Advertisement

ಕೆವಿಜಿ ಶಾಲೆಯಲ್ಲಿ ‘ಆಟಿ ಕೂಟ’ಕ್ಕೆ ಚಾಲನೆ

01:34 PM Aug 05, 2019 | Team Udayavani |

ಸುಳ್ಯ: ಸುಳ್ಯದ ಕೆ.ವಿ.ಜಿ. ಇಂಟರ್‌ನ್ಯಾಶನಲ್ ಪಬ್ಲಿಕ್‌ ಶಾಲೆಯಲ್ಲಿ ಶನಿವಾರ ತುಳುನಾಡಿನ ವಿಶಿಷ್ಟ ಸಂಪ್ರದಾಯವಾದ ಆಟಿ ಕೂಟವನ್ನು ಆಚರಿಸಲಾಯಿತು.

Advertisement

ತುಳು ಪ್ರಾರ್ಥನೆಯ ಮೂಲಕ 3 ಹಾಗೂ 4ನೇ ತರಗತಿಯ ಮಕ್ಕಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯ ಸುನೀಲ್ ಕುಮಾರ್‌ ಕೆ.ಸಿ., ಕೆ.ವಿ.ಜಿ. ಇಂಗ್ಲಿಷ್‌ ಮೀಡಿಯಂ ಪ್ರೌಢಶಾಲಾ ಮುಖ್ಯಗುರು ಶಾಂತಾ ಬಿ. ಬೈಪಾಡಿತ್ತಾಯ, ಉಪಪ್ರಾಚಾರ್ಯೆ ಶಿಲ್ಪಾ ಬಿದ್ದಪ್ಪ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿದ್ಯಾ ರಾವ್‌, ಆಡಳಿತಾತ್ಮಕ ಸಂಯೋಜಕಿ ಸುಜಾತಾ ಕೆ., ಗೀತಾಂಜಲಿ ಟಿ.ಜಿ. ಹಾಗೂ ಮಮತಾ ಬಿ.ಎಸ್‌. ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡ ಶಿಕ್ಷಕಿ ಭವ್ಯಾ ಎ. ಆಟಿ ಆಚರಣೆಯ ಮಹತ್ವವನ್ನು ವಿವರಿಸಿದರು. ಶಿಕ್ಷಕಿ ರಂಜಿತಾ ಎನ್‌. ಸ್ವಾಗತಿಸಿ, ಚೈತ್ರಾ ಕೆ.ಎಚ್. ನಿರೂಪಿಸಿದರು.

ಬ್ಲೂ ಸಫೈರ್‌ ತಂಡ ಪ್ರಥಮ
ಶಾಲೆಯ ನಾಲ್ಕು ತಂಡಗಳಾದ ಬ್ಲೂ ಸಫೈರ್‌, ಗ್ರೀನ್‌ ಎಮರಾಲ್ಡ್, ರೆಡ್‌ ರೂಬಿ ಹಾಗೂ ಎಲ್ಲೋ ಡೈಮಂಡ್‌ ವಿದ್ಯಾರ್ಥಿಗಳಿಂದ ಆಟಿಯ ಮಹತ್ವ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಬ್ಲೂ ಸಫೈರ್‌ ತಂಡವು ಪ್ರಥಮ ಸ್ಥಾನ ಗಳಿಸಿ ರೋಲಿಂಗ್‌ ಟ್ರೋಫಿಯನ್ನು ಪಡೆದುಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next