Advertisement
ಕಾರ್ಮಿಕರಿಗೆ ದಿನಗೂಲಿ ಸಂಬಳವನ್ನು 702 ರೂ.ಗೆ ಹೆಚ್ಚಿಸಬೇಕು. ಸಾð್ಯಪ್ ರಬ್ಬರ್ಗೆ ಕೆ.ಜಿ.ಗೆ 10 ರೂ. ನಿಗದಿಪಡಿಸುವುದು, ಪ್ರತಿ ಬ್ಲಾಕ್‌ಗೆ ಗೊಬ್ಬರ ಹಾಕುವ ಕೆಲಸಕ್ಕೆ ಪ್ರತ್ಯೇಕ 5 ಮಾನವ ದಿನಗಳನ್ನು ವರ್ಷಕ್ಕೆ 1 ಬಾರಿ ಹಾಗೂ ಕಳೆ ಕೀಳುವ ಕೆಲಸಕ್ಕೆ ಪ್ರತ್ಯೇಕ 5 ಮಾನವ ದಿನಗಳನ್ನು ವರ್ಷಕ್ಕೆ 3 ಬಾರಿ ಪಾವತಿಸಬೇಕು. 16 ಕಾರ್ಖಾನೆ ಕಾರ್ಮಿಕರ ಅಕ್ರಮ ವರ್ಗಾವಣೆ ರದ್ದುಪಡಿಸಬೇಕು, ಮೇಸ್ತ್ರಿಗಳ ಬೇಡಿಕೆ ಕುರಿತು ಕರ್ನಾಟಕ ದಿನಗೂಲಿ ನೌಕರರ ಮಹಾ ಮಂಡಲದ ಜತೆ ಚರ್ಚಿಸಿ ವೇತನ ಶ್ರೇಣಿ ಸಹಿತ ಎಲ್ಲ ಬೇಡಿಕೆ ಇತ್ಯರ್ಥಪಡಿಸುವುದು, ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಹಂಗಾಮಿ ಕಾರ್ಮಿಕರನ್ನು ತತ್‌ಕ್ಷಣ ಖಾಯಂಗೊಳಿಸಿ ವೇತನ ಒಪ್ಪಂದದ ಸೌಲಭ್ಯ ನೀಡುವುದು, ಕಾರ್ಮಿಕರ ಗೈರುಹಾಜರಿಗೆ ಕಾನೂನು ಬಾಹಿರವಾಗಿ ದಿನದ ಇಳುವರಿಗೆ ಸಮನಾದ ಮೊತ್ತವನ್ನು ವೇತನದಿಂದ ಕಡಿತಗೊಳಿಸುವ ಪದ್ಧತಿ ಕೈಬಿಡುವುದು, ನಿಗಮದ ಸ್ಥಾಯೀ ಆದೇಶಕ್ಕೆ ವಿರುದ್ಧವಾಗಿ ಹಿಂದಿನ ಒಪ್ಪಂದದಲ್ಲಿ ಆಗಿರುವ ಶಿಸ್ತಿನ ಕ್ರಮ/ದಂಡ ವಿಧಿಸುವ ಷರತ್ತು ರದ್ದುಗೊಳಿಸುವುದು, ವೇತನ ಒಪ್ಪಂದದ ಅರಿಯರ್ಸ್ ಹಣವನ್ನು 2018 ಆ. 1ರಿಂದ ಶೇ. 100ರಂತೆ ನೀಡಬೇಕು, ಕಾರ್ಯ ನಿರ್ವಾಹಕ ನಿರ್ದೇಶಕಿ ಅವರ ವರ್ತನೆ ಬದಲಾವಣೆ ಆಗಬೇಕು ಎಂದು ಮುಖಂಡರು ಆಗ್ರಹಿಸಿದರು.
ಪ್ರತಿಭಟನೆ ನಿರತರ ಬಳಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಸುಳ್ಯ ವಿಭಾಗೀಯ ವ್ಯವಸ್ಥಾಪಕ ಬೆಳಿಯಪ್ಪ, ನಾಗಪಟ್ಟಣ ಕೆಎಫ್‌ಡಿಸಿ ವ್ಯವಸ್ಥಾಪಕ ರಂಗನಾಥ ಅವರು ಭೇಟಿ ನೀಡಿ, ಅಹವಾಲು ಆಲಿಸಿದರು. ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು. ಅನಂತರವೂ ಪ್ರತಿಭಟನೆ ಮುಂದುವರಿಯಿತು.
Related Articles
Advertisement