಶದಲ್ಲೂ ವ್ಯಾಪಕವಾಗಿದೆ. ನಿಡ್ಡೋದಲ್ಲಿ ಪುತ್ತೂರು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೇರ ಭಾಗದಲ್ಲಿ ಅರಣ್ಯ ಸಿಬಂದಿ, ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.