Advertisement

Sullia: ತಲೆಮರೆಸಿಕೊಂಡಿದ್ದ ಪೋಕ್ಸೋ ಆರೋಪಿ ಸೆರೆ

12:32 AM Jan 12, 2024 | Team Udayavani |

ಸುಳ್ಯ: ಬೆಳ್ಳಾರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2019ರ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಕಳಂಜ ನಿವಾಸಿ ರಾಜೇಶನನ್ನು ಬೆಳ್ಳಾರೆ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

ತಲೆಮರೆಸಿಕೊಂಡಿದ್ದ ರಾಜೇಶನ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಬೆಳ್ಳಾರೆ ಪೊಲೀಸ್‌ ಠಾಣಾ ಉಪನಿರೀಕ್ಷಕ ಅಶೋಕ್‌ ಸಿ.ಎಂ. ಹಾಗೂ ಸಿಬಂದಿಗಳಾದ ಪ್ರವೀಣ್‌ ಬಾರ್ಕಿ ಮತ್ತು ಸಂತೋಷ್‌ ಕೆಜೆ ಅವರು ಆರೋಪಿಯನ್ನು ಕಳಂಜ ಗ್ರಾಮದ ಕಿಲಂಗೋಡಿಯಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next