Advertisement
ಎರಡೂ ನಗರಗಳನ್ನು ಪಕ್ಷದ ಧ್ವಜ, ಬಂಟಿಂಗ್ಸ್, ಫ್ಲೆಕ್ಸ್‌ಗಳಿಂದ ಸಿಂಗರಿಸಲಾಗಿದೆ. ಸುಳ್ಯದ ಚೆನ್ನಕೇಶವ ದೇಗುಲದ ಎದುರು ವೇದಿಕೆ ಸಿದ್ಧಗೊಂಡಿದೆ. ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ವೇದಿಕೆ ನಿರ್ಮಿಸಲಾಗಿದೆ.
ರಥ ಬಸ್‌ನ ಮುಂಭಾಗದಲ್ಲಿ ಚಾಲಕನ ಸೀಟಿನ ಪಕ್ಕದಲ್ಲೇ ಭಾಷಣ ಮಾಡುವ ಪುಟ್ಟ ವೇದಿಕೆ ನಿರ್ಮಿಸಲಾಗಿದೆ. ಬಸ್‌ನ ಒಳಗೆ ವಿಶಾಲ ಕೋಣೆಯಿದ್ದು, ಎರಡು ಸುಖಾಸೀನ ಸೋಫಾಗಳು ಮತ್ತು ಒಂದು ಬೆಡ್ ಇದೆ. ಪುಟ್ಟ ಅಡುಗೆ ಕೋಣೆ, ಇಲೆಕ್ಟ್ರಿಕ್ ಸ್ಟವ್, ಓವೆನ್, ಕೈ ತೊಳೆಯುವ ವ್ಯವಸ್ಥೆ, ಪಕ್ಕದಲ್ಲೇ ಪುಟ್ಟ ಟಾಯ್ಲೆಟ್ ವಿನ್ಯಾಸಗೊಳಿಸಿರುವುದು ವಿಶೇಷ.
Related Articles
ಶುಕ್ರವಾರ ಬೆಳಗ್ಗೆ ಸುಳ್ಯದಲ್ಲಿ ಪರಿವರ್ತನಾ ಯಾತ್ರೆ ಸಮಾವೇಶ ಮುಗಿಸಿ ಅಪರಾಹ್ನ 2.30ಕ್ಕೆ ರಥ ಯಾತ್ರೆ ಪುತ್ತೂರಿಗೆ ಆಗಮಿಸಲಿದ್ದು, ರಥವು ನಗರದ ಮುಖ್ಯರಸ್ತೆಯ ಮೂಲಕ ಸಾಗಿ ಶ್ರೀಧರ್ ಭಟ್ ಮಳಿಗೆಯ ಬಳಿಯಿಂದ ಕಿಲ್ಲೆ ಮೈದಾನಕ್ಕೆ ಬಂದು ಅಲ್ಲಿ ಅಪರಾಹ್ನ 3 ಗಂಟೆಗೆ ಸಮಾವೇಶ ನಡೆಯಲಿದೆ.
Advertisement
ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಪಕ್ಷದ ಮುಖಂಡರಲ್ಲಿದ್ದು, ಸಮಾವೇಶಕ್ಕೆ ಬರುವ ಕಾರ್ಯಕರ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆಯಲ್ಲಿ ಹಾಗೂ ತೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಾಡಲಾಗಿದೆ.
ಹಲವು ಮುಖಂಡರುಸಮಾವೇಶವಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪ್ರಮುಖರಾದ ಜಗದೀಶ್ ಶೆಟ್ಟಿರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲು, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಗಣೇಶ್ ಕಾರ್ಣಿಕ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.