Advertisement
ಬೆಳಗ್ಗೆಯಿಂದ ಸಂಜೆವರೆಗೆ ಬಿಸಿಲಿತ್ತು. ಆ ಬಳಿಕ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಐವರ್ನಾಡು, ಪಂಜ, ಅರಂತೋಡು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಗುತ್ತಿಗಾರು, ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ ಮತ್ತಿತರ ಪರಿಸದಲ್ಲೂ ಉತ್ತಮ ಮಳೆಯಾಗಿದೆ.
ಅರಂತೋಡು: ಸಂಪಾಜೆ, ಕಲ್ಲುಗುಂಡಿ, ಕೊಯನಾಡು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಗೆ ಇಲ್ಲಿನ ಮನೆಯೊಂದರ ಸುತ್ತ ರಾತ್ರಿ ಹೊಳೆ ನೀರು ಆವರಿಸಿತು. ಆತಂಕಿತರಾದ ಮನೆಯವರು ಮನೆಗೆ ಬೀಗ ಹಾಕಿ ಹೊರಗೆ ನಿಂತರು. ಸಂಪಾಜೆಯ ಗ್ಯಾರೇಜ್ ಒಂದಕ್ಕೆ ನೀರು ಆವರಿಸಿ ಗ್ಯಾರೇಜ್‌ನಲ್ಲಿದ್ದ ವಾಹನಗಳನ್ನು ಸ್ಥಳೀಯರ ಸಹಕಾರದಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು.
Related Articles
ಮಂಗಳೂರು/ಉಡುಪಿ: ಕರಾವಳಿಯ ಕೆಲವು ಕಡೆ ಗಳಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಸುಳ್ಯ ಸಹಿತ ಕೆಲವು ಕಡೆ ರಾತ್ರಿ ವೇಳೆ ಗಡುಗಿ ಸಹಿತ ಮಳೆಯಾಗಿದೆ. ಹಗಲಿನಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.
Advertisement
ಉಡುಪಿ: ಹನಿ ಹನಿ ಮಳೆಉಡುಪಿ: ಜಿಲ್ಲಾದ್ಯಂತ ಬಿಸಿಲು ವಾತಾವರಣ ಮುಂದುವರಿದಿದ್ದು, ಮಂಗಳವಾರವೂ ಮಳೆ ಪ್ರಮಾಣ ತಗ್ಗಿದೆ. ಮಧ್ಯಾಹ್ನ ಅನಂತರ ಕೆಲವು ಕಡೆಗಳಲ್ಲಿ ಲಘು ಮಳೆಯಾಗಿದೆ. ಉರಿ ಸೆಕೆ
ಮಳೆ ಕಡಿಮೆಯಾದ ಕೂಡಲೇ ಕರಾವಳಿಯಾದ್ಯಂತ ಉರಿ ಬಿಸಿಲಿನ ಅನುಭವವಾಗುತ್ತಿದೆ. ಮಂಗಳವಾರ ಹಗಲಿನಲ್ಲಿ ಬೇಸಗೆಯ ರೀತಿಯ ವಾತಾವರಣವಿತ್ತು. ಮಳೆ ಚುರುಕಾಗುವ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆ ಮತ್ತು ಮೋಡದಿಂದ ಕೂಡಿದ ವಾತಾವರಣ ಇರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿಗೆ ಬುಧವಾರ ಮತ್ತು ಗುರುವಾರಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮಂಗಳೂರಿನಲ್ಲಿ 31.6 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿ ವಾಡಿಕೆಗಿಂತ 2.9 ಡಿ.ಸೆ. ಏರಿಕೆ ಮತ್ತು 25.6 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿ 2.5 ಡಿ.ಸೆ. ಏರಿಕೆ ಕಂಡಿತ್ತು.