Advertisement
ಜಿಲ್ಲಾ ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರ ಗಳಲ್ಲಿ ದಾಖಲಾದ ಶೇಕಡಾವಾರು ಮತ ಪ್ರಮಾಣ ಗಮನಿಸಿದರೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ದಾಖಲಾಗಿದೆ. ಶೇ. 84.21ರಷ್ಟು ಮತ ಚಲಾವಣೆಗೊಂಡು ಜಿಲ್ಲೆಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಕಳೆದ ಹಲವು ವರ್ಷಗಳಿಂದ ಹಕ್ಕು ಚಲಾವಣೆಯಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಸುಳ್ಯ ಈ ಬಾರಿಯೂ ಅದನ್ನು ಉಳಿಸಿಕೊಂಡಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಶೇ. 84.42 ಮತದಾನ ದಾಖಲಾಗಿತ್ತು. 1,86,015 ಮತದಾರರ ಪೈಕಿ 1,57,025 ಮತದಾರರು ಹಕ್ಕು ಚಲಾಯಿಸಿದ್ದರು.
2018ರಲ್ಲಿ ವಿಧಾನಸಭಾ ಚುನಾವ ಣೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಏರಿಕೆ ಕಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಶೇ. 84.03 ಮತದಾನವಾಗಿದ್ದು, 11 ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 84.21ರಷ್ಟು ಮತ ಚಲಾವಣೆಗೊಂಡಿದೆ. ಒಂದೇ ವರ್ಷದೊಳಗೆ ಶೇ. 0.18ರಷ್ಟು ಚಲಾಯಿತ ಮತ ಏರಿಕೆ ಕಂಡಿದೆ.
Related Articles
ಗುತ್ತಿಗಾರು ಬಳ್ಳಕ್ಕ ಹರಿಪುರ ಸ.ಹಿ.ಪ್ರಾ. ಶಾಲಾ ಮತಗಟ್ಟೆಯಲ್ಲಿ ಶೇ. 95.88 ಮತದಾನವಾಗಿದೆ. ಕಡಬ ಸ.ಹಿ.ಪ್ರಾ. ಶಾಲಾ ಉತ್ತರ ಭಾಗದ ಮತಗಟ್ಟೆಯಲ್ಲಿ ಶೇ. 72.81 ಕನಿಷ್ಠ ಮತದಾನ ದಾಖಲಾಗಿದೆ. 231 ಮತಗಟ್ಟೆಗಳ ಪೈಕಿ ಶೇ. 85ಕ್ಕಿಂತ ಅಧಿಕ ಮತಗಟ್ಟೆಗಳಲ್ಲಿ ಶೇ. 80ಕ್ಕಿಂತ ಅಧಿಕ ಮತದಾನವಾಗಿದೆ.
Advertisement
ಶಾಂತಿಯುತ ಮತದಾನಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತ್ತು ಗರಿಷ್ಠ ಮತದಾನ ಆಗಿದೆ. ಶೇ. 84.21 ಮತಗಳು ಚಲಾವಣೆಗೊಂಡಿವೆ. ಮತಗಟ್ಟೆ ಸಂಖ್ಯೆ 122 ಹರಿಪುರದಲ್ಲಿ ಗರಿಷ್ಠ ಹಾಗೂ ಮತಗಟ್ಟೆ ಸಂಖ್ಯೆ 90 ಕಡಬ ಉತ್ತರದಲ್ಲಿ ಕನಿಷ್ಠ ಮತದಾನವಾಗಿದೆ.
ಡಾ| ಮಂಜುನಾಥ್ ಚುನಾವಣಾಧಿಕಾರಿ ಮತದಾನ ಪ್ರಮಾಣ
2019ರ ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 84.21ರಷ್ಟು ಮತದಾನವಾಗಿದೆ. 2,00,579 ಮತದಾರರ ಪೈಕಿ 1,78,912 ಮಂದಿ ಮತ ಚಲಾಯಿಸಿದ್ದಾರೆ. 1,00,948 ಮಹಿಳಾ ಮತದಾರರ ಪೈಕಿ 94,557 ಮಂದಿ ಹಾಗೂ 99,631 ಪುರುಷ ಮತದಾರರ ಪೈಕಿ 84,355 ಮಂದಿ ತನ್ನ ಹಕ್ಕು ಚಲಾಯಿಸಿದ್ದಾರೆ. ಮಹಿಳಾ ಮತದಾರರ ಪೈಕಿ 6,391 ಮಂದಿ ಹಾಗೂ ಪುರುಷ ಮತದಾರರ ಪೈಕಿ 15,276 ಮಂದಿ ಹಕ್ಕು ಚಲಾಯಿಸಿಲ್ಲ. ಕಿರಣ್ ಪ್ರಸಾದ್ ಕುಂಡಡ್ಕ