Advertisement
ಆಳ್ವಾಸ್ ಅಧ್ಯಕ್ಷ ಡಾ| ಮೋಹನ್ ಆಳ್ವ ಪ್ರತಿಮೆ ಅನಾವರಣ ಮಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಡಾ| ಶಿವರಾಮ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ರೂವಾರಿ ಡಾ| ಜೀವನ್ ರಾಮ್ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಮನೆ ಸದಸ್ಯೆ ಡಾ| ವಿದ್ಯಾಶಾರದೆ ವಂದಿಸಿದರು. ಅಚ್ಯುತ್ತ ಅಟ್ಲುರೂ ನಿರೂಪಿಸಿದರು.
ವನಜಾಕ್ಷಿ ಜಯರಾಮ ನೆನಪಿನಲ್ಲಿ ಬಣ್ಣದ ಮಾಂತ್ರಿಕ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ವನಜ ರಂಗಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದ.ಕ. ಮಣ್ಣಿನಲ್ಲಿ ಕಲೆಯ ಸಾಮ್ರಾಜ್ಯ
ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಮಾತನಾಡಿ, ಈ ಭೂಮಿ ಯಕ್ಷರ ನಾಡು, ಯಕ್ಷ ಗಂಧರ್ವರ ನಾಡು. ದಕ್ಷಿಣ ಕನ್ನಡದ ಮಣ್ಣಿನಲ್ಲಿ ಕಲೆಯ ಸಾಮ್ರಾಜ್ಯವಿದೆ. ಅದು ಒಬ್ಬೊಬ್ಬರ ಮನಸ್ಸು, ದೇಹ, ಒಬ್ಬೊಬ್ಬರೊಳಗೆ ಹೇಗೆ ಮೇಲೆ ಬಂದು ನಿಂತಿದೆ ಎಂಬುದು ಇತಿಹಾಸವನ್ನು ಗಮನಿಸಿದಾಗ ತಿಳಿಯುತ್ತದೆ. ಸಹೃದಯ ಪ್ರೇಕ್ಷಕರಿದ್ದಲ್ಲಿ ಕಲೆ ಎತ್ತರಕ್ಕೆ ಬೆಳೆಯುತ್ತದೆ ಎಂದರು.
Related Articles
Advertisement