Advertisement

Sullia ಪರವಾನಿಗೆ ಇಲ್ಲದೆ ನಾಡ ಕೋವಿ ಹೊಂದಿದ್ದ ಪ್ರಕರಣ: ಆರೋಪ ಸಾಬೀತು : ಶಿಕ್ಷೆ

12:24 AM Nov 23, 2023 | Team Udayavani |

ಸುಳ್ಯ: ಪರವಾನಗಿ ಇಲ್ಲದೆ ನಾಡಕೋವಿ ಹೊಂದಿದ್ದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ಸುಳ್ಯ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.

Advertisement

2013ರಲ್ಲಿ ಕಣ್ಣೂರು ಜಿಲ್ಲೆಯ ಎಂ.ಕೆ. ಅಜಿತ್‌ ಅವರು ಆಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಇರುವ ಮನೆಗೆ ಪರವಾನಿಗೆ ಇಲ್ಲದ ನಾಡ ಕೋವಿ, ಗನ್‌ ಪೌಡರ್‌ ಹಾಗೂ 2 ಕಬ್ಬಿಣದ ಕಡ್ಡಿಗಳನ್ನು ತಂದಿದ್ದರು.

ಈ ವಿಚಾರ ಪೋಲೀಸರಿಗೆ ತಿಳಿದು ಆರೋಪಿಯ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು, ಅಪರಾಧ ಸಾಬೀತಾಗಿದೆ. ಸುಳ್ಯದ ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಿ.ಮೋಹನ್‌ ಬಾಬು ಅವರು ಅಪರಾಧಿಗೆ 2 ವರ್ಷಗಳ ಸರಳ ಜೈಲು ಶಿಕ್ಷೆ ಮತ್ತು ರೂ. 10,000 ದಂಡ ಪಾವತಿಯ ಶಿಕ್ಷೆ ವಿಧಿಸಿ ಆದೇಶ ಮಾಡಿದ್ದಾರೆ.

ಸರಕಾರದ ಪರವಾಗಿ ಸುಳ್ಯದ ಸಹಾಯಕ ಸರಕಾರಿ ಅಭಿಯೋಜಕರು ವಾದ ನಡೆಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next