Advertisement

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

12:13 AM Mar 29, 2024 | Team Udayavani |

ಸುಳ್ಯ: ಕೂಜಿಮಲೆ ಎಸ್ಟೇಟ್‌ ಪ್ರದೇಶದಲ್ಲಿ ಬುಧವಾರ ಕಾಣಿಸಿಕೊಂಡ ಮಹಿಳೆ ನಕ್ಸಲ್‌ ಅಲ್ಲ ಎಂಬುದು ಪೊಲೀಸ್‌ ತನಿಖೆಯಿಂದ ದೃಢಪಟ್ಟಿದೆ.

Advertisement

ಕೂಜಿಮಲೆ ಎಸ್ಟೇಟ್‌ನ ರಬ್ಬರ್‌ ತೋಟದಲ್ಲಿ ಬುಧವಾರ ಅಪರಿಚಿತ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಎಎನ್‌ಎಫ್‌ ತಂಡ ಹಾಗೂ ಪೊಲೀಸರು ಶೋಧ ನಡೆಸಿದ್ದರು. ಕಾರ್ಯಾಚರಣೆ ವೇಳೆ ಅಪರಿಚಿತ ಮಹಿಳೆ ಪತ್ತೆಯಾಗಿದ್ದು, ನಕ್ಸಲ್‌ ತಂಡಕ್ಕೆ ಸೇರಿದವರಲ್ಲ ಎಂಬುದು ದೃಢಪಟ್ಟಿದೆ. ಆಕೆ ರಾಜಸ್ಥಾನ ಮೂಲದವರಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ, ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಆಶ್ರಮಕ್ಕೆ ಸೇರಿಸಲಾಗುವುದು ಎಂದು ಕೊಡಗು ಎಸ್‌.ಪಿ. ತಿಳಿಸಿದ್ದಾರೆ.

ಸಂಶಯಕ್ಕೆ ಕಾರಣ
ಕೂಜಿಮಲೆ, ಐನೆಕಿದು ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಮಾಹಿತಿಯಂತೆ ನಕ್ಸಲ್‌ ನಿಗ್ರಹ ಪಡೆಯವರು ನಿರಂತರ ಶೋಧ ನಡೆಸುತ್ತಿ ದ್ದಾರೆ. ಈ ಮಧ್ಯೆ ಬುಧವಾರ ಕೂಜಿಮಲೆ ಎಸ್ಟೇಟ್‌ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿದ್ದು, ಸಂಶಯಗೊಂಡ ಸ್ಥಳೀಯರು ಪೊಲೀಸರು, ಎಎನ್‌ಎಫ್‌ಗೆ
ಮಾಹಿತಿ ನೀಡಿದ್ದರು. ಇತ್ತೀಚೆಗೆ ಅಂಗಡಿಗೆ, ಮನೆಗೆ ಭೇಟಿ ನೀಡಿದ ತಂಡದಲ್ಲೂ ಮಹಿಳೆಯರು ಇದ್ದರು ಎಂಬ ಮಾಹಿತಿಯಿಂದ ಸಹಜವಾಗಿ ಸ್ಥಳೀಯರಲ್ಲಿ ಸಂಶಯ ಮೂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next