Advertisement
ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯಕ್ಕೆ ಮಹಿಳೆ ಹೋಗಿದ್ದಾಗ ಹಿಂಬದಿಯಲ್ಲಿರುವ ಕಿಟಕಿಯ ಮೂಲಕ ಫೋಟೋ ತೆಗೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಶೌಚಾಲಯದ ಕಿಟಕಿಯ ಗ್ಲಾಸ್ ಸರಿದಿದ್ದು ಸರಿದ ಭಾಗದಿಂದ ಫೋಟೋವನ್ನು ಕಿಡಿಗೇಡಿ ಕ್ಲಿಕ್ಕಿಸಿದ್ದಾನೆ. ಮಹಿಳೆ ಈ ಘಟನೆಯನ್ನು ಮತ್ತು ಆತನ ಕೈಯನ್ನು ನೋಡಿದ್ದು, ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಾರದ ಹಿಂದೆ ಮಲಗಿದ್ದ ಪ್ರಯಾಣಿಕರೋರ್ವರ ಬ್ಯಾಗ್, ಶೂ ಕಳ್ಳತನ ಆಗಿತ್ತು. ಈ ನಡುವೆ ಶೌಚಾಲಯದಲ್ಲಿ ಮಹಿಳೆಯಿದ್ದ ವೇಳೆ ಫೋಟೋ ಕ್ಲಿಕ್ಕಿಸಿದ ಘಟನೆ ನಡೆದಿದೆ. ಇಲ್ಲಿ ರಾತ್ರಿ ವೇಳೆ ಯಾವುದೇ ಭದ್ರತಾ ಸಿಬ್ಬಂದಿಗಳು ಇರುವುದಿಲ್ಲ, ಬಸ್ ನಿಲ್ದಾಣ ಠಾಣಾ ಬಳಿಯಲ್ಲೇ ಇದ್ದರೂ ಅಪರಾಧ ಕೃತ್ಯಗಳು ಮಾತ್ರ ಮುಂದುವರಿಯುತ್ತಲೇ ಇದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.