Advertisement
ಎರಡು ಮಹಡಿಗಳ ಕಟ್ಟಡಹೊಸ ಕಟ್ಟಡ ಎರಡು ಮಹಡಿಗಳನ್ನು ಹೊಂದಿದೆ. ನೆಲ ಅಂತಸ್ತಿನಲ್ಲಿ ತಾ.ಪಂ. ಸಿಇಒ ಕೈಗಾರಿಕಾ ವಿಸ್ತರಣಾಧಿಕಾರಿ, ಅಕ್ಷರ ದಾಸೋಹ, ಎನ್‌ಆರ್‌ಇಜಿ, ವಸತಿ ಯೋಜನೆ ಕೊಠಡಿಗಳು ಇರಲಿವೆ. ಪ್ರಥಮ ಮಹಡಿಯಲ್ಲಿ ಶಾಸಕ, ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯೀ ಸಮಿತಿ ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ, ತಾ.ಪಂ. ಸರ್ವ ಸದಸ್ಯರಿಗೆ ಒಂದು ಕೊಠಡಿ, 100 ಮಂದಿ ಕುಳಿತುಕೊಳ್ಳಬಹುದಾದ ಮಿನಿ ಸಭಾಂಗಣ ನಿರ್ಮಾಣವಾಗಲಿದೆ. 2ನೇ ಮಹಡಿಯ ಮೇಲೆ ಶೀಟ್ ಅಳವಡಿಸಿ 250-300 ಮಂದಿ ಕುಳಿತುಕೊಳ್ಳಬಹುದಾದ ವಿಶಾಲ ಸಭಾಭವನ ನಿರ್ಮಾಣವಾಗಿದೆ.
ಹೊಸ ಕಟ್ಟಡದ ಸನಿಹದಲ್ಲಿರುವ ಹಿಂದುಳಿದ ಕಲ್ಯಾಣ ಇಲಾಖೆ, ಯುವಜನ ಇಲಾಖೆ ಇರುವ ಎರಡು ಮಹಡಿಯ ಕಟ್ಟಡ ತೆರವು ಮಾಡಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸುವ ಪ್ರಸ್ತಾವನೆ ಕಳುಹಿಸಲಾಗಿದೆ ಎಂಬ ಮಾಹಿತಿ ಇದೆ. ಕೆಲವು ವರ್ಷಗಳ ಹಿಂದೆಯಷ್ಟೇ ಈ ಕಟ್ಟಡ ಕಟ್ಟಲಾಗಿದ್ದು, ಸ್ಥಳಾವಕಾಶದ ನೆಪದಲ್ಲಿ ಜನರ ತೆರಿಗೆ ಹಣದಲ್ಲಿ ನಿರ್ಮಿಸಿದ ಕಟ್ಟಡ ತೆರವು ಸಲ್ಲದು ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ. ಹಳೆ ಕಟ್ಟಡದ ಇತಿಹಾಸ
1965ರಲ್ಲಿ ಸುಳ್ಯ ತಾಲೂಕಾಗಿ ರೂಪುಗೊಂಡ ಬಳಿಕ 2018ರ ತನಕವೂ ಹೆಂಚು ಹಾಕಿದ ಹಳೆ ಕಟ್ಟಡವೇ ತಾ.ಪಂ. ಕಚೇರಿ ಕೇಂದ್ರವಾಗಿತ್ತು. ಈ ಹಳೆ ಕಟ್ಟಡ ಕೆಡವಿ ಜಿ.ಪಂ. ಕಚೇರಿ ಕಟ್ಟಡ ಮತ್ತು ನಿರ್ವಹಣ ಯೋಜನೆ ಅನುದಾನದಡಿ ಹೊಸ ಕಟ್ಟಡಕ್ಕೆ ಚಾಲನೆ ನೀಡಲಾಗಿತ್ತು. ಹಳೆ ಕಟ್ಟಡದ ಇತಿಹಾಸ ಅವಲೋಕಿಸುವುದಾದರೆ 1965ರಲ್ಲಿ 1966ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂತು. ತಾಲೂಕು ಬೋರ್ಡ್ ಎಂದು ಅದನ್ನು ಕರೆಯಲಾಗುತ್ತಿತ್ತು. ಇದರ ಕಚೇರಿ ಹಳೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. 1987ರಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಪರಿಷತ್, ಮಂಡಲ ಪಂಚಾಯತ್ ವ್ಯವಸ್ಥೆಯಲ್ಲಿ ಶಾಸಕರಿಗೆ, ಜಿಲ್ಲಾ ಪರಿಷತ್ ಸದಸ್ಯರಿಗೆ ಮತ್ತು ಮಂಡಲ ಪ್ರಧಾನರಿಗೆ ಸಂಪರ್ಕ ಕಲ್ಪಿ³ಸುವುದಕ್ಕಾಗಿ ತಾ.ಪಂ. ರಚಿಸಲಾಗಿತ್ತು. ಇದೇ ಕಟ್ಟಡದಲ್ಲಿ ಸಭೆ ನಡೆಯುತ್ತಿತ್ತು.
Related Articles
ಹೊಸ ಕಟ್ಟಡ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ಪೈಂಟಿಂಗ್ ಸಹಿತ ಅಂತಿಮ ಹಂತದ ಕೆಲಸ ಮಾತ್ರ ಬಾಕಿ ಇದೆ. ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಟ್ಟಡ ಸಿದ್ಧಗೊಳ್ಳಲಿದೆ.
– ಭವಾನಿಶಂಕರ ಎನ್. ಇಒ, ತಾ.ಪಂ. ಸುಳ್ಯ
Advertisement
ಕಿರಣ್ ಪ್ರಸಾದ್ ಕುಂಡಡ್ಕ